Home
ಸುದ್ದಿಜಾಲ

oppo: ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್‌ ಲಾಂಚ್‌; ವಿಭಿನ್ನ ಫೀಚರ್ಸ್‌ ಆಯ್ಕೆ, ಬೆಲೆ ಎಷ್ಟು?

ಒಪ್ಪೋ ಸ್ಮಾರ್ಟ್‌ಫೋನ್‌ (Oppo smartphone) ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಭಿನ್ನ ವಿಭಿನ್ನ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಈ ನಡುವೆ ಒಪ್ಪೋ ಫೈಂಡ್ N3 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ (Oppo Find N3 foldable smartphone) ಅನ್ನು ಲಾಂಚ್ ಮಾಡಲಾಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಕಾಣಿಸಿಕೊಂಡಿದೆ.

ಹೌದು, ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಾಗಿದೆ. ಈ ಫೋನ್ ಕಳೆದ ವರ್ಷದ ಒಪ್ಪೋ ಫೈಂಡ್‌ N2 ನ (Oppo Find N2) ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿದೆ. ಅದೇ ರೀತಿ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ (Snapdragon 8 Gen 2 processor) ಬಲ ಪಡೆದುಕೊಂಡಿದ್ದು, ಫ್ಲೆಕ್ಸಿಯಾನ್ ಹಿಂಜ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

oppo: ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್‌ ಲಾಂಚ್‌; ವಿಭಿನ್ನ ಫೀಚರ್ಸ್‌ ಆಯ್ಕೆ..

ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 426ppi ಪಿಕ್ಸೆಲ್ ಸಾಂದ್ರತೆ ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 7.82 ಇಂಚಿನ 2K ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 2,268 x 2,440 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಇದು LTPO 3.0 ಅಮೋಲೆಡ್‌ ಡಿಸ್‌ಪ್ಲೇಯಾಗಿದೆ.

ಇನ್ನು ಈ ಫೋನ್‌ನ ಒಳಗಿನ ಡಿಸ್‌ಪ್ಲೇ 6.31 ಇಂಚಿನ 2K ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 1,116x2,484 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಮತ್ತು 431ppi ಪಿಕ್ಸೆಲ್ ಸಾಂದ್ರತೆ ಹೊಂದಿದ್ದು, 2,800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದರಲ್ಲಿದೆ. ಈ ಡಿಸ್‌ಪ್ಲೇ ಅಲ್ಟ್ರಾ-ಥಿನ್ ಗ್ಲಾಸ್ (UTG) ರಕ್ಷಣೆಯನ್ನು ಪಡೆದಿದೆ.

ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಪ್ರೊಸೆಸರ್‌ ಮಾಹಿತಿ: ಈ ಹೊಸ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ ಬಲದೊಂದಿಗೆ ಅಡ್ರಿನೊ 740 ಜಿಪಿಯು (Adreno 740 GPU) ಮೂಲಕ ಜೊತೆಗೆ ಸಜ್ಜುಗೊಳಿಸಿದೆ. ಇದರೊಂದಿಗೆ ಆಂಡ್ರಾಯ್ಡ್ 13 ನಲ್ಲಿನ ಕಲರ್‌ಓಸ್‌ 13 ಅನ್ನು ರನ್ ಮಾಡುತ್ತದೆ. ಹಾಗೆಯೇ 16GB RAM ಹಾಗೂ 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಈ ಸ್ಮಾರ್ಟ್‌ಫೋನ್‌ ಕಾಣಿಸಿಕೊಂಡಿದೆ.

ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್ ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರದಲ್ಲಂತೂ ಈ ಫೋನ್‌ ಒಂದು ಕೈ ಮೇಲಿದೆ ಎಂದರೆ ತಪ್ಪಾಗಲಾರದು. ಇದು ಹ್ಯಾಸೆಲ್‌ಬ್ಲಾಡ್-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ (Triple rear camera) ರಚನೆ ಪಡೆದಿದ್ದು, 48 ಮೆಗಾಪಿಕ್ಸೆಲ್ ಸೋನಿ ಸೆನ್ಸರ್‌, 3x ಆಪ್ಟಿಕಲ್ ಜೂಮ್‌ನೊಂದಿಗೆ 64 ಮೆಗಾಪಿಕ್ಸೆಲ್ ಓಮ್ನಿವಿಷನ್ OV64B ಸೆನ್ಸರ್‌ ಹಾಗೂ 48 ಮೆಗಾಪಿಕ್ಸೆಲ್ ಸೋನಿ IMX581 ಸೆನ್ಸರ್‌ ಆಯ್ಕೆಯೊಂದಿಗೆ ಸಜ್ಜುಗೊಂಡಿದ್ದು, ಒಳಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ಹೊರಗೆ 32 ಮೆಗಾಪಿಕ್ಸೆಲ್ ಸೆಕೆಂಡರಿ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್ ಬ್ಯಾಟರಿ ರಚನೆ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 67W ಸೂಪರ್‌ವೂಕ್‌ 2.0 ವೇಗದ ಚಾರ್ಜಿಂಗ್ ಬೆಂಬಲದ 4,805mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 7, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಎ-ಜಿಪಿಎಸ್‌ , ಎನ್‌ಎಫ್‌ಸಿ,ಗ್ಲೋನಾಸ್, ಗೆಲಿಲಿಯೋ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.

ಉಳಿದಂತೆ ಈ ಫೋಲ್ಡಬಲ್ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದ್ದು, ಫೇಸ್ ಅನ್‌ಲಾಕ್ ಫೀಚರ್ಸ್‌ ಅನ್ನೂ ಸಹ ಬೆಂಬಲಿಸುತ್ತದೆ. ಜೊತೆಗೆ ಫೋನ್‌ನಲ್ಲಿ ರಿಂಗ್, ಮ್ಯೂಟ್ ಮತ್ತು ಸೈಲೆಂಟ್ ಮೋಡ್‌ಗಳನ್ನು ಕಂಟ್ರೋಲ್‌ ಮಾಡಲು ಒನ್‌ಪ್ಲಸ್‌ನ ಟ್ರೈ-ಸ್ಟೇಟ್ ಅಲರ್ಟ್ ಸ್ಲೈಡರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಫ್ಲೆಕ್ಸಿಯಾನ್ ಹಿಂಜ್ ಮೂಲಕ ಫೋಲ್ಡಬಲ್‌ ಫೋನ್‌ ವಿಭಾಗದಲ್ಲಿ ವಿಶೇಷ ಎನಿಸಿದೆ.

oppo: ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್‌ ಲಾಂಚ್‌; ವಿಭಿನ್ನ ಫೀಚರ್ಸ್‌ ಆಯ್ಕೆ..
ಒಪ್ಪೋ ಫೈಂಡ್‌ N3 ಫೋಲ್ಡಬಲ್‌ ಫೋನ್‌ ಬೆಲೆ ಹಾಗೂ ಲಭ್ಯತೆ: 16GB + 256GB ಸ್ಟೋರೇಜ್ ಮಾದರಿಗೆ SGD 2,399 ಅಂದರೆ ಭಾರತದಲ್ಲಿ ಸರಿಸುಮಾರು 1,45,300ರೂ.ಗಳನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಷಾಂಪೇನ್ ಗೋಲ್ಡ್ ಮತ್ತು ಕ್ಲಾಸಿಕ್ ಬ್ಲಾಕ್‌ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಬರ್ 20 ರಿಂದ ಸಿಂಗಾಪುರದಲ್ಲಿ ಮುಂಗಡ ಕೋರಿಕೆಗೆ ಲಭ್ಯ ಇದೆ. ಭಾರತದಲ್ಲಿ ಈ ಫೋನ್‌ ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ.
Best Mobiles in India

English summary
Oppo Find N3 foldable smartphone has been launched. This phone appears to be the successor of last year's Oppo Find N2. this phone has Snapdragon 8 Gen 2 processor has got power.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+