Home
ಸುದ್ದಿಜಾಲ

Oppo: ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಕ್ಯಾಮೆರಾದೊಂದಿಗೆ ಒಪ್ಪೋದ ಈ ಫೋನ್‌? ಮಾರುಕಟ್ಟೆಯಲ್ಲಿ ಸುನಾಮಿ!

ಒಪ್ಪೋ ಸ್ಮಾರ್ಟ್‌ಫೋನ್‌ಗಳು (Oppo smartphone) ಜಾಗತಿಕವಾಗಿ ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿವೆ. ಈಗಾಗಲೇ ಒಪ್ಪೋ ಭಿನ್ನ ರೀತಿಯ ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ತನ್ನ ಗ್ರಾಹಕರನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಈ ನಡುವೆ 'ಜಗತ್ತಿನಲ್ಲೇ ಮೊದಲು' ಎಂಬ ಕೀರ್ತಿ ಪಡೆಯುವ ಕೆಲಸ ಮಾಡುತ್ತಿದೆ.

ಹೌದು, ಒಪ್ಪೋ ಫೈಂಡ್‌ X7 ಪ್ರೊ (Oppo Find X7 Pro) ಫೋನ್‌ ಬಗ್ಗೆ ಈಗಾಗಲೇ ಸಾಕಷ್ಟು ವಿವರಗಳು ಲಭ್ಯ ಆಗಿವೆ. ಆದರೆ, ಇದೇ ಮೊದಲ ಬಾರಿಗೆ ಒಪ್ಪೋ ಪ್ರಿಯರು ಕುಣಿದು ಕುಪ್ಪಳಿಸುವ ಸುದ್ದಿಯೊಂದನ್ನು ನೀಡಿದೆ. ಅಷ್ಟೇ ಅಲ್ಲದೆ ವಿಶ್ವದಲ್ಲೇ ಮೊದಲು ಎಂಬ ಕೀರ್ತಿಯನ್ನು ಪಡೆದುಕೊಳ್ಳಲಿದೆ. ಹಾಗಿದ್ರೆ, ಏನಿದು ಹೊಸ ವಿಷಯ?, ಒಪ್ಪೋ ಫೈಂಡ್‌ X7 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಅಂತಹುದ್ದೇನಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಕ್ಯಾಮೆರಾದೊಂದಿಗೆ ಒಪ್ಪೋದ ಈ ಫೋನ್‌?

ಡ್ಯುಯಲ್-ಪೆರಿಸ್ಕೋಪಿಕ್ ಕ್ಯಾಮೆರಾ: ಸಾಮಾನ್ಯವಾಗಿ ಒಪ್ಪೋ ಪ್ರೀಮಿಯಂ ಫೋನ್‌ಗಳನ್ನು ಲಾಂಚ್‌ ಮಾಡುವಾಗ ಭಿನ್ನ ರೀತಿಯ ಫೀಚರ್ಸ್‌ ಆಯ್ಕೆ ನೀಡುವುದು ಸಾಮಾನ್ಯ. ಅದರಲ್ಲೂ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಇತರೆ ಕಂಪೆನಿಯ ಫೋನ್‌ಗಳಲ್ಲಿ ಇಲ್ಲದ ಫೀಚರ್ಸ್‌ಗಳನ್ನು ಈ ಫೋನ್‌ನಲ್ಲಿ ನೀಡಲು ಒಪ್ಪೋ ಸದಾ ಹಾತೊರೆಯುತ್ತಿರುತ್ತದೆ. ಇದಕ್ಕೆ ಈಗ ಉದಾಹರಣೆ ಎಂಬಂತೆ ಉನ್ನತ ದರ್ಜೆಯ ಛಾಯಾಗ್ರಹಣಕ್ಕಾಗಿ ವಿಶ್ವದ ಮೊದಲ ಡ್ಯುಯಲ್-ಪೆರಿಸ್ಕೋಪಿಕ್ ಕ್ಯಾಮೆರಾವನ್ನು (Dual Periscopic camera) ನೀಡಲಿದೆ ಎಂದು ತಿಳಿದುಬಂದಿದೆ.

ಒಪ್ಪೋ ಫೈಂಡ್‌ X7 ಪ್ರೊ ಸ್ಮಾರ್ಟ್‌ಫೋನ್‌ ಮುಂದಿನ ವರ್ಷದ ಆರಂಭದಲ್ಲಿ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದ್ದು, ಈ ಫೋನ್ ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಲೆನ್ಸ್ ಆಯ್ಕೆ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಹ್ಯಾಸೆಲ್‌ಬ್ಲಾಡ್‌ನೊಂದಿಗೆ ತನ್ನ ಕ್ಯಾಮರಾ ನಿರ್ಮಾಣ ಮಾಡುವ ಕಾರ್ಯವನ್ನೂ ಸಹ ಮುಂದುವರಿಸುತ್ತದೆ ಎಂದು ತಿಳಿಸಲಾಗಿದೆ.

ಮೊದಲೇ ತಿಳಿಸಿದಂತೆ ಒಪ್ಪೋ ಈಗಾಗಲೇ ಉತ್ತಮ ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿದೆ. ಈ ನಡುವೆ ಕ್ಯಾಮೆರಾ ಪ್ರಿಯರೇ ಶಾಕ್‌ ಆಗುವ ಪೆರಿಸ್ಕೋಪಿಕ್ ಲೆನ್ಸ್ ಅನ್ನು ನೀಡಲು ಸಜ್ಜಾಗಿದೆ ಎನ್ನಲಾಗಿದ್ದು, ಈ ಮೂಲಕ ಜಾಗತಿಕವಾಗಿ ದೊಡ್ಡ ಮಟ್ಟದ ಕೀರ್ತಿ ಪಡೆಯುವಲ್ಲಿ ತಯಾರಿ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಕ್ಯಾಮೆರಾದೊಂದಿಗೆ ಒಪ್ಪೋದ ಈ ಫೋನ್‌?

ಒಪ್ಪೋ ನವೆಂಬರ್ 23 ರಂದು ಚೀನಾದಲ್ಲಿ ಒಪ್ಪೋ ಪ್ಯಾಡ್ ಏರ್ 2 (Oppo Pad Air 2) ಜೊತೆಗೆ ಒಪ್ಪೋ ರೆನೋ 11 ಸರಣಿಯನ್ನು (Oppo Reno 11 series) ಪ್ರಕಟಿಸಲಿದೆ. ಇದಾದ ನಂತರದಲ್ಲಿ ಒಪ್ಪೋ ಫೈಂಡ್‌ X7 ಪ್ರೊ ಅನ್ನು ಪರಿಚಯಿಸಬಹುದು ಎಂದು ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ. ಹಾಗಿದ್ರೆ, ಇತ್ತೀಚಿನ ಲೀಕ್‌ ಮಾಹಿತಿಯಂತೆ ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ ಅನ್ನೋದನ್ನು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.

ಒಪ್ಪೋ ಫೈಂಡ್‌ X7 ಪ್ರೊ ಕ್ಯಾಮೆರಾ ಫೀಚರ್ಸ್‌: ಈ ಮುಂಬರುವ ವಿಶೇಷ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ರಚನೆ ಪಡೆಯಲಿದೆ ಎನ್ನಲಾಗಿದ್ದು, ಇದರೊಂದಿಗೆ ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಆಯ್ಕೆ ಇರಲಿದೆ. ಆದರೆ, ಈ ಹಿಂದೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗುತ್ತಿತ್ತು. ಅದಾಗ್ಯೂ ಈ ಮಾಹಿತಿ ಮುಂದಿನ ದಿನಗಳಲ್ಲಿ ಬದಲಾಗಬಹುದಾಗಿದೆ.

ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಕ್ಯಾಮೆರಾದೊಂದಿಗೆ ಒಪ್ಪೋದ ಈ ಫೋನ್‌?

ಇದರೊಂದಿಗೆ ಈ ಫೋನ್‌ 1 ಇಂಚಿನ 50 ಮೆಗಾಪಿಕ್ಸೆಲ್‌ LYT-900 ಪ್ರಾಥಮಿಕ ಸೆನ್ಸರ್‌ ಹೊಂದಿರಲಿದ್ದು, ಇದು ಉತ್ತಮ ಇಮೇಜ್ ಅನ್ನು ಸೆರೆಹಿಡಿಯುವ ನಿರೀಕ್ಷೆಯಿದೆ. ಇದರೊಂದಿಗೆ 2.7x ಆಪ್ಟಿಕಲ್ ಜೂಮ್‌ ಆಯ್ಕೆಯೊಂದಿಗೆ 50 ಮೆಗಾಪಿಕ್ಸೆಲ್‌ IMX890 ಸೆನ್ಸರ್‌ ಹಾಗೂ 6x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್‌ IMX858 ಸೆನ್ಸರ್ ಪಡೆಯಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾಗೆಯೇ ಅಲ್ಟ್ರಾ ವೈಡ್ ಲೆನ್ಸ್ ಬಗ್ಗೆ ಹೇಳುವುದಾದರೆ ವೈಡ್ ಶಾಟ್‌ಗಳಿಗಾಗಿ 50 ಮೆಗಾಪಿಕ್ಸೆಲ್‌ ಸೆನ್ಸರ್‌ ಅನ್ನು ಈ ಫೋನ್‌ನಲ್ಲಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.

Best Mobiles in India

English summary
Oppo Find X7 Pro smartphone will be launched early next year and the phone is said to feature the world's first dual Periscopic lens option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+