Oppo Find N2 Flip : ಒಪ್ಪೋ ಫೈಂಡ್ N2 ಫ್ಲಿಪ್ ಖರೀದಿಸಲು ಯೋಚಿಸುವ ಮುನ್ನ ಈ ಸಂಗತಿ ತಿಳಿಯಿರಿ!
ಒಪ್ಪೋ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್ ಭಾರತ ಸೇರಿದಂತೆ ಗ್ಲೋಬಲ್ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಿದೆ. ಬಿಡುಗಡೆಗೂ ಮುನ್ನವೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ ಈ ಸ್ಮಾರ್ಟ್‌ಫೋನ್ ಆಸಕ್ತಿಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಫ್ಲಿಪ್ ಮಾದರಿಯ ರಚನೆಯನ್ನು ಹೊಂದಿದ್ದು, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದೇ?.

ಈಗಾಗಲೇ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಫ್ಲಿಪ್ ಮಾದರಿಯ ಫೋನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಒಪ್ಪೋದ ನೂತನ ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಸ್ಯಾಮ್‌ಸಂಗ್‌ನ ನೂತನ ಫ್ಲಿಪ್ ಫೋನಿಗೆ ಪೈಪೋಟಿ ನೀಡುವ ರೇಂಜ್‌ನಲ್ಲಿದೆಯಾ?.ಎನ್ನುವ ಪ್ರಶ್ನೆ ಮೂಡುತ್ತದೆ. ಅದಾಗ್ಯೂ ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್ ಹೊಂದಿದ್ದು, ಡಿಸೈನ್, ಕ್ಯಾಮೆರಾ ಹಾಗೂ ಡಿಸ್‌ಪ್ಲೇ ಆಯ್ಕೆಗಳಿಂದ ಗಮನ ಸೆಳೆದಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಡ್ಯುಯಲ್ ಸ್ಕ್ರೀನ್ ರಚನೆಯನ್ನು ಪಡೆದಿದೆ. 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಹಾಗಾದರೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಈ ಫ್ಲಿಪ್ ಸ್ಮಾರ್ಟ್‌ಫೋನ್ ಬಗ್ಗೆ ನೀವು ತಿಳಿಯಬೇಕಾದ ಕೆಲವು ಸಂಗತಿಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗಮನ ಸೆಳೆವ ಡಿಸೈನ್
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ತೆಳುವಾದ ರಚನೆಯನ್ನು ಹೊಂದಿದ್ದು, ಹಾಗೆಯೇ ಹಗುರವಾಗಿಯೂ ಇದೆ. ಈ ಫೋನ್ 191 ಗ್ರಾಮ್‌ನಷ್ಟು ತೂಕವನ್ನು ಒಳಗೊಂಡಿದ್ದು, 7.45mm ನಷ್ಟು ದಪ್ಪವಾದ ರಚನೆಯನ್ನು ಇದು ಪಡೆದುಕೊಂಡಿದೆ. ಹಾಗೆಯೇ ಸ್ಟೈಲಿಶ್ ಲುಕ್ ಇದರ ಪ್ಲಸ್ ಪಾಯಿಂಟ್ ಆಗಿದೆ.
ಕವರ್ ಸ್ಕ್ರೀನ್ ಹೈಲೈಟ್
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಡ್ಯುಯಲ್ ಸ್ಕ್ರೀನ್ ರಚನೆಯನ್ನು ಪಡೆದಿದ್ದು, ಮುಖ್ಯ ಸ್ಕ್ರೀನ್ 6.8 ಇಂಚಿನಲ್ಲಿದೆ. ಹಾಗೆಯೇ ಇದು 3.26 ಇಂಚಿನ ಕವರ್ ಸ್ಕ್ರೀನ್ ಅನ್ನು ಪಡೆದಿದ್ದು, 720 x 382 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಗೂಗಲ್ ಪೇ, ಫೋನ್ ಪೇ ಹಾಗೂ ಇತರೆ ನೋಟಿಫಿಕೇಶನ್‌ಗಳನ್ನು ಸೆಕೆಂಡ್ ಸ್ಕ್ರೀನ್ ಮೂಲಕ ತ್ವರಿತವಾಗಿ ಗಮನಿಸಬಹುದು.
ಪವರ್‌ಫುಲ್ 5G ಸಪೋರ್ಟ್ ಪ್ರೊಸೆಸರ್
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್ ಸಹ ಆಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್ 13.0 ನಲ್ಲಿ ರನ್ ಆಗಲಿದೆ. ಈ ಪ್ರೊಸೆಸರ್ ಪವರ್‌ಫುಲ್ ಕಾರ್ಯವೈಖರಿಗೆ ಪೂರಕವಾಗಿದ್ದು, 5G ಸಪೋರ್ಟ್ ಪಡೆದಿದೆ.

ಜಬರ್ದಸ್ತ್ ಕ್ಯಾಮೆರಾ ಫೀಚರ್ಸ್
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಸೋನಿಯ IMX 709 ಸೆನ್ಸಾರ್ ರಚನೆಯನ್ನು ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಇದ್ದು, ಇದು ಸಹ ಸೋನಿಯ IMX 709 ಸೆನ್ಸಾರ್ ಒಳಗೊಂಡಿದೆ.
23 ನಿಮಿಷದಲ್ಲಿ 50% ಬ್ಯಾಟರಿ ಭರ್ತಿ
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 44W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ. ಜಸ್ಟ್ 23 ನಿಮಿಷದಲ್ಲಿ 50% ಬ್ಯಾಟರಿ ಭರ್ತಿ ಆಗಲಿದ್ದು, ಸುಮಾರು ಒಂದು ಗಂಟೆಯ ಒಳಗೆ ಪೂರ್ಣ ಬ್ಯಾಟರಿ ಫುಲ್ ಆಗಲಿದೆ.
RAM, ಬೆಲೆ, ಕಲರ್ ಆಯ್ಕೆ
ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಇದರ ಬೆಲೆಯು ಅಂದಾಜು ಸುಮಾರು 84,000ರೂ. ಇರಬಹುದು ಎಂದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್ ಬ್ಲ್ಯಾಕ್ ಹಾಗೂ ಪರ್ಪಲ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








