Home
ಸುದ್ದಿಜಾಲ

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ!..ಖರೀದಿಗೆ ಇದೇ ಸೂಕ್ತ ಸಮಯ!

ಒಪ್ಪೋ ಸಂಸ್ಥೆಯ ಜನಪ್ರಿಯ ಫೋನ್‌ಗಳ ಪೈಕಿ ಒಂದಾಗಿರುವ ಒಪ್ಪೋ K10 5G ಸ್ಮಾರ್ಟ್‌ಫೋನ್‌ ಕೆಲವು ಫೀಚರ್ಸ್‌ಗಳು ಆಕರ್ಷಕ ಎನಿಸಿವೆ. ಈ ಫೋನ್‌ ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಈ ಫೋನ್ 32% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೈಲೈಟ್‌ ಎನಿಸಿದೆ.

ಹೌದು, ಒಪ್ಪೋ K10 5G ಸ್ಮಾರ್ಟ್‌ಫೋನ್‌ 8GB RAM + 128GB ಸ್ಟೋರೇಜ್ ವೇರಿಯಂಟ್ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ತಾಣದಲ್ಲಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ಫೋನ್‌ ಅನ್ನು 17,499ರೂ. ಪ್ರೈಸ್‌ ಟ್ಯಾಗ್‌ ನಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆ ಹಾಗೂ ನೋ ಕಾಸ್ಟ್‌ ಇಎಮ್‌ಐ ಸಹ ಲಭ್ಯವಾಗಲಿವೆ.

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ!..ಖರೀದಿಗೆ ಇದೇ ಸೂಕ್ತ ಸಮಯ!

ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಹೊಂದಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಗ್ಲಾಸ್‌ ಗ್ರೀನ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆ ಒಳಗೊಂಡಿದೆ. ಹಾಗಾದರೆ ಒಪ್ಪೋ K10 5G ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ : ಒಪ್ಪೋ K10 5G ಸ್ಮಾರ್ಟ್‌ಫೋನ್‌ 1,080 x 1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ರಚನೆಯು 7.99 ಎಂ.ಎಂ ನಲ್ಲಿ ತಿಳುವಾಗಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಒಳಗೊಂಡಿದೆ. ಇದರ ಹಿಂದಿನ ಫಲಕವು ಫಿಂಗರ್‌ಪ್ರಿಂಟ್ ಮತ್ತು ಸ್ಕ್ರಾಚ್-ನಿರೋಧಕವಾಗಿದೆ.

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ!..ಖರೀದಿಗೆ ಇದೇ ಸೂಕ್ತ ಸಮಯ!

ವೇಗದ ಪ್ರೊಸೆಸರ್‌ : ಒಪ್ಪೋ K10 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ನಲ್ಲಿ ಜೊತೆಗೆ ಕಲರ್‌ಓಎಸ್‌ 12.1 ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8 GB + 128 GB ಇಂಟರ್‌ ಸ್ಟೋರೇಜ್‌ ಹೊಂದಿದೆ.

ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವನ್ನು 512GB ವರೆಗೂ ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡದೆ. ಈ ಫೋನಿನ RAM ಆಯ್ಕೆಯು ದೈನಂದಿನ ಬಳಕೆಗೆ ಪೂರಕೆ ಎನಿಸುತ್ತದೆ. ಆದಾಗ್ಯೂ, ಈ ಡಿವೈಸ್‌ 5GB ಹೆಚ್ಚುವರಿ RAM ಸಾಮರ್ಥ್ಯವನ್ನು ಅನುಮತಿಸುವ RAM ವಿಸ್ತರಣೆಯ ಆಯ್ಕೆಯನ್ನು ಸಹ ಹೊಂದಿದೆ. ಮಲ್ಟಿ ಆಪ್‌ಗಳ ಬಳಕೆಗೂ ಪೂರಕ ಎನಿಸುತ್ತದೆ.

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ!..ಖರೀದಿಗೆ ಇದೇ ಸೂಕ್ತ ಸಮಯ!

ಕ್ಯಾಮೆರಾ ಸೆನ್ಸಾರ್ ಹೇಗಿದೆ : ಒಪ್ಪೋ K10 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಕನೆಕ್ಟಿವಿಟಿ ಸೌಲಭ್ಯಗಳು : ಒಪ್ಪೋ K10 5G ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 33W SUPERVOOC ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದರೊಂದಿಗೆ ಬ್ಯಾಟರಿಯು ಪೋರ್ಟ್ ಆಂಟಿ-ಬರ್ನ್ ಪ್ರೊಟೆಕ್ಷನ್ ಫೀಚರ್ಸ್‌ ಬರುತ್ತದೆ ಅದು ಚಾರ್ಜಿಂಗ್ ಸಮಯದಲ್ಲಿ ಸಾಧನವನ್ನು ಬಿಸಿ ಮಾಡುವುದನ್ನು ತಡೆಯುತ್ತದೆ.

ಆಡಿಯೋ ಫೀಚರ್ : ಒಪ್ಪೋ K10 5G ಫೋನ್ ಅಲ್ಟ್ರಾ-ಲೀನಿಯರ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಅನ್ನು ಹೊಂದಿದ್ದು ಅದು ಬಳಕೆದಾರರು ಚಲನಚಿತ್ರವನ್ನು ವೀಕ್ಷಿಸುತ್ತಿರುವಾಗ ಅಥವಾ ಮೆಚ್ಚಿನ ಮೊಬೈಲ್ ಗೇಮ್ ಅನ್ನು ಆಡುತ್ತಿರುವಾಗ ನಿಮ್ಮನ್ನು ಹಿಮ್ಮೆಟ್ಟಿಸುವ ತಲ್ಲೀನಗೊಳಿಸುವ ಸರೌಂಡ್ ಸೌಂಡ್ ಆಡಿಯೊ ಅನುಭವದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಅಕೌಸ್ಟಿಕ್ ಫೀಸ್ಟ್ ಅನ್ನು ನೀಡುತ್ತದೆ.

Best Mobiles in India

English summary
OPPO K10 5G available on big discount price on flipkart: Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+