ಒಪ್ಪೋದ ಈ ಜನಪ್ರಿಯ 5G ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಒಪ್ಪೋ ಕಂಪನಿಯು ಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಒಪ್ಪೋ ಸಂಸ್ಥೆಯ ತನ್ನ K ಸರಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿದ್ದು, ಆ ಪೈಕಿ ಒಪ್ಪೋ K10 5G ಮೊಬೈಲ್ ಕೂಡಾ ಒಂದಾಗಿದೆ. ಇದೀಗ ಈ ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಒಪ್ಪೋ K10 5G ಫೋನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್ ವೇರಿಯಂಟ್ ಇದೀಗ ಕೊಡುಗೆಯಲ್ಲಿ 19,999ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಕೊಡುಗೆ ಕೂಡಾ ಲಭ್ಯ ಆಗಲಿವೆ. ಸದ್ಯಕ್ಕೆ ಅಲಭ್ಯ ಎಂದು ಲಿಸ್ಟ್ ಮಾಡಲಾಗಿದೆ.

ಹಾಗೆಯೇ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಬಲ ಹೊಂದಿದ್ದು, 5,000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಗ್ಲಾಸ್ ಗ್ರೀನ್ ಹಾಗೂ ಬ್ಲೂ ಬಣ್ಣಗಳ ಆಯ್ಕೆ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇನ್ನುಳಿದಂತೆ ಒಪ್ಪೋ K10 5G ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ K10 5G ಮೊಬೈಲ್ 1,080 x 1920 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಈ ಫೋನಿನ ರಚನೆಯು 7.99 ಎಂ.ಎಂ ನಲ್ಲಿ ತಿಳುವಾದ ರಚನೆ ಪಡೆದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಇದರ ಹಿಂದಿನ ಫಲಕವು ಫಿಂಗರ್‌ಪ್ರಿಂಟ್ ಮತ್ತು ಸ್ಕ್ರಾಚ್ ನಿರೋಧಕವಾಗಿದೆ.

ಒಪ್ಪೋ ಕಂಪನಿಯ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಜೊತೆಗೆ ಕಲರ್ ಓಎಸ್ 12.1 ಕೆಲಸ ಮಾಡುತ್ತದೆ. ಹಾಗೆಯೇ 8 GB + 128 GB ಆಂತರೀಕ ಸ್ಟೋರೇಜ್ ಆಯ್ಕೆ ಅನ್ನು ಇದು ಹೊಂದಿದೆ.
ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವನ್ನು 512GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ವನ್ನು ಸಹ ನೀಡದೆ. ಈ ಫೋನಿನ RAM ಆಯ್ಕೆಯು ದೈನಂದಿನ ಬಳಕೆಗೆ ಪೂರಕೆ ಎನಿಸುತ್ತದೆ. ಆದಾಗ್ಯೂ, ಈ ಡಿವೈಸ್ 5GB ಹೆಚ್ಚುವರಿ RAM ಸಾಮರ್ಥ್ಯವನ್ನು ಅನುಮತಿಸುವ RAM ವಿಸ್ತರಣೆಯ ಆಯ್ಕೆ ಯನ್ನು ಸಹ ಒಳಗೊಂಡಿದೆ.

ಹಾಗೆಯೇ ಒಪ್ಪೋ K10 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ವನ್ನು ಸಹ ಪಡೆದುಕೊಂಡಿದೆ.
ಇನ್ನು ಒಪ್ಪೋ ಸಂಸ್ಥೆಯ ಈ ಫೋನ್ ಅಲ್ಟ್ರಾ ಲೀನಿಯರ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಅನ್ನು ಪಡೆದಿದ್ದು, ಅದು ಬಳಕೆದಾರರು ಸಿನಿಮಾ ವೀಕ್ಷಿಸುತ್ತಿರುವಾಗ ಅಥವಾ ಮೆಚ್ಚಿನ ಮೊಬೈಲ್ ಗೇಮ್ ಅನ್ನು ಆಡುತ್ತಿರುವಾಗ ಅತ್ಯುತ್ತಮ ಸರೌಂಡ್ ಸೌಂಡ್ ಆಡಿಯೊ ಅನುಭವ ನೀಡಲಿದೆ.


Click it and Unblock the Notifications








