Home
ಸುದ್ದಿಜಾಲ

ಭಾರತದಲ್ಲಿ OPPO Find X8 Pro ಬಿಡುಗಡೆ; ಸಖತ್‌ ಕ್ಯಾಮೆರಾ, ಬಿಗ್ ಬ್ಯಾಟರಿ!

ಜನಪ್ರಿಯ ಒಪ್ಪೋ (OPPO) ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ ಫೈಂಡ್‌ X8 ಸರಣಿಯು (Oppo Find X8 Pro Series) ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಒಪ್ಪೋ ಫೈಂಡ್‌ X8 ಹಾಗೂ ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ ಮಾಡೆಲ್‌ಗಳನ್ನು ಒಳಗೊಂಡಿದ್ದು, ಈ ಎರಡು ಫೋನ್‌ಗಳು ಫ್ಲ್ಯಾಗ್‌ಶಿಫ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ಆ ಪೈಕಿ ಒಪ್ಪೋ ಫೈಂಡ್‌ X8 ಪ್ರೊ ಫೋನ್‌ ಗ್ರಾಹಕರು OMG ಎನ್ನುವಂತೆ ಗಮನ ಸೆಳದಿದೆ.

ಹೌದು, ಒಪ್ಪೋ ಸಂಸ್ಥೆಯು ಅಧಿಕೃತವಾಗಿ ಒಪ್ಪೋ ಫೈಂಡ್‌ X8 ಪ್ರೊ (Oppo Find X8 Pro) ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9400 SoC ಪ್ರೊಸೆಸರ್‌ ಪವರ್‌ ಒಳಗೊಮಡಿದ್ದು, ಇದರೊಂದಿಗೆ 5910mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ OPPO Find X8 Pro ಬಿಡುಗಡೆ; ಸಖತ್‌ ಕ್ಯಾಮೆರಾ, ಬಿಗ್ ಬ್ಯಾಟರಿ!

ಸಂಸ್ಥೆಯ ಈ ನೂತನ ಫ್ಲ್ಯಾಗ್‌ಶಿಫ್‌ ಮೊಬೈಲ್‌ 12GB / 16GB RAM ಹಾಗೂ 256GB / 512GB / 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಇದು 80W SuperVOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವುದು ಇನ್ನೊಂದು ಹೈಲೈಟ್‌ ಅಂಶವಾಗಿ ಕಾಣಿಸಿದೆ. ಇನ್ನುಳಿದಂತೆ ಒಪ್ಪೋ ಫೈಂಡ್‌ X8 ಪ್ರೊ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಆಕರ್ಷಕ ಡಿಸ್‌ಪ್ಲೇ ರಚನೆ

ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ 6.78 ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2780×1264 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 120Hz ರಿಫ್ರೆಶ್ ರೇಟ್ ಹಾಗೂ 240Hz ಟಚ್‌ ಸ್ಯಾಂಪ್ಲಿಂಗ್ ರೇಟ್‌ ಪಡೆದಿದೆ ಜೊತೆಗೆ 4500 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಅಲ್ಲದೇ ಕಾರ್ವಿಲಾಸ್ ಇನ್‌ಸ್ಟಂಟ್ ರೇಟ್ 7i ರಕ್ಷಣೆ ಪಡೆದಿದೆ.

ವೇಗದ ಪ್ರೊಸೆಸರ್‌ ಬಲ

ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9400 SoC ಪ್ರೊಸೆಸರ್‌ ಪವರ್‌ ಸಪೋರ್ಟ್‌ ಜೊತೆಗೆ ಇದು Immortalis-G925 GPU ಒಳಗೊಂಡಿದೆ. ಅಲ್ಲದೇ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 15 ನಲ್ಲಿ ರನ್‌ ಆಗಲಿದೆ. ಹಾಗೆಯೇ 12GB / 16GB RAM ಹಾಗೂ 256GB / 512GB / 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಬೊಂಬಾಟ್‌ ಕ್ಯಾಮೆರಾ ಸೆನ್ಸಾರ್‌

ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ ಹಿಂಭಾಗದಲ್ಲಿ ತ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮೂರು ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಅನ್ನು ಪಡೆದುಕೊಂಡಿವೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ಇದರ ಕ್ಯಾಮೆರಾವು OIS, 120X ಡಿಜಿಟಲ್ ಜೂಮ್ ಹಾಗೂ ಹ್ಯಾಸೆಲ್‌ಬ್ಲಾಡ್ ಪೋರ್ಟ್ರೈಟ್ ಸೌಲಭ್ಯ ಹೊಂದಿವೆ.

ಬಿಗ್‌ ಬ್ಯಾಟರಿ ಬ್ಯಾಕ್‌ಅಪ್

ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ 5910mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 80W SuperVOOC ಫಾಸ್ಟ್‌ ಚಾರ್ಜಿಂಗ್ ಹೊಂದಿದ್ದು, ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಈ ಮೊಬೈಲ್‌ ಡ್ಯುಯಲ್-ಆಂಟೆನಾ NFC, USB ಟೈಪ್-C ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಒಪ್ಪೋ ಫೈಂಡ್‌ X8 ಪ್ರೊ ಮೊಬೈಲ್‌ನ 16GB + 512GB ವೇರಿಯಂಟ್‌ ಬೆಲೆ 99,999ರೂ. ಆಗಿದೆ. ಇನ್ನು ಈ ಫೋನ್‌ ಸ್ಪೇಸ್ ಬ್ಲಾಕ್ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಲಭ್ಯ ಆಗಲಿದೆ. ಒಪ್ಪೋ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಇಂದಿನಿಂದ ಪ್ರಿ-ಆರ್ಡರ್‌ಗೆ ಲಭ್ಯ ಇರುತ್ತವೆ. ಇದೇ ಡಿಸೆಂಬರ್ 3 ರಿಂದ ಮಾರಾಟ ಶುರುವಾಗಲಿದೆ.

Best Mobiles in India

English summary
OPPO Find X8 Pro with Dimensity 9400 launched in India. Check Price, Sale, Specifications, offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+