ಒಪ್ಪೊ ಫೈಂಡ್ X3 ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಒಪ್ಪೊ ಸಂಸ್ಥೆಯು ತನ್ನ ಜನಪ್ರಿಯ ಫೈಂಡ್ ಸರಣಿಯಲ್ಲಿ ಈಗ ಮತ್ತೆ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೈಂಡ್ ಸರಣಿಯು ಒಪ್ಪೊ ಒಪ್ಪೋ ಫೈಂಡ್ x3 ಪ್ರೊ, ಒಪ್ಪೊ ಫೈಂಡ್ x3 ನಿಯೋ ಮತ್ತು ಒಪ್ಪೊ ಫೈಂಡ್ x3 ಲೈಟ್ ಹೆಸರಿನ ಮೂರು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಲುಕ್ ಹೊಂದಿದ್ದು, ಹೈ ಕ್ಯಾಮೆರಾ ಸೆನ್ಸಾರ್ ಸಾಮರ್ಥ್ಯ ಪಡೆದಿವೆ.

ಹೌದು, ಒಪ್ಪೊ ಸಂಸ್ಥೆಯು ಇದೀಗ ನೂತನವಾಗಿ ಫೈಂಡ್ x3 ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೂರು ಮಾಡೆಲ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಒಪ್ಪೋ ಫೈಂಡ್ x3 ಪ್ರೊ ಸ್ನ್ಯಾಪ್‌ಡ್ರಾಗನ್ 888 SoC ಹೊಂದಿದ್ದರೇ, ಫೈಂಡ್ x3 ನಿಯೋ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ ಒಪ್ಪೊ ಫೈಂಡ್ x3 ಲೈಟ್ ಫೋನ್ ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್ ಅನ್ನು ಪಡೆದಿದೆ. ಇನ್ನುಳಿದಂತೆ ಈ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒಪ್ಪೊ ಫೈಂಡ್ x3 ಪ್ರೊ - ಫೀಚರ್ಸ್
ಒಪ್ಪೊ ಫೈಂಡ್ x3 ಪ್ರೊ ಫೋನ್ 1,440x3,216 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.7 ಡಿಸ್‌ಪ್ಲೇ ಹೊಂದಿದೆ. ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ಇದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಒಪ್ಪೊ ಫೈಂಡ್ x3 ನಿಯೋ - ಫೀಚರ್ಸ್
ಒಪ್ಪೊ ಫೈಂಡ್ x3 ನಿಯೋ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.5 ಡಿಸ್‌ಪ್ಲೇ ಹೊಂದಿದೆ. ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಇದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿರಲಿದೆ. ಹಾಗೆಯೇ ಈ ಫೋನ್ ಸಹ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಒಪ್ಪೊ ಫೈಂಡ್ x3 ಲೈಟ್ - ಫೀಚರ್ಸ್
ಒಪ್ಪೊ ಫೈಂಡ್ x3 ನಿಯೋ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.44 ಡಿಸ್‌ಪ್ಲೇ ಹೊಂದಿದೆ. ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್ ಇರಲಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಸಹ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,300mAh ಬ್ಯಾಟರಿಯನ್ನು ಪಡೆದಿದ್ದು, 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications




