Home
ಸುದ್ದಿಜಾಲ

ಭರ್ಜರಿ ಬೆಲೆ ಇಳಿಕೆ ಕಂಡ 'ಒಪ್ಪೋ ಫೈಂಡ್‌ N2 ಫ್ಲಿಪ್' ಸ್ಮಾರ್ಟ್‌ಫೋನ್‌!

ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ಒಪ್ಪೋ ಭಿನ್ನ ರೇಂಜ್‌ನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚಿಗೆ ಬಿಡುಗಡೆ ಮಾಡಿರುವ ಒಪ್ಪೋ ಫೈಂಡ್‌ N2 ಫ್ಲಿಪ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಆದರೆ ಈಗ ಈ ಫೋನ್‌ ಭರ್ಜರಿ ಬೆಲೆ ಇಳಿಕೆ ಕಂಡು ಮತ್ತಷ್ಟು ಗ್ರಾಹಕರನ್ನು ಸೆಳೆಯುವಂತಾಗಿದೆ.

ಹೌದು, ಒಪ್ಪೋ ಸಂಸ್ಥೆಯ ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ 8GB RAM + 256 GB ROM ವೇರಿಯಂಟ್‌ ಆಫರ್‌ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಫೋನಿನ ಬೆಲೆಯು 99,999ರೂ. ಆಗಿದ್ದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ 89,999ರೂ.ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಬ್ಯಾಂಕ್‌ ಆಫರ್‌ ಕೂಡಾ ಲಭ್ಯವಾಗಲಿದೆ.

ಭರ್ಜರಿ ಬೆಲೆ ಇಳಿಕೆ ಕಂಡ 'ಒಪ್ಪೋ ಫೈಂಡ್‌ N2 ಫ್ಲಿಪ್' ಸ್ಮಾರ್ಟ್‌ಫೋನ್‌!

ಇನ್ನು ಒಪ್ಪೋ ಫೈಂಡ್‌ N2 ಫ್ಲಿಪ್ ಮೊಬೈಲ್‌ 4,300 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಪರ್ಪಲ್‌ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದಿದೆ. ಇನ್ನು 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಹಾಗಾದರೇ ಒಪ್ಪೋ ಫೈಂಡ್‌ N2 ಫ್ಲಿಪ್ ಫೋನಿನ ಇತರ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ : ಒಪ್ಪೋ ಫೈಂಡ್‌ N2 ಫ್ಲಿಪ್ ಮೊಬೈಲ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪ್ರೈಮೆರಿ ಡಿಸ್‌ಪ್ಲೇ ಪಡೆದಿದ್ದು, 1,080 x 2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10+ ಬೆಂಬಲಿಸಲಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದಲ್ಲದೆ ಈ ಫೋನ್‌ 3.26 ಇಂಚಿನ ಕವರ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಪೋರ್ಟ್‌ ಪಡೆದಿದೆ.

ಪ್ರೊಸೆಸರ್‌ ಮಾಹಿತಿ : ಒಪ್ಪೋ ಫೈಂಡ್‌ N2 ಫ್ಲಿಪ್ ಫೋಲ್ಡಬಲ್‌ ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಓಎಸ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 256 GB ಮತ್ತು 16 GB RAM ಮತ್ತು 512 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

ಕ್ಯಾಮೆರಾ ಸೆನ್ಸಾರ್‌ : ಒಪ್ಪೋ ಫೈಂಡ್‌ N2 ಫ್ಲಿಪ್ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX890 ಸೆನ್ಸಾರ್‌, ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್ ಶೂಟರ್ ಅನ್ನು ಪಡೆದಿದೆ. ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಇದಲ್ಲದೆ ಈ ಫೋನ್‌ನ ಹಿಂಬದಿಯ ಕ್ಯಾಮೆರಾಗಳನ್ನು ಮಾರಿಸಿಲಿಕಾನ್ X ಇಮೇಜಿಂಗ್ NPU ಸಪೋರ್ಟ್‌ ಪಡೆದಿದೆ.

ಬ್ಯಾಟರಿ ಬ್ಯಾಕ್‌ಅಪ್‌ : ಒಪ್ಪೋ ಫೈಂಡ್‌ N2 ಫ್ಲಿಪ್ ಮೊಬೈಲ್‌ 4,300 mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 44W ಸೂಪರ್‌ವೂಕ್‌ ಚಾರ್ಜಿಂಗ್‌ ಸಪೋರ್ಟ್‌ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS ಮತ್ತು USB ಟೈಪ್-C ಪೋರ್ಟ್‌ ಸೌಲಭ್ಯಗಳು ಇವೆ.

Best Mobiles in India

English summary
Oppo Find N2 Flip Big price drop on Flipkart. offer price and specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+