ಒಪ್ಪೋ ಫೈಂಡ್ X2: ವೇಗದ ಕಾರ್ಯವೈಖರಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್!

|

ಒಪ್ಪೋ ಮೊಬೈಲ್ ಸಂಸ್ಥೆಯು ಈಗಾಗಲೆ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳಲ್ಲಿ ಕೆಲವು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಒಪ್ಪೊ ಫೈಂಡ್‌ ಎಕ್ಸ್‌ 2 ಸರಣಿಯು 5G ಆವೃತ್ತಿಯನ್ನು ಒಳಗೊಂಡಿದ್ದು, ಹಾಗೆಯೇ ನೂತನ ಫೀಚರ್ಸ್‌ಗಳಿಂದ ಸದ್ಯ ಉತ್ತಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಒಪ್ಪೋ ಫೈಂಡ್ ಎಕ್ಸ್ 2

ಒಪ್ಪೋ ಫೈಂಡ್ ಎಕ್ಸ್ 2 ಸರಣಿಯು 5G-ಆಪ್ಟಿಮೈಸ್ಡ್ ಡಿವೈಸ್‌ಗಳ ಪ್ರಮುಖ ಶ್ರೇಣಿಯನ್ನು ಹೊಂದಿದೆ. ಈ ಫೋನ್ 120Hz ಅಲ್ಟ್ರಾ-ಹೈ ರಿಫ್ರೆಶ್ ರೇಟ್, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಚಿಪ್ಸೆಟ್, ಹೆಚ್ಚಿನ ಸೆನ್ಸಾರ್ ಕ್ಯಾಮೆರಾ ಸೌಲಭ್ಯಗಳನ್ನು ಪಡೆದಿದೆ. ವಿಶ್ವದ ಮೊದಲ ವಾಣಿಜ್ಯ ಮತ್ತು ವೇಗದ 65W ಸೂಪರ್ ವೂಕ್ 2.0 ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವುದು ಪ್ರಮುಖ ಆಕರ್ಷಣೆ ಆಗಿದೆ. ಇದರೊಂದಿಗೆ ಒಪ್ಪೋ ಫೈಂಡ್ ಎಕ್ಸ್ 2 ಸ್ಮಾರ್ಟ್‌ಫೋನಿನ ಗಮನಸೆಳೆದ ಇನ್ನಷ್ಟು ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಸಲಾಗಿದೆ.

QHD+ ಡಿಸ್‌ಪ್ಲೇ

QHD+ ಡಿಸ್‌ಪ್ಲೇ

ಒಪ್ಪೋ ಫೈಂಡ್ ಎಕ್ಸ್ 2 ಫೋನ್ 3168 x 1440 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 513ppi ಆಗಿದ್ದು, ಹಾಗೆಯೇ 120Hz ಅಲ್ಟ್ರಾ ಹೈ ರಿಫ್ರೆಶ್ ದರ ಮತ್ತು 240Hz ಸ್ಯಾಂಪಲ್ ದರವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಮೊದಲ ಬಾರಿಗೆ QHD + ಬಾಗಿದ OLED ಪರದೆಯೊಂದಿಗೆ ಹೊಂದಿದ್ದು, ಉತ್ತಮ-ದರ್ಜೆಯ ಟಚ್ ಸೆನ್ಸಾರ್ ದರವನ್ನು ಹೊಂದಿದ್ದು, ರಿಫ್ರೆಶ್ ದರ ಫಲಕವು ಸ್ಪರ್ಶ ಪ್ರತಿಕ್ರಿಯೆ ವಿಳಂಬವನ್ನು 7.4 ms ನಿಂದ 4.2 ಎಂಎಸ್ ಮಟ್ಟಕ್ಕೆ ಕಡಿಮೆ ಮಾಡುತ್ತದೆ. ವೆಬ್ ಪುಟಗಳು, ಇನ್‌ಸ್ಟಾಗ್ರಾಮ್ / ಫೇಸ್‌ಬುಕ್ ಟೈಮ್‌ಲೈನ್ ಅನ್ನು ಬ್ರೌಸ್ ಮಾಡಬಹುದು ಮತ್ತು ಶೂನ್ಯ ವಿಳಂಬ ಮತ್ತು ಸುಪ್ತತೆಯೊಂದಿಗೆ ಆಟಗಳನ್ನು ಆಡಬಹುದು.

ಉತ್ತಮ ವಿಡಿಯೊ ಪ್ಲೇಬ್ಯಾಕ್

ಉತ್ತಮ ವಿಡಿಯೊ ಪ್ಲೇಬ್ಯಾಕ್

ಒಪ್ಪೋ ಫೈಂಡ್ ಎಕ್ಸ್ 2 ಫೋನ್ ಡಿಸ್‌ಪ್ಲೇ ಕ್ವಾಲಿಟಿಯು ಉತ್ತಮವಾಗಿದ್ದು, ಪ್ರತಿ ಚಿತ್ರ, ವಿಡಿಯೊಗಳು 3K QHD+ ಗುಣಮಟ್ಟದಲ್ಲಿ ಕಾಣಿಸಿಕೊಳ್ಳುತ್ತವೆ. ಮಲ್ಟಿಮೀಡಿಯಾ ಸೌಲಭ್ಯಗಳಿಗೂ ಇದರ ಡಿಸ್‌ಪ್ಲೇ ಹೆಚ್ಚು ಪೂರಕವಾಗಿದೆ. ಈ ಫೋನಿನ ಡಿಸ್‌ಪ್ಲೇ 19.8: 9 ಆಕಾರ ಅನುಪಾತವನ್ನು ಹೊಂದಿರುವ ಬಾಗಿದ ಮತ್ತು ಅಂಚಿಲ್ಲದ ಸ್ಕ್ರೀನ್‌ ವಿಡಿಯೊ ಪ್ಲೇಬ್ಯಾಕ್ ಅನುಭವವನ್ನು ಉತ್ತಮಗೊಳಿಸುತ್ತದೆ. ಈ ಫೋನಿನಲ್ಲಿನ ಮೋಷನ್ ಕ್ಲಿಯರ್ ವಿಡಿಯೊ ಮೋಷನ್ ತಂತ್ರಜ್ಞಾನವು ಮತ್ತಷ್ಟು ರೋಚಕತೆಯನ್ನು ನೀಡುತ್ತದೆ.

ಕಲರ್ ಎಕ್ಯುರೆನ್ಸಿ ಡಿಸ್‌ಪ್ಲೇ

ಕಲರ್ ಎಕ್ಯುರೆನ್ಸಿ ಡಿಸ್‌ಪ್ಲೇ

ಒಪ್ಪೋ ಫೈಂಡ್ ಎಕ್ಸ್ 2 ಫೋನ್ JNDC rating of ≈0.4 ಕಲರ್ ಎಕ್ಯುರೇಟ್ ಡಿಸ್‌ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ನಾಚುರಲ್ ಟೋನ್ ಡಿಸ್‌ಪ್ಲೇ ಮೋಡ್ ಆಯ್ಕೆಯು ಕಲರ್ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ. ಕಲರ್ ಟೆಂಪ್ರೆಚರ್ ಬದಲಿಸುವ ಆಯ್ಕೆ ಇರುತ್ತದೆ. ಬ್ರೈಟ್ನೆಸ್ 1200nits ಹೊಂದಿದ್ದು, ಸೂರ್ಯನ ಬೆಳಕಿನ ಕಿರಣಗಳು ಸ್ಕ್ರೀನ್‌ ಮೇಲೆ ಬಿದ್ದಾಗಲೂ ಡಿಸ್‌ಪ್ಲೇ ಉತ್ತಮವಾಗಿ ಕಾಣಿಸಲಿದೆ. TÜV Rheinland ಆಯ್ಕೆಯು ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.

ವೃತ್ತಿಪರ ಕ್ಯಾಮೆರಾ ವ್ಯವಸ್ಥೆ

ವೃತ್ತಿಪರ ಕ್ಯಾಮೆರಾ ವ್ಯವಸ್ಥೆ

ಒಪ್ಪೋ ಫೈಂಡ್ ಎಕ್ಸ್ 2 ಫೋನ್ ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48 ಎಂಪಿ ವೈಡ್-ಆಂಗಲ್ ಲೆನ್ಸ್, ಸೆಕೆಂಡಿರಿ ಕ್ಯಾಮೆರಾ 12 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಗಿದೆ. ಇನ್ನು ತೃತೀಯ ಕ್ಯಾಮೆರಾವು 13 ಎಂಪಿ ಟೆಲಿಫೋಟೋ ಲೆನ್ಸ್ ಸಂಯೋಜನೆಯನ್ನು ಒಳಗೊಂಡಿದೆ. ವಿಡಿಯೊಗಳು 4K ಗುಣಮಟ್ಟದಲ್ಲಿ ಮೂಡಿಬರಲಿವೆ. ಈ ಕ್ಯಾಮೆರಾ ರಚನೆಯು 5x ಹೈಬ್ರಿಡ್ ಜೂಮ್ ಮತ್ತು 20x ಡಿಜಿಟಲ್ ಜೂಮ್ ಬೆಂಬಲದ ಆಯ್ಕೆ ಪಡೆದಿವೆ. ಈ ಎಲ್ಲಾ ಮೂರು ಕ್ಯಾಮೆರಾ ಸಂವೇದಕಗಳು ಬಣ್ಣ ವಿಜ್ಞಾನವನ್ನು ಕರಗತ ಮಾಡಿಕೊಂಡಿವೆ.

ವೇಗದ ಚಾರ್ಜಿಂಗ್ ಸೌಲಭ್ಯ

ವೇಗದ ಚಾರ್ಜಿಂಗ್ ಸೌಲಭ್ಯ

ಒಪ್ಪೋ ಫೈಂಡ್ ಎಕ್ಸ್ 2 ಫೋನ್ 4,200mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ವಿಶ್ವದ ಮೊದಲ ವಾಣಿಜ್ಯೀಕೃತ ಮತ್ತು ವೇಗದ 65W ಸೂಪರ್‌ವೂಸಿ 2.0 ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಸುಮಾರು 38 ನಿಮಿಷಗಳಲ್ಲಿ ಫೋನ್ ಪೂರ್ಣ ರೀಚಾರ್ಜ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಒಮ್ಮೆ ಫೋನ್ ಪೂರ್ಣ ಚಾರ್ಜ್ ಪಡೆದರೇ ಎಷ್ಟೇ ಫೋನ್ ಬಳಕೆ ಮಾಡಿದರೂ ಒಂದು ದಿನದ ಮಟ್ಟಿಗೆ ಬ್ಯಾಕ್‌ಅಪ್ ಸಿಗಲಿದೆ.

ಪವರ್‌ಫುಲ್ ಪ್ರೊಸೆಸರ್‌

ಪವರ್‌ಫುಲ್ ಪ್ರೊಸೆಸರ್‌

ಒಪ್ಪೋ ಫೈಂಡ್ ಎಕ್ಸ್ 2 ಫೋನ್ ಕ್ವಾಲ್ಕಮ್‌ ಉನ್ನತ-ಶ್ರೇಣಿಯ SoC- ಸ್ನಾಪ್ಡ್ರಾಗನ್ 825 ಪ್ರೊಸೆಸರ್ ಅನ್ನು ಪಡೆದಿದೆ. 12GB RAM ಬೆಂಬಲದೊಂದಿಗೆ 256 GB ಆಂತರಿಕ ಸ್ಟೋರೇಜ್‌ನ ಸಾಮರ್ಥ್ಯವನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಕಾರ್ಯವೈಖರಿ ವೇಗವಾಗಿರಲಿದೆ. ಮಲ್ಟಿಪಲ್ ಕೆಲಸಗಳು ಸಹ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯುತ್ತದೆ. ಇದರೊಂದಿಗೆ Adreno 650 GPU ಸೌಲಭ್ಯವು ಈ ಫೋನ್‌ ಹೊಂದಿದೆ. ಗೇಮಿಂಗ್ ಮೋಡ್ ಆಯ್ಕೆಯು ಇದೆ.

ಸುರಕ್ಷತೆಯ ಫೀಚರ್ಸ್‌

ಸುರಕ್ಷತೆಯ ಫೀಚರ್ಸ್‌

ಒಪ್ಪೋ ಫೈಂಡ್ X2 ಫೋನ್ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಈ ಫೋನಿನಲ್ಲಿ ಕೆಲವು ಸೌಲಭ್ಯ ಒದಗಿಸಿದೆ. ವೈಯಕ್ತಿಕ ಮಾಹಿತಿ ಮತ್ತು ಸರ್ಕಾರಿ ದಾಖಲೆಗಳಿಗೆ ಸಾಫ್ಟ್‌ ಕಾಪಿಗಾಗಿ ಡಿಜಿಲಾಕರ್ ಆಪ್‌ ನೀಡಿದೆ. ಹಾಗೆಯೇ ಆನ್‌ಲೈನ್‌ ಪೇಮೆಂಟ್‌ ಆಯ್ಕೆಗಳಾದ ಗೂಗಲ್ ಪೇ, ಪೇಟಿಎಂ ಸೇರಿದಂತೆ ಮುಂತಾದ ಅಪ್ಲಿಕೇಶನ್‌ಗಳನ್ನು ಒದಗಿಸಿದೆ. ಹಾಗೆಯೇ ಇನ್‌-ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸಾರ್ ಹಾಗೂ ಫೇಸ್‌ ಅನ್‌ಲಾಕ್‌ ಸೌಲಭ್ಯವನ್ನು ಪಡೆದಿದೆ.

5G ನೆಟವರ್ಕ್ ಸೌಲಭ್ಯ

5G ನೆಟವರ್ಕ್ ಸೌಲಭ್ಯ

ಹಾಗೆಯೆ 360 ಡಿಗ್ರಿ ಸರೌಂಡ್ ಆಂಟೆನಾ ಗುಂಪು ವಿನ್ಯಾಸವನ್ನು ಬಳಸುತ್ತದೆ. ಈ ಫೋನಿನ 12 RAM + 256GBಆರಂಭಿಕ ಬೆಲೆ ರೂ. 64,999.ರೂ ಆಗಿದೆ. ಇನ್ನು ಒಪ್ಪೋ ಫೈಂಡ್ ಎಕ್ಸ್ 2 ಫೋನ್ ಕಪ್ಪು ಸೆರಾಮಿಕ್ ಮತ್ತು ಓಷನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಜೂನ್ 23 ರಿಂದ ಮಾರಾಟ ಶುರುಮಾಡಿದೆ.

Best Mobiles in India

English summary
The OPPO Find X2 Series brings flagship lineup of 5G-optimized devices that feature the class-leading QHD+ curved displays.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X