Home
ಸುದ್ದಿಜಾಲ

ಇತ್ತೀಚಿನ OPPO K12x 5G ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ಸಖತ್ ಇಳಿಕೆ!

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024 (Flipkart Big Billion Days Sale 2024) ಸೇಲ್‌ ಆಯೋಜಿಸಿದ್ದು, ಈ ವಿಶೇಷ ಮಾರಾಟದಲ್ಲಿ ಮೊಬೈಲ್‌ಗಳು ಬೊಂಬಾಟ್‌ ಕೊಡುಗೆಗಳನ್ನು ಘೋಷಿಸಿದೆ. ಇನ್ನು ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಆಯ್ದ ಬ್ಯಾಂಕ್‌ ಕೊಡುಗೆಗಳನ್ನು ಪಡೆದುಕೊಂಡರೆ, ಮತ್ತಷ್ಟು ಡಿಸ್ಕೌಂಟ್‌ ಸಹ ಪಡೆಯಬಹುದು. ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಒಪ್ಪೋ K12x 5G ಮೊಬೈಲ್‌ (OPPO K12x 5G) ವಾವ್‌ ಎನಿಸುವ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಒಪ್ಪೋ K12x 5G ಮೊಬೈಲ್‌ (OPPO K12x 5G) ಮೊಬೈಲ್ ಶೇ 23% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಗ್ರಾಹಕರು 12,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಆಫರ್‌ ಪಡೆದುಕೊಂಡರೆ, ಇದನ್ನು 10,999ರೂ. ಗಳ ದರದಲ್ಲಿ ಖರೀದಿಸಬಹುದು.

ಇತ್ತೀಚಿನ OPPO K12x 5G ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ಸಖತ್ ಇಳಿಕ

ಇನ್ನು ಒಪ್ಪೋ K12x 5G ಫೋನ್‌ ಬ್ರೀಜ್‌ ಬ್ಲೂ ಮತ್ತು ಮೀಡ್‌ನೈಟ್‌ ವೈಲೆಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಇದರ ಆರಂಭಿಕ ವೇರಿಯಂಟ್‌ ಬೆಲೆಯು 12,999ರೂ. ಆಗಿದೆ. ಆಸಕ್ತ ಖರೀದಿದಾರರು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿ ಮಾಡಬಹುದು. ಇನ್ನುಳಿದಂತೆ ಒಪ್ಪೋ K12x 5G ಫೋನಿನ ಇತರೆ ಫೀಚರ್ಸ್‌ ಯಾವುವು ಹಾಗೂ ಆಫರ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ K12x 5G ಫೀಚರ್ಸ್‌

ಒಪ್ಪೋ K12x 5G ಮೊಬೈಲ್‌ 6.67 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಫೋನ್ ಡಿಸ್‌ಪ್ಲೇ 1,612 x 720 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ಹಾಗೂ 1000 nits ಬ್ರೈಟ್ನೆಸ್‌ ಆಯ್ಕೆಯೊಂದಿಗೆ, ಪಾಂಡಾ ಗ್ಲಾಸ್‌ 3 ರಕ್ಷಣೆ ಸಹ ಪಡೆದುಕೊಂಡಿದೆ.

ಒಪ್ಪೋ K12x 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಓಎಸ್ ಅನ್ನು ಸಪೋರ್ಟ್‌ ಸಹ ಪಡೆದಿದೆ. ಇದರೊಂದಿಗೆ6 + 128GB ಹಾಗೂ 8 + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಒಪ್ಪೋ K12x 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದ್ದು, ಹಾಗೆಯೇ ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಅನ್ನು ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ.

ಒಪ್ಪೋ K12x 5G ಮೊಬೈಲ್‌ 5,100 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 45 W SuperVOOC ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿದೆ. ಅಲ್ಲದೇ ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ, ಜಿಪಿಎಸ್, ಬ್ಲೂಟೂತ್ 5.0 ಮತ್ತು ಯುಎಸ್‌ಬಿ ಟೈಪ್-ಸಿ ಆಯ್ಕೆಗಳನ್ನು ಪಡೆದಿದೆ. ಅಂದಹಾಗೆ ಈ ಮೊಬೈಲ್‌ ಬ್ರೀಜ್‌ ಬ್ಲೂ ಮತ್ತು ಮೀಡ್‌ನೈಟ್‌ ವೈಲೆಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
OPPO K12x 5G now available at biggest discount on flipkart. check full details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+