Home
ಸುದ್ದಿಜಾಲ

ನಾಳೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಲಾಂಚ್; ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ!

ಒಪ್ಪೋ ಸಂಸ್ಥೆಯು ಈ ವರ್ಷ ಹೊಸ ಪ್ರಯತ್ನ ಮಾಡಿದ್ದು, ಫ್ಲಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಸಜ್ಜಾಗಿದೆ. ಅದುವೇ ಒಪ್ಪೋ ಫೈಂಡ್‌ N2 ಫ್ಲಿಪ್‌ ( Oppo Find N2 Flip) ಸ್ಮಾರ್ಟ್‌ಫೋನ್‌ ಆಗಿದೆ. ಬರಲಿರುವ ಈ ನೂತನ ಸ್ಮಾರ್ಟ್‌ಫೋನ್‌ ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡಲಿದ್ದು, ಆಕರ್ಷಕ ಕಲರ್‌ಗಳ ಆಯ್ಕೆ ಪಡೆದಿರಲಿದೆ. ಒಟ್ಟಾರೇ ಗ್ರಾಹಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ.

ನಾಳೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಲಾಂಚ್; ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ

ಹೌದು, ಒಪ್ಪೋ ಮೊಬೈಲ್‌ ಸಂಸ್ಥೆಯು ಹೊಸದಾಗಿ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಕಳೆದ ವರ್ಷದ ಅಂತ್ಯದ ವೇಳೆ ಚೀನಾದಲ್ಲಿ ಅನಾವರಣ ಮಾಡಿತ್ತು. ಆದ್ರೆ ಈ ಫೋನ್‌ ಅನ್ನು ಅನ್ನು ಇದೇ ಫೆಬ್ರವರಿ 15 ರಂದು ಭಾರತ ಸೇರಿದಂತೆ ಗ್ಲೋಬಲ್‌ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇನ್ನು ಈ ಫೋನ್ ಬಿಡುಗಡೆ ಕಾರ್ಯಕ್ರಮವು ರಾತ್ರಿ 8:30 ಗಂಟೆಗೆ ನಡೆಯಲಿದ್ದು, ಆಸಕ್ತ ಗ್ರಾಹಕರು ಕಾರ್ಯಕ್ರಮದ ಲೈವ್‌ ಸ್ಟ್ರೀಮಿಂಗ್‌ ಅನ್ನು ಅಧಿಕೃತ ಒಪ್ಪೋ ಸೋಶಿಯಲ್‌ ಮೀಡಿಯಾ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

ನಾಳೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಲಾಂಚ್; ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ

ಅಂದಹಾಗೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, 16GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿದ್ದು, 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಹಾಗಾದರೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ : ಡಿಸ್‌ಪ್ಲೇ ರಚನೆ

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ AMOLED ಡಿಸ್‌ಪ್ಲೇ ಹೊಂದಿದ್ದು, ಇದು 1,080 × 2,520 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 120Hz ಅಡಾಪ್ಟಿವ್ ರಿಫ್ರೆಶ್‌ ರೇಟ್‌ ಪಡೆದಿದೆ. ಇದರೊಂದಿಗೆ ಈ ಫೋನ್ ಪ್ಯಾನಲ್‌ನಲ್ಲಿ 3.62 ಇಂಚಿನ ವಿಶೇಷ ಡಿಸ್‌ಪ್ಲೇ ಸಹ ಹೊಂದಿದೆ.

ನಾಳೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಲಾಂಚ್; ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ : ಪ್ರೊಸೆಸರ್‌ ಪವರ್‌

ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್‌ ಸಹ ಆಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್‌ 13.0 ನಲ್ಲಿ ರನ್‌ ಆಗಲಿದೆ. ಹಾಗೆಯೇ ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ 8GB + 256GB, 12GB + 256GB ಮತ್ತು 16GB + 512GB ನ ಮೂರು ವೇರಿಯಂಟ್‌ನಲ್ಲಿ ಲಭ್ಯ.

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ : ಡ್ಯುಯಲ್‌ ಕ್ಯಾಮೆರಾ

ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ದಲ್ಲಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.

ನಾಳೆ ಒಪ್ಪೋ ಫೈಂಡ್‌ N2 ಫ್ಲಿಪ್‌ ಲಾಂಚ್; ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ : ಬ್ಯಾಟರಿ ಬ್ಯಾಕ್‌ಅಪ್‌

ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದೂ ಸಹ 44W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಒಳಗೊಂಡಿದೆ.

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ : ಬೆಲೆ?..ಬಣ್ಣದ ಆಯ್ಕೆ

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸುಮಾರು 82,999ರೂ. ಗಳ ಆರಂಭಿಕ ಬೆಲೆ ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ. ಅಂದಹಾಗೆ ಈ ಫೋನ್ ಪಿಂಕ್ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿರಲಿದೆ.

Best Mobiles in India

English summary
Oppo Find N2 Flip smartphones will launch globally and in India on February 15. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+