OPPO ಸಂಸ್ಥೆಯ ಇತ್ತೀಚಿನ ಈ ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ಇಳಿಕೆ; ಆಫರ್ ಬೆಲೆ ಎಷ್ಟು?
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಒಪ್ಪೋ ಸಂಸ್ಥೆಯು ತನ್ನ ಇತ್ತೀಚಿನ ಒಪ್ಪೋ F27 5G ಸರಣಿಯ (OPPO F27 5G Series) ಮೊಬೈಲ್‌ಗಳಿಗೆ ಈಗ ಆಕರ್ಷಕ ರಿಯಾಯಿತಿ ಘೋಷಿಸಿದೆ. ಒಪ್ಪೋದ ಈ ಸರಣಿಯು ಒಪ್ಪೋ F27 5G ಹಾಗೂ ಒಪ್ಪೋ F27 ಪ್ರೊ+ 5G ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ವೇರಿಯಂಟ್‌ಗಳ ಬೆಲೆಯಲ್ಲಿಯೂ ಭಾರೀ ಬೆಲೆ ಇಳಿಕೆಯ ಆಗಿದ್ದು, ಗ್ರಾಹಕರು ಸಂತಸ ಪಡುವಂತೆ ಆಗಿದೆ.
ಹೌದು, ಒಪ್ಪೋ ಸಂಸ್ಥೆಯ ಒಪ್ಪೋ F27 5G ಹಾಗೂ ಒಪ್ಪೋ F27 ಪ್ರೊ+ 5G ಮೊಬೈಲ್‌ಗಳು ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ. ಇವುಗಳ ಪೈಕಿ ಒಪ್ಪೋ F27 5G ಫೋನಿನ ಆರಂಭಿಕ ವೇರಿಯಂಟ್ 22,999ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು. ಹಾಗೆಯೇ ಒಪ್ಪೋ F27 ಪ್ರೊ+ 5G ಆರಂಭಿಕ ವೇರಿಯಂಟ್ ಅನ್ನು ಗ್ರಾಹಕರು 27,999ರೂ. ಗಳ ದರದಲ್ಲಿ ಖರೀದಿಸಬಹುದು.

ಆಫರ್ ಬೆಲೆ ಹೀಗಿವೆ
ಒಪ್ಪೋ ಕಂಪನಿಯ ಒಪ್ಪೋ F27 5G ಹಾಗೂ ಒಪ್ಪೋ F27 ಪ್ರೊ+ 5G ಮೊಬೈಲ್‌ಗಳು ಸೀಮಿತ ಅವಧಿಯ ಆಫರ್ ಪಡೆದಿವೆ. ಇದೇ ಸೆಪ್ಟೆಂಬರ್ 1 ರಿಂದ ಪ್ರಾರಂಭ ಆಗಿರುವ ಈ ಕೊಡುಗೆಯು ಇದೇ ಸೆಪ್ಟೆಂಬರ್ 15 ರ ವರೆಗೂ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಆಫರ್ ಬೆಲೆ ಈ ಕೆಳಗಿನಂತೆ ಇವೆ.
OPPO F27 5G ಬೆಲೆ ಮಾಹಿತಿ
8GB+128GB ವೇರಿಯಂಟ್ ಬೆಲೆ 22,999ರೂ.
8GB+256GB ವೇರಿಯಂಟ್ ಬೆಲೆ 24,999ರೂ.
OPPO F27 Pro+ 5G ಬೆಲೆ ಮಾಹಿತಿ
8GB+128GB ವೇರಿಯಂಟ್ ಬೆಲೆ 27,999ರೂ.
8GB+256GB ವೇರಿಯಂಟ್ ಬೆಲೆ 29,999ರೂ
ಒಪ್ಪೋ F27 5G ಫೀಚರ್ಸ್
ಒಪ್ಪೋ F27 5G ಫೋನ್ 6.67 ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2400×1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 120Hz ರಿಫ್ರೆಶ್ ರೇಟ್, ಅಕ್ವಾ ಡೈನಾಮಿಕ್ಸ್, 240Hz ಟಚ್ ಸ್ಯಾಂಪ್ಲಿಂಗ್ ದರ, 394 PPI, 100% DCI P3 ಬಣ್ಣದ ಹರವು ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ 2100 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಕೂಡಾ ಪಡೆದಿದೆ.
ಒಪ್ಪೋ F27 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಕಾರ್ಯ ನಿರ್ವಹಿಸಲಿದ್ದು, ಮಾಲಿ G57 MP2 GPU ಸಪೋರ್ಟ್ ಸಹ ಇದೆ. ಅಲ್ಲದೇ ಇದು ಕಲರ್ ಓಎಸ್ 14 ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. 2TB ವರೆಗೆ ವಿಸ್ತರಣೆಗೆ ಬೆಂಬಲದೊಂದಿಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಕೂಡಾ ಇದೆ.
ಒಪ್ಪೋ F27 5G ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಉಳಿದ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಒಪ್ಪೋ F27 5G ಫೋನ್ 45W SuperVOOC ಚಾರ್ಜಿಂಗ್ ಸಪೋರ್ಟ್ ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್-ಸಿಮ್, 5G, WiFi 5 802.11 ax, ಬ್ಲೂಟೂತ್ 5.3, ಯುಎಸ್‌ಬಿ 2.0, ಜಿಪಿಎಸ್, GLONASS, ಗೆಲಿಲಿಯೋ, BeiDou ಮತ್ತು QZSS ಆಯ್ಕೆಗಳು ಇವೆ.


Click it and Unblock the Notifications








