ಒಪ್ಪೋ ಫೈಂಡ್ X5 ಪ್ರೊ ಫೋನ್ ಫೀಚರ್ಸ್‌ ಲೀಕ್; ಕುತೂಹಲ ಮೂಡಿಸಿದ ಕ್ಯಾಮೆರಾ!

|

ಒಪ್ಪೋ ಮೊಬೈಲ್‌ ಕಂಪನಿಯು ಬಜೆಟ್‌ ದರದಲ್ಲಿ ಹಲವು ಭಿನ್ನ ಶ್ರೇಣಿಯಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾಡಿ ಸೈ ಅನಿಸಿಕೊಂಡಿದೆ. ಅದರಲ್ಲಿ ಒಪ್ಪೋ ಫೈಂಡ್ ಸರಣಿಯ ಕೆಲವು ಫೋನ್‌ಗಳು ಗ್ರಾಹಕರನ್ನು ಸೆಳೆದಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಒಪ್ಪೋ ಸಂಸ್ಥೆಯು ಅದೇ ಸರಣಿಯಲ್ಲಿ ಮತ್ತೆ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ. ಅದುವೇ ಒಪ್ಪೋ ಫೈಂಡ್ X5 ಪ್ರೊ (Oppo Find X5 Pro) ಸ್ಮಾರ್ಟ್‌ಫೋನ್ ಆಗಿದ್ದು, ಈ ಸ್ಮಾರ್ಟ್‌ಫೋನಿನ ಲೀಕ್ ಫೀಚರ್ಸ್‌ಗಳು ಈಗ ಕುತೂಹಲ ಮೂಡಿಸಿವೆ.

ಒಪ್ಪೋ ಫೈಂಡ್ X5 ಪ್ರೊ ಫೋನ್ ಫೀಚರ್ಸ್‌ ಲೀಕ್; ಕುತೂಹಲ ಮೂಡಿಸಿದ ಕ್ಯಾಮೆರಾ!

ಹೌದು, ಒಪ್ಪೋ ಮೊಬೈಲ್ ಸಂಸ್ಥೆಯು ಸದ್ಯ ಒಪ್ಪೋ ಫೈಂಡ್ X5 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಉತ್ಸುಕವಾಗಿದೆ. ಲಾಂಚ್‌ಗೂ ಮೊದಲೇ ಈ ಫೋನಿನ ಬ್ಯಾಟರಿ ಮತ್ತು ಕ್ಯಾಮೆರಾ ಫೀಚರ್ ಸೇರಿದಂತೆ ಕೆಲವು ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಫೋನ್‌ ಪ್ರಿಯ ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ 80W ವೇಗದ ಚಾರ್ಜಿಂಗ್ ಬೆಂಬಲವನ್ನು ದೃಢಪಡಿಸಿದೆ.

ಒಪ್ಪೋ ಫೈಂಡ್ X5 ಪ್ರೊ ಫೋನ್ ಫೀಚರ್ಸ್‌ ಲೀಕ್; ಕುತೂಹಲ ಮೂಡಿಸಿದ ಕ್ಯಾಮೆರಾ!

ಲೀಕ್ ಮಾಹಿತಿ ಪ್ರಕಾರ ಒಪ್ಪೋ ಫೈಂಡ್ X5 ಪ್ರೊ ಸ್ಮಾರ್ಟ್‌ಫೋನ್ 4500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಈ ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಹೊಂದಿರಲಿದ್ದು, ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾಗಳು ಇರುತ್ತವೆ ಎಂದು ಸೋರಿಕೆಯಾದ ಚಿತ್ರ ತೋರಿಸಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಜೊತೆಗೆ ಇತ್ತೀಚಿನ MariSilicon X ಚಿಪ್ ಸೆಟ್‌ ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಇನ್ನು ಈ ಫೋನ್ 6.78 ಇಂಚಿನ 120Hz AMOLED ಡಿಸ್‌ಪ್ಲೇಗಳೊಂದಿಗೆ ಬರಬಹುದು ಎನ್ನಲಾಗಿದೆ. ಜೊತೆಗೆ ಉತ್ತಮ ರೆಸಲ್ಯೂಶನ್‌ ಇರಲಿದೆ. ಒಪ್ಪೋ ಫೈಂಡ್ X5 ಪ್ರೊ ನಲ್ಲಿನ ಹಿಂಬದಿಯ ಮೂರು ಕ್ಯಾಮೆರಾಗಳು ಇರಲಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸಂವೇದಕ ಹೊಂದಿರಲಿದೆ. 50 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸಂವೇದಕ ಇರಲಿದೆ ಮತ್ತು ತೈತೀಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರಬಹುದು ಎನ್ನಲಾಗಿದೆ.

ಒಪ್ಪೋ ಫೈಂಡ್ X5 ಪ್ರೊ ಫೋನ್ ಫೀಚರ್ಸ್‌ ಲೀಕ್; ಕುತೂಹಲ ಮೂಡಿಸಿದ ಕ್ಯಾಮೆರಾ!

ಹಾಗೆಯೇ ಒಪ್ಪೋ ಇತ್ತೀಚಿಗೆ ನೂತನವಾಗಿ ಒಪ್ಪೋ ಹೊಸ A36 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 1,600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ LCD HD+ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಕಲರ್‌ ಒಎಸ್‌ 11.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ ಒಪ್ಪೋ A36 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
Oppo Find X5 Pro's Camera, Battery and Other Features Leaked: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X