Home
ಸುದ್ದಿಜಾಲ

Oppo: ಒಪ್ಪೋದ ಈ ಪ್ರೀಮಿಯಂ ಫೋನ್‌ ಖರೀದಿಯಲ್ಲಿ ಭಾರೀ ಉಳಿತಾಯ ಪಕ್ಕಾ! 12GB RAM... 48MP ಕ್ಯಾಮೆರಾ

ಒಪ್ಪೋ (Oppo) ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿವೆ. ಈ ನಡುವೆ ಒಪ್ಪೋ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ವಿಚಾರ ದೊಡ್ಡ ಸೌಂಡ್‌ ಮಾಡುತ್ತಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ 12GB RAM ಆಯ್ಕೆ ಇರುವ ಒಪ್ಪೋದ ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗೆ ಭಾರೀ ಆಫರ್ ನೀಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡಿದ್ದ ಹಾಗೂ ಈ ಕ್ಷಣಕ್ಕೂ ದೊಡ್ಡ ಬೇಡಿಕೆ ಇರುವ ಒಪ್ಪೋ ಫೈಂಡ್‌ X2 ಸ್ಮಾರ್ಟ್‌ಫೋಗೆ ನ್‌ (Oppo Find X2 smartphone) 18% ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 48MP ಮುಖ್ಯ ಕ್ಯಾಮೆರಾ ಸೆನ್ಸರ್‌, ಸ್ನಾಪ್‌ಡ್ರಾಗನ್ 865 ಚಿಪ್‌ಸೆಟ್ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂಬುದನ್ನು ಗಮನಿಸಿ.

ಒಪ್ಪೋದ ಈ ಪ್ರೀಮಿಯಂ ಫೋನ್‌ ಖರೀದಿಯಲ್ಲಿ ಭಾರೀ ಉಳಿತಾಯ ಪಕ್ಕಾ! 12GB RAM...

ಒಪ್ಪೋ ಫೈಂಡ್‌ X2 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.7 ಇಂಚಿನ ಕ್ವಾಡ್ ಹೆಚ್‌ಡಿ+ ರೆಸಲ್ಯೂಶನ್‌ನ ಅಮೋಲೆಡ್‌ ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇ 1440×3168 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 513PPI ಮತ್ತು 19.8:9 ಆಕಾರ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ.

ಒಪ್ಪೋ ಫೈಂಡ್‌ X2 ಪ್ರೊಸೆಸರ್‌ ಮಾಹಿತಿ: ಈ ಫೋನ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಅಡ್ರಿನೋ 650 GPU ಬಲ ಪಡೆದುಕೊಂಡಿದೆ. ಹಾಗೆಯೇ ಅಂಡ್ರಾಯ್ಡ್‌ 10 ನಿಂದ ಕಲರ್ OS7.1 ಓಎಸ್‌ ಅನ್ನು ರನ್‌ ಮಾಡಲಿದೆ. ಪ್ರಮುಖವಾಗಿ ಫೋನ್ 12GB RAM ಆಯ್ಕೆ ಪಡೆದಿದ್ದು, ಗೇಮಿಂಗ್‌ ಹಾಗೂ ವಿಡಿಯೋ ವೀಕ್ಷಣೆ ಅನುಭವದಲ್ಲಿ ಅತ್ಯುತ್ತಮವಾದ ಅನುಭವ ಪಡೆದುಕೊಳ್ಳಬಹುದಾಗಿದೆ.

ಒಪ್ಪೋ ಫೈಂಡ್‌ X2 ಕ್ಯಾಮೆರಾ ರಚನೆ: ಇನ್ನು ಈ ವಿಶೇಷ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 48 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌, 13 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದರ ಜೊತೆಗೆ ವಿಡಿಯೋ ಚಾಟ್‌ಗಳು ಮತ್ತು ಸೆಲ್ಫಿಗಳಿಗಾಗಿ 32 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒಪ್ಪೋದ ಈ ಪ್ರೀಮಿಯಂ ಫೋನ್‌ ಖರೀದಿಯಲ್ಲಿ ಭಾರೀ ಉಳಿತಾಯ ಪಕ್ಕಾ! 12GB RAM...

ಒಪ್ಪೋ ಫೈಂಡ್‌ X2 ಬ್ಯಾಟರಿ ಹಾಗೂ ಇತರೆ: ಈ ಫೋನ್ 4200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 30W ವೇಗದ ವೈರ್‌ಲೆಸ್ ಚಾರ್ಜಿಂಗ್ ಮತ್ತು 65W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.1, A2DP, LE,ಯುಎಸ್‌ಬಿ ಟೈಪ್‌ ಸಿ 3.1, ಓಟಿಜಿ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

ಒಪ್ಪೋ ಫೈಂಡ್‌ X2 ಆಫರ್‌ ಬೆಲೆ ವಿವರ: ಈ ಫೋನ್ 69,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆಫರ್‌ ಬೆಲೆ 57,500 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ಅಮೆಜಾನ್ ಈ ಫೋನ್‌ಗೆ 18% ರಷ್ಟು ರಿಯಾಯಿತಿ ನೀಡಿದೆ. ಇಷ್ಟೇ ಅಲ್ಲದೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಆಫರ್ ಮೂಲಕ ನೀವು 50,000 ವರೆಗೆ ಹಣ ಉಳಿಸಬಹುದು. ಇನ್ನೂ ಹಣ ಉಳಿತಾಯ ಮಾಡಬೇಕು ಎಂದರೆ ಬ್ಯಾಂಕ್‌ ಕಾರ್ಡ್‌ ಆಫರ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಒಪ್ಪೋದ ಈ ಪ್ರೀಮಿಯಂ ಫೋನ್‌ ಖರೀದಿಯಲ್ಲಿ ಭಾರೀ ಉಳಿತಾಯ ಪಕ್ಕಾ! 12GB RAM...

ಬ್ಯಾಂಕ್‌ ಆಫರ್ ವಿಚಾರಕ್ಕೆ ಬರುವುದಾದ್ರೆ ಈ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 10% ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಜೊತೆಗೆ ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 5% ತ್ವರಿತ ರಿಯಾಯಿತಿ ಸಿಗಲಿದೆ.

Best Mobiles in India

English summary
Oppo Find X2 smartphone got 18% discount in amazon. This smartphone has got a 48MP main camera sensor, Snapdragon 865 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+