ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಒಪ್ಪೋ F27 ಫೋನ್ ಸರಣಿ!..ಫೀಚರ್ಸ್ ಏನು?
ಜನಪ್ರಿಯ ಒಪ್ಪೋ (OPPO) ಮೊಬೈಲ್ ಸಂಸ್ಥೆಯು ಈಗಾಗಲೇ ಕೆಲವು ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಸಂಸ್ಥೆಯು ಒಪ್ಪೋ F27 ಫೋನ್ ಸರಣಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಆದರೆ ಬಿಡುಗಡೆಗೂ ಮುನ್ನವೇ ಒಪ್ಪೋ F27 ಸರಣಿಯ ಫೋನ್‌ಗಳ ಕೆಲವು ಫೀಚರ್ಸ್ ಆನ್‌ಲೈನ್ ಮೂಲಕ ಸೋರಿಕೆಯಾಗಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಈ ಸರಣಿಯ ಫೋನ್‌ಗಳು IP69 ರೇಟಿಂಗ್ ಪಡೆದಿರಲಿವೆ ಎನ್ನಲಾಗಿದೆ.
ಹೌದು, ಭಾರತದಲ್ಲಿ ಒಪ್ಪೋ ಸಂಸ್ಥೆಯು ಹೊಸದಾಗಿ ಒಪ್ಪೋ F27 ಫೋನ್ ಸರಣಿಯಲ್ಲಿ ಲಾಂಚ್ ಮಾಡಲಿದೆ. ಈ ಸರಣಿಯು ಒಪ್ಪೋ F27, ಒಪ್ಪೋ F27 ಪ್ರೊ ಹಾಗೂ ಒಪ್ಪೋ F27 ಪ್ರೊ+ ಮಾಡೆಲ್ ಸೇರಿದಂತೆ ಒಟ್ಟು ಮೂರು ಫೋನ್‌ಗಳು ಪಡೆದಿರಲಿದೆ ಎಂದು 91ಮೊಬೈಲ್ಸ್ ವರದಿ ಮಾಡಿದೆ. ಹಾಗೆಯೇ ಈ ಸರಣಿಯು ಇದೇ ಜೂನ್ 13 ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಒಪ್ಪೋ ಸಂಸ್ಥೆಯ ಬರಲಿರುವ ಒಪ್ಪೋ F27 ಪ್ರೊ+ ಫೋನ್ ಎರಡು ಕಲರ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಅವುಗಳು ಕ್ರಮವಾಗಿ ಬ್ಲೂ ಹಾಗೂ ಪಿಂಕ್ ಎಂದು ಹೇಳಲಾಗಿದೆ. ಇನ್ನು ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಮಾದರಿಯ ಕ್ಯಾಮೆರಾ ರಚನೆ ಇರಲಿದೆ. ಹಾಗಾದರೇ ಒಪ್ಪೋದ ಈ ಹಿಂದಿನ ಒಪ್ಪೋ F25 ಪ್ರೊ ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ F25 ಪ್ರೊ 5G - ಫೀಚರ್ಸ್ ಮಾಹಿತಿ
ಒಪ್ಪೋ F25 ಪ್ರೊ 5G ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, 2412×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್, ಪಾಂಡಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಈ ಫೋನ್‌ನಲ್ಲಿ ಕಾಣಬಹುದು.
ಒಪ್ಪೋ F25 ಪ್ರೊ 5G ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ ಮಾಲಿ-G68 MC4 ಜಿಪಿಯು ಸಪೋರ್ಟ್ ಸಹ ಇದೆ. ಹಾಗೆಯೇ 8GB + 128GB ಸ್ಟೋರೇಜ್ ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಸಹ ಕಾಣಬಹುದು.
ಒಪ್ಪೋ F25 ಪ್ರೊ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾ ಸೆನ್ಸರ್ ಪಡೆದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಜೊತೆಗೆ ಮೆಗಾಪಿಕ್ಸೆಲ್ OV02B10 ಸೆನ್ಸರ್ ಹೊಂದಿದೆ. ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಒಪ್ಪೋ F25 ಪ್ರೊ 5G ಮೊಬೈಲ್ 67W ಸೂಪರ್‌ವೂಕ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಇದರ ಜೊತೆಗೆ ಧೂಳು ಮತ್ತು ನೀರು ನಿರೋಧಕ (IP65) ರೇಟಿಂಗ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್/ ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಬೆಂಬಲ ಇದೆ.


Click it and Unblock the Notifications








