Home
ಸುದ್ದಿಜಾಲ

ಒಪ್ಪೋ K11x ಸ್ಮಾರ್ಟ್‌ಫೋನ್‌ ಅನಾವರಣ; ಆಕರ್ಷಕ ಫೀಚರ್ಸ್‌ ಆಯ್ಕೆ!

ಒಪ್ಪೋ ಫೋನ್‌ಗಳಿಗೆ ಇರುವ ಬೇಡಿಕೆ ಇತರೆ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗೆ ಇಲ್ಲ ಎಂದೇ ಹೇಳಬಹುದು. ಯಾಕೆಂದರೆ ಈ ಫೋನ್‌ಗಳು ಸುಧಾರಿತ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಗ್ರಾಹಕರಿಗೆ ವಿವಿಧ ರೀತಿಯ ಹೊಸ ಅನುಭವ ನೀಡುತ್ತಾ ಬರುತ್ತಿವೆ. ಈ ನಡುವೆ ಒಪ್ಪೋ ಸಂಸ್ಥೆಯು ಒಪ್ಪೋ K11x ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ.

ಹೌದು, ಬಹು ನಿರೀಕ್ಷಿತ ಒಪ್ಪೋ K11x (OPPO K11x) ಅನ್ನು ಅನಾವರಣ ಮಾಡಲಾಗಿದ್ದು, K ಸರಣಿಯ ಈ ಫೋನ್‌ ಒಪ್ಪೋ K10x ಗೆ ಉತ್ತರಾಧಿಕಾರಿಯಾಗಿದೆ. ಇನ್ನು ಈ ಫೋನ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸಹ ಈ ಫೋನ್‌ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿದೆ. ಹಾಗಿದ್ರೆ, ಈ ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿಚಾರ ತಿಳಿಯಲು ಈ ಲೇಖನ ಓದಿರಿ.

ಒಪ್ಪೋ K11x ಸ್ಮಾರ್ಟ್‌ಫೋನ್‌ ಅನಾವರಣ; ಆಕರ್ಷಕ ಫೀಚರ್ಸ್‌ ಆಯ್ಕೆ!

ಒಪ್ಪೋ K11x ಡಿಸ್‌ಪ್ಲೇ ವಿವರ: ಈ ಫೋನ್ 6.72 ಇಂಚಿನ ಫುಲ್ ಹೆಚ್ ಡಿ+ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 680 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದ್ದು, ಎಲ್ಲಾ ಸಂದರ್ಭದಲ್ಲೂ ಸಹ ಅತ್ಯುತ್ತಮ ವೀಕ್ಷಣೆ ಸಾಧ್ಯ. ಇದರೊಂದಿಗೆ ಪಾಂಡ 1681 ಟೆಂಪರ್ಡ್ ಗ್ಲಾಸ್ ರಕ್ಷಣೆಯೊಂದಿಗೆ ಪ್ಯಾಕ್‌ ಆಗಿದೆ.

ಒಪ್ಪೋ K11x ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ-ಕೋರ್ 8nm ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಓಎಸ್ ಅನ್ನು ಕಲರ್ ಓಎಸ್ 13.1 ಸ್ಕಿನ್‌ನೊಂದಿಗೆ ರನ್ ಮಾಡುತ್ತದೆ. ಇನ್ನುಳಿದಂತೆ 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಮತ್ತು 12GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ನ ವಿವಿಧ ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯ ಇರಲಿದೆ.

ಒಪ್ಪೋ K11x ಸ್ಮಾರ್ಟ್‌ಫೋನ್‌ ಅನಾವರಣ; ಆಕರ್ಷಕ ಫೀಚರ್ಸ್‌ ಆಯ್ಕೆ!

ಒಪ್ಪೋ K11x ಕ್ಯಾಮೆರಾ ರಚನೆ: ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಹೊಂದಿದ್ದು, ಇದು af/1.7 ದ್ಯುತಿರಂಧ್ರವನ್ನು ಹೊಂದಿದೆ. 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್ ಮತ್ತು ಎಲ್‌ಇಡಿ ಫ್ಲ್ಯಾಶ್‌‌ ಆಯ್ಕೆ ಪಡೆದುಕೊಂಡಿದೆ. ಇನ್ನುಳಿದಂತೆ ಸೆಲ್ಫಿ ಉದ್ದೇಶಕ್ಕಾಗಿ 16 ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ನೀಡಲಾಗಿದ್ದು ಇದು ಸಹ af/2.4 ದ್ಯುತಿರಂಧ್ರವನ್ನು ಹೊಂದಿದೆ.

ಒಪ್ಪೋ K11x ಬ್ಯಾಟರಿ ಸಾಮರ್ಥ್ಯ:ಈ ಫೋನ್ 5,000mAhಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 67Wಸೂಪರ್‌ ವೂಕ್‌ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5ಎಂಎಂ ಆಡಿಯೊ ಜ್ಯಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಸ್ಟಿರಿಯೊ ಸ್ಪೀಕರ್ ರಚನೆಯನ್ನು ಹೊಂದಿರುವ ಈ ಫೋನ್ 5G SA/ NSA, ಡ್ಯುಯಲ್ 4G VoLTE , ವೈ-ಫೈ 6 802.11 ac,ಬ್ಲೂಟೂತ್ ಆವೃತ್ತಿ v5.2ಯ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಒಪ್ಪೋ K11x ಬೆಲೆ ಹಾಗೂ ಲಭ್ಯತೆ: 8GBRAM ಮತ್ತು 128GBಇಂಟರ್ನಲ್ ಸ್ಟೋರೇಜ್ ಆಯ್ಕೆಯ ಫೋನ್‌ಗೆ CNY 1499ಯುವಾನ್ ನಿಗದಿ ಪಡಿಸಲಾಗಿದೆ. ಅಂದರೆ ಭಾರತದಲ್ಲಿ ಈ ಫೋನ್‌ ಬೆಲೆ 17,590ರೂ.ಗಳು. ಜೊತೆಗೆ 8GBRAM ಮತ್ತು 256GBಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ಗೆ CNY 1699ಯುವಾನ್ ಅಂದರೆ ಸುಮಾರು 19,945ರೂ.ಗಳಾಗಿದೆ. ಇದರೊಂದಿಗೆ 12GBRAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಟಾಪ್-ಎಂಡ್ ಮಾಡೆಲ್ ಬೆಲೆ CNY 1899 ಅಂದರೆ ಸುಮಾರು 22,295ರೂ.ಆಗಿದೆ.

ಒಪ್ಪೋ K11x ಸ್ಮಾರ್ಟ್‌ಫೋನ್‌ ಅನಾವರಣ; ಆಕರ್ಷಕ ಫೀಚರ್ಸ್‌ ಆಯ್ಕೆ!

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಮೇ 31 ರಿಂದ ಮಾರಾಟವಾಗಲಿದೆ. ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಫೋನ್ ಎಂದಿನಿಂದ ಲಭ್ಯ ಎಂಬ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್‌ ಬ್ಲ್ಯಾಕ್‌ ಮತ್ತು ಪರ್ಲ್ ಬಣ್ಣದ ಆಯ್ಕೆಗಳಲ್ಲಿ ಕಂಡುಬಂದಿದೆ.

Best Mobiles in India

English summary
Oppo K11x smartphone has been unveiled, this phone is powered by Snapdragon 695 SoC processor and have dual rear camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+