Home
ಸುದ್ದಿಜಾಲ

ವಿಶ್ವದ ಅತ್ಯುತ್ತಮ ಕ್ಯಾಮೆರಾ ಫೋನ್‌ ಇದು; ಇದರ ಮುಂದೆ ಐಫೋನ್‌, ಸ್ಯಾಮ್‌ಸಂಗ್ ಏನೇನೂ ಅಲ್ಲ!

ಸಾಮಾನ್ಯವಾಗಿ ಉತ್ತಮ ಕ್ಯಾಮೆರಾ ಫೋನ್‌ಗಳು ಎಂದರೆ ಯಾರೇ ಆದರೂ ಆಪಲ್‌, ಸ್ಯಾಮ್‌ಸಂಗ್ ಫೋನ್‌ಗಳ ಕಡೆ ಕೈತೋರಿಸುತ್ತಾರೆ. ಯಾಕೆಂದರೆ ಇವು ಮಾರುಕಟ್ಟೆಯಲ್ಲಿ ಅಂತಹ ಕ್ರೇಜ್‌ ಸೃಷ್ಟಿ ಮಾಡಿವೆ. ಆದರೆ, ಜಗತ್ತಿನಲ್ಲೇ ಬೆಸ್ಟ್ ಕ್ಯಾಮೆರಾ ಫೀಚರ್ ಇರುವ ಫೋನ್ ಖಂಡಿತವಾಗಿಯೂ ಮೇಲೆ ತಿಳಿಸಿದ ಬ್ರ್ಯಾಂಡ್‌ನ ಫೋನ್‌ ಅಲ್ಲ.

ಹೌದು, ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ಹೆಚ್ಚು ಕ್ಯಾಮೆರಾ ಆಧಾರಿತ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಇವು ಬಳಕೆದಾರರಿಗೆ ಹಲವು ಅನುಕೂಲ ನೀಡುತ್ತಿವೆ. ಈ ನಡುವೆ ಸ್ಮಾರ್ಟ್‌ಫೋನ್‌ ಪ್ರಿಯರು ಅಚ್ಚರಿಗೆ ಒಳಗಾಗುವ ಹಾಗೆ ಯಾವ ಸ್ಮಾರ್ಟ್‌ಫೋನ್ ವಿಶ್ವದ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಹೊಂದಿದೆ ಎನ್ನುವ ವಿಷಯ ಹೊರಬಿದ್ದಿದೆ. ಈ ಮೂಲಕ ಟೆಕ್‌ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ.

ಅತ್ಯುತ್ತಮ ಕ್ಯಾಮೆರಾ ಫೋನ್‌ ಇದು; ಇದರ ಮುಂದೆ ಐಫೋನ್‌, ಸ್ಯಾಮ್‌ಸಂಗ್ ಏನೇನೂ ಅಲ್ಲ

ಜಗತ್ತಿನ ಬೆಸ್ಟ್‌ ಕ್ಯಾಮೆರಾ ಫೀಚರ್ಸ್‌ ಹೊಂದಿರುವ ಫೋನ್ ಇದು: ಈ ಮೊದಲು ಬೆಸ್ಟ್‌ ಕ್ಯಾಮೆರಾ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್ ಯಾವುದು ಎಂದು ಕೇಳಿದರೆ ಥಟ್ಟನೆ ಹೇಳುತ್ತಿದ್ದದ್ದು ಐಫೋನ್, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಆದರೆ, ಈ ಮೂರು ಫೋನ್‌ಗಳನ್ನು ಹಿಂದಿಕ್ಕಿರುವ ಒಪ್ಪೋದ ಸ್ಮಾರ್ಟ್‌ಫೋನ್‌ ಹೊಸ ದಾಖಲೆ ಬರೆದಿದೆ.

ನೀವು ಖಂಡಿತಾ ನಿರೀಕ್ಷೆ ಮಾಡಿದ ಬ್ರ್ಯಾಂಡ್ ಈಗ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಂಡಿದೆ. ಕ್ಯಾಮೆರಾ ಬೆಂಚ್‌ಮಾರ್ಕಿಂಗ್ ಸೈಟ್ DXOMARK ಪ್ರಕಾರ, ಒಪ್ಪೋ ಫೈಂಡ್‌ X6 ಪ್ರೊ(OPPO Find X6 Pro) ಅನ್ನು ವಿಶ್ವದ ಅತ್ಯುತ್ತಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಹೊಂದಿರುವ ಡಿವೈಸ್‌ ಆಗಿ ಆಯ್ಕೆ ಮಾಡಲಾಗಿದೆ.

ಈ ಮೂಲಕ ಜಗತ್ತಿನಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ ಒಪ್ಪೋ ಫೈಂಡ್‌ X6 ಪ್ರೊ ಸೇರಿಕೊಂಡಿದೆ. ಅಂದರೆ ಅಲ್ಟ್ರಾ ಪ್ರೀಮಿಯಂ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಪ್ರೀಮಿಯಂ ಸ್ಮಾರ್ಟ್ ಫೋನ್ DXOMARK ನಿಂದ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಪ್ರಶಸ್ತಿಯನ್ನು ಮುಡಿಗೇರಿಕೊಂಡಿರುವುದು ವಿಶೇಷವಾದ ಸಂಗತಿ.

ಯಾವೆಲ್ಲಾ ಫೋನ್‌ಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು?: ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ ಸ್ಪರ್ಧೆಯಲ್ಲಿ ಒಪ್ಪೋ ಫೈಂಡ್‌ X6 ಪ್ರೊ ಸ್ಮಾರ್ಟ್‌ಫೋನ್‌ನೊಂದಿಗೆ ಐಫೋನ್‌ 14 ಪ್ರೊ ಮ್ಯಾಕ್ಸ್‌ ಮತ್ತು ಗೂಗಲ್‌ ಪಿಕ್ಸೆಲ್‌ 7 ಪ್ರೊ ಸೇರಿದಂತೆ ವಿವಿಧ ಉತ್ತಮ ಶ್ರೇಣಿಯ ಫೋನ್‌ಗಳು ಭಾಗಿಯಾಗಿದ್ದವು. ಆದರೆ, ಒಪ್ಪೋ ಫೋನ್ ಒಟ್ಟಾರೆ ಕ್ಯಾಮೆರಾ ಸ್ಕೋರ್ 153 ಅನ್ನು ಪಡೆದುಕೊಂಡು ಅಗ್ರ ಸ್ಥಾನ ಪಡೆದಿದೆ.

ಈ ಸ್ಪರ್ಧೆಯಲ್ಲಿ ಪರೀಕ್ಷಿಸಿದ ವಿಷಯಗಳಾಗುವುವು?: ಈ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ವಿಭಾಗದಲ್ಲಿ ಫೋನ್‌ಗಳ ವಿಡಿಯೋ ಹಾಗೂ ಚಿತ್ರಗಳ ಗುಣಮಟ್ಟವನ್ನು ಪರಿಶೀಲಿಸಲಾಗಿದೆ. ಜೊತೆಗೆ ಕಡಿಮೆ ಬೆಳಕಿನಲ್ಲಿ ಫೋಟೊ ಹಾಗೂ ವಿಡಿಯೋ ಸೆರೆಹಿಡಿಯಲಾಗಿದೆ. ಇದರಲ್ಲಿ ಒಪ್ಪೋದ ಫೋನ್‌ ಅತ್ಯುತ್ತಮವಾದ ಚಿತ್ರಗಳನ್ನು ನೀಡಿದೆ. ಈ ಕಾರಣಕ್ಕೆ ಜಗತ್ತಿನ ಎರಡು ದೈತ್ಯ ಸ್ಮಾರ್ಟ್‌ಫೋನ್‌ಗಳನ್ನೇ ಸೋಲಿಸಿ ಮೊದಲ ಪ್ರಶಸ್ತಿ ಪಡೆದುಕೊಂಡಿದೆ.

ಅತ್ಯುತ್ತಮ ಕ್ಯಾಮೆರಾ ಫೋನ್‌ ಇದು; ಇದರ ಮುಂದೆ ಐಫೋನ್‌, ಸ್ಯಾಮ್‌ಸಂಗ್ ಏನೇನೂ ಅಲ್ಲ

ಒಪ್ಪೋ ಫೈಂಡ್‌ X6 ಪ್ರೊ ಕ್ಯಾಮೆರಾ ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ ಈ ಸಾಧನೆಯನ್ನು ಮಾಡಿದೆ ಎಂದರೆ ಇದರ ಕ್ಯಾಮೆರಾ ಸೆನ್ಸರ್‌ಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಅದರಂತೆ ಈ ಫೋನ್ OIS ನೊಂದಿಗೆ 50MP ಪ್ರಾಥಮಿಕ ಸೆನ್ಸರ್‌, 50MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ ಹಾಗೂ 50MP ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32MP ಕ್ಯಾಮೆರಾ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ.

ಅದಾಗ್ಯೂ ಮಾರುಕಟ್ಟೆಯಲ್ಲಿ ಐಫೋನ್‌ 14 ಪ್ರೊ ಹಾಗೂ ಮ್ಯಾಕ್ಸ್‌, ಗೂಗಲ್‌ ಪಿಕ್ಸೆಲ್‌ 6a, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ, ಐಫೋನ್ 13 ಪ್ರೊ ಹಾಗೂ ಮ್ಯಾಕ್ಸ್‌, ಒನ್‌ಪ್ಲಸ್‌ 11 ಪ್ರೊ 5G ಮತ್ತು ಒಪ್ಪೋ ಫೈಂಡ್‌ X5 ಪ್ರೊ ಸೇರಿದಂತೆ ವಿವಿಧ ಸ್ಮಾರ್ಟ್‌ಫೋನ್‌ಗಳು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಾಗಿವೆ.

Best Mobiles in India

English summary
Oppo Find X6 Pro is recognized as the phone with the best camera features in the world. According to camera benchmarking site DXOMARK, Oppo Find X6 Pro has been selected as the device with the best smartphone camera in the world and won the award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+