Home
ಸುದ್ದಿಜಾಲ

ಜೂನ್ 17ರಂದು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಒಪ್ಪೋ ಫೈಂಡ್‌ X2 ಸರಣಿ!

ಜನಪ್ರಿಯ ಮೊಬೈಲ್ ಸಂಸ್ಥೆಗಳಲ್ಲೊಂದಾದ ಓಪ್ಪೋ ಸಂಸ್ಥೆಯು ಮೇ ತಿಂಗಳಿನಲ್ಲಿ ಯುರೋಪ್‌ ಬಿಡುಗಡೆ ಮಾಡಿರುವ ಫೈಂಡ್‌ X2 ಸ್ಮಾರ್ಟ್‌ಫೋನ್ ಸರಣಿಯು ಈಗಾಗಲೆ ಗ್ರಾಹಕರು ಗಮನ ಸೆಳೆದಿದೆ. ಓಪ್ಪೋ ಸಂಸ್ಥೆಯು ಈ ಫೈಂಡ್ X2 ಸ್ಮಾರ್ಟ್‌ಫೋನ್ ಸರಣಿಯನ್ನು ಇದೀಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಹೂರ್ತ ನಿಗದಿ ಮಾಡಿಕೊಂಡಿದೆ. ಈ ಸರಣಿಯು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಫೈಂಡ್‌ X2 ಸ್ಮಾರ್ಟ್‌ಫೋನ್ ಸರಣಿಯನ್ನು ಇದೇ ಜೂನ್ 17ರಂದು ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ಸರಣಿಯು ಫೈಂಡ್ X2 ಮತ್ತು ಫೈಂಡ್ X2 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳು ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾಗಳು ಸೋನಿ IMX689 ಸೆನ್ಸಾರ್‌ನೊಂದಿಗೆ 48ಎಂಪಿ ಕ್ಯಾಮೆರಾ ಹೊಂದಿವೆ. ಇನ್ನುಳಿದ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫೈಂಡ್‌ X2 ಡಿಸ್‌ಪ್ಲೇ

ಫೈಂಡ್‌ X2 ಡಿಸ್‌ಪ್ಲೇ

ಫೈಂಡ್ X2 ಫೋನ್ 1440 x 3168 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು QHD+ ಅಮೋಲೆಡ್‌ ಡಿಸ್‌ಪ್ಲೇ ಆಗಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಹಾಗೂ 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್‌ ಗೋರಿಲ್ಲಾ ಗ್ಲಾಸ್‌6 ಅನ್ನು ಒಳಗೊಂಡಿದೆ.

ಫೈಂಡ್‌ X2 ಪ್ರೊಸೆಸರ್‌

ಫೈಂಡ್‌ X2 ಪ್ರೊಸೆಸರ್‌

ಫೈಂಡ್‌ X2 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865 SoC ಪ್ರೊಸೆಸರ್‌ ಹೊಂದಿದ್ದು, ಕಲರ್‌ OS ಒಳಗೊಂಡ ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಅಡ್ರಿನೊ 650 GPU ಅನ್ನು ಒಳಗೊಂಡಿದೆ. ಇದಲ್ಲದೆ 12GB RAM ಮತ್ತು 256GB ಆಂತರಿಕ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ಫೈಂಡ್‌ X2 ಕ್ಯಾಮೆರಾ

ಫೈಂಡ್‌ X2 ಕ್ಯಾಮೆರಾ

ಫೈಂಡ್‌ X2 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೋನಿ IMX586 ಸೆನ್ಸಾರ್‌ ಮತ್ತು f/1.7ಲೆನ್ಸ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆಕೆಂಡರಿ ಸೋನಿ IMX708 ಸೆನ್ಸಾರ್‌ ಮತ್ತು f/2.2 ಲೆನ್ಸ್‌ ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಫೈಂಡ್‌ X2 ಬ್ಯಾಟರಿ

ಫೈಂಡ್‌ X2 ಬ್ಯಾಟರಿ

ಫೈಂಡ್‌ X2 ಸ್ಮಾರ್ಟ್‌ಫೋನ್‌ 4,200mAh ಸಾಮರ್ಥ್ಯ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ 65W ಸೂಪರ್‌VOOC 2.0 ಫ್ಲ್ಯಾಶ್‌ ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಇದು ಹೊಂದಿದೆ.

ಫೈಂಡ್‌ X2 ಪ್ರೊ ಡಿಸ್‌ಪ್ಲೇ

ಫೈಂಡ್‌ X2 ಪ್ರೊ ಡಿಸ್‌ಪ್ಲೇ

ಫೈಂಡ್‌ X2 ಪ್ರೊ ಸ್ಮಾರ್ಟ್‌ಫೋನ್‌ 1440x3168 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು QHD+ ಅಲ್ಟ್ರಾ ವಿಷನ್‌ ಡಿಸ್‌ಪ್ಲೇ ಆಗಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 6 ಅನ್ನು ನೀಡಲಾಗಿದೆ.

ಫೈಂಡ್‌ X2 ಪ್ರೊ ಪ್ರೊಸೆಸರ್‌

ಫೈಂಡ್‌ X2 ಪ್ರೊ ಪ್ರೊಸೆಸರ್‌

ಒಪ್ಪೋ ಫೈಂಡ್‌ X2 ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ ಕ್ವಾಲ್ಕಾಮ್‌ 865 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಅಡ್ರಿನೊ 650 GPU ಹೊಂದಿದೆ. ಇದಲ್ಲದೆ 12GB RAM ಮತ್ತು 512GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ಫೈಂಡ್‌ X2 ಪ್ರೊ ಕ್ಯಾಮೆರಾ

ಫೈಂಡ್‌ X2 ಪ್ರೊ ಕ್ಯಾಮೆರಾ

ಒಪ್ಪೋ ಫೈಂಡ್‌ X2 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೋನಿ IMX689 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾ 10x ಹೈಬ್ರಿಡ್ ಜೂಮ್ ಮತ್ತು 60 X ಡಿಜಿಟಲ್ ಜೂಮ್ ಬೆಂಬಲವನ್ನು ಹೊಂದಿದೆ. ಅಲ್ಲದೆ 32 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಫೈಂಡ್‌ X ಪ್ರೊ ಬ್ಯಾಟರಿ

ಫೈಂಡ್‌ X ಪ್ರೊ ಬ್ಯಾಟರಿ

ಫೈಂಡ್‌ X2 ಪ್ರೊ ಸ್ಮಾರ್ಟ್‌ಫೋನ್‌ 4,260mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು ಕೂಡ 65W ಸೂಪರ್‌VOOC 2.0 ಫ್ಲ್ಯಾಶ್‌ ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ V5.1, ಹಾಟ್‌ಸ್ಪಾಟ್‌, GPS, NFC, ಮತ್ತು ಯುಎಸ್‌ಬಿ ಟೈಪ್-ಸಿ ಫೋರ್ಟ್ ಅನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ ಫೈಂಡ್‌ X2ಪ್ರೊ ಸ್ಮಾರ್ಟ್‌ಫೋನ್‌ ಬೆಲೆ EUR 1,199 (ಭಾರತದಲ್ಲಿ 1,67,300.ರೂ ಎಂದು ಅಂದಾಜಿಸಲಾಗಿದೆ) ಆಗಿದ್ದು, ಇನ್ನು ಒಪ್ಪೋ ಫೈಂಡ್‌ X2 ಸ್ಮಾರ್ಟ್‌ಫೋನ್‌ EUR 999 (83,400.ರೂ ಎಂದು ಊಹಿಸಲಾಗಿದೆ). ಬ್ಲ್ಯಾಕ್‌, ಆರೇಂಜ್‌ , ಓಶಿಯನ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿವೆ.

Best Mobiles in India

English summary
Oppo India on Wednesday announced that the Find X2 series smartphones will officially land on the Indian shores on June 17.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+