Home
ಸುದ್ದಿಜಾಲ

ನಾಳೆ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ ಫಸ್ಟ್‌ ಸೇಲ್‌!..ಬೆಲೆ OMG!

ಒಪ್ಪೋ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೂತನ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಈಗಾಗಲೇ ಡಿಸೈನ್, ಬೆಲೆ ಮತ್ತು ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್‌ ಫ್ಲಿಪ್‌ಕಾರ್ಟ್‌, ಒಪ್ಪೋ ಸ್ಟೋರ್‌ ಹಾಗೂ ಪ್ರಮುಖ ರಿಟೇಲ್‌ ಸ್ಟೋರ್‌ಗಳ ಮೂಲಕ (ನಾಳೆ) ಅಕ್ಟೋಬರ್ 22 ರಂದು ಮೊದಲ ಬಾರಿಗೆ ಮಾರಾಟ ಆರಂಭಿಸಲಿದೆ.

ಹೌದು, ಒಪ್ಪೋ ಸಂಸ್ಥೆಯ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ ನಾಳೆ ಮಾರಾಟ ಪ್ರಾರಂಭಿಸಲಿದ್ದು, ಖರೀದಿಗೆ ಲಭ್ಯ ವಾಗಲಿದೆ. ಈ ಮೊಬೈಲ್‌ 94,999ರೂ. ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆದರೆ 82,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇನ್ನು ಈ ಫೋನ್‌ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ. ಹಾಗಾದರೆ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಾಳೆ ಒಪ್ಪೋ ಫೈಂಡ್‌ N3 ಫ್ಲಿಪ್ ಫೋನ್‌ ಫಸ್ಟ್‌ ಸೇಲ್‌!..ಬೆಲೆ OMG!

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 6.8 ಇಂಚಿನ ಫುಲ್‌ HD LTPO AMOLED ಇನರ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080x2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ರೇಟ್‌ ಪಡೆದಿದೆ. ಇನ್ನು ಮೊಬೈಲ್‌ 3.26 ಇಂಚಿನ ಕವರ್‌ ಡಿಸ್‌ಪ್ಲೇಯನ್ನು ಸಹ ಹೊಂದಿದ್ದು, ಕವರ್‌ ಡಿಸ್‌ಪ್ಲೇಯು ಅಮೋಲೆಡ್‌ ಪ್ಯಾನಲ್‌ ಅನ್ನು ಹೊಂದಿದ್ದು, 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದೆ.

ಪ್ರೊಸೆಸರ್‌ ಕಾರ್ಯ ಯಾವುದು

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಒಪ್ಪೋದ ColorOS 13.2 ಸ್ಕಿನ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ARM ಇಮ್ಮಾರ್ಟಲಿಸ್-G715 MC11 GPU ಅನ್ನು ಹೊಂದಿದೆ. ಈ ಮೊಬೈಲ್‌ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಕ್ಯಾಮೆರಾ ರಚನೆ ಹೇಗಿದೆ

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯೊಂದಿಗೆ ಬರುವ ಮೊದಲ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಆಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಪಡೆದಿದೆ. ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 44W SuperVOOC ಚಾರ್ಜಿಂಗ್‌ಗೆ ಸಪೋರ್ಟ್ ನೀಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಗೈರೊಸ್ಕೋಪ್ ಸೆನ್ಸಾರ್‌ ಒಳಗೊಂಡಿದೆ. ಇದಲ್ಲದೆ ಈ ಫೋನ್‌ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್ ರಚನೆ ಅನ್ನು ಒಳಗೊಂಡಿದೆ.

ಕಲರ್‌ ಹಾಗೂ ಮೆಮೊರಿ ಆಯ್ಕೆ

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 12GB + 256GB RAM ವೇರಿಯಂಟ್‌ ಆಯ್ಕೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಫೋನ್‌ ಅಕ್ಟೋಬರ್ 22 ರಿಂದ ಒಪ್ಪೋದ ಅಧಿಕೃತ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶದಾದ್ಯಂತ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯ.

Best Mobiles in India

English summary
OPPO Find N3 Flip will go on sale starting October 22. price and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+