Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಈ OPPO ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಮೊಬೈಲ್‌ ಮಾರುಕಟ್ಟೆಯಲ್ಲಿ ಬಜೆಟ್‌ ವಿಭಾಗದಲ್ಲಿ ಭಾರೀ ಗಮನ ಸೆಳೆದಿರುವ ಒಪ್ಪೋ K12x 5G (OPPO K12x 5G) ಕೆಲವು ಆಕರ್ಷಕ ಫೀಚರ್ಸ್‌ ಪಡೆದಿದೆ. ಇದೀಗ ಈ ಮೊಬೈಲ್‌ ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಭರ್ಜರಿ ಬೆಲೆ ಇಳಿಕೆ ಪಡೆದಿದ್ದು, ಈ ಮೂಲಕ ಮತ್ತೆ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಕಡಿಮೆ ಬೆಲೆಗೆ ಜಬರ್ದಸ್ತ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಇದು ಬೊಂಬಾಟ್‌ ಕೊಡುಗೆ ಎನಿಸಿದೆ.

ಹೌದು, ಫ್ಲಿಪ್‌ಕಾರ್ಟ್‌ ( Flipkart ) ಇ ಕಾಮರ್ಸ್‌ ತಾಣದಲ್ಲಿ ಸದ್ಯ ಒಪ್ಪೋ K12x 5G ( OPPO K12x 5G ) ಮೊಬೈಲ್‌ ಶೇ. 23% ರಷ್ಟು ಆಫರ್‌ ಬೆಲೆಯಲ್ಲಿ ಪಡೆದುಕೊಂಡಿದೆ. ಈ ಮೊಬೈಲ್‌ನ 8 GB RAM + 128 GB ವೇರಿಯಂಟ್‌ 12,999ರೂ. ಗಳ ಸಖತ್ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಹ ಪಡೆದುಕೊಂಡರೆ, ಮತ್ತಷ್ಟು ಕಡಿಮೆ ಬೆಲೆಯಲ್ಲಿ ಫೋನ್‌ ಖರೀದಿಸಬಹುದು.

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಈ OPPO ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಹಾಗೆಯೇ ಒಪ್ಪೋ ಸಂಸ್ಥೆಯ ಈ ಫೋನ್‌ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿಯೂ ಖರೀದಿಸಬಹುದು. ಇನ್ನು ಈ ಫೋನ್‌ 5,100 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಈ ಫೋನಿನ ಮೊದಲ ಕ್ಯಾಮೆರಾವು 32 ಮೆಗಾಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗಾದರೆ ಒಪ್ಪೋ K12x 5G ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ K12x 5G ಫೀಚರ್ಸ್‌

ಒಪ್ಪೋ K12x 5G ಮೊಬೈಲ್‌ 6.67 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಫೋನ್ ಡಿಸ್‌ಪ್ಲೇ 1,612 x 720 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. 120 Hz ರಿಫ್ರೆಶ್ ರೇಟ್‌ ಹಾಗೂ 1000 nits ಬ್ರೈಟ್ನೆಸ್‌ ಆಯ್ಕೆಯೊಂದಿಗೆ, ಪಾಂಡಾ ಗ್ಲಾಸ್‌ 3 ರಕ್ಷಣೆ ಸಹ ಪಡೆದುಕೊಂಡಿದೆ.

ಒಪ್ಪೋ K12x 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಓಎಸ್ ಅನ್ನು ಸಪೋರ್ಟ್‌ ಸಹ ಪಡೆದಿದೆ. ಇದರೊಂದಿಗೆ ಇದು 6 + 128GB ಮತ್ತು 8 + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಒಪ್ಪೋ K12x 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದ್ದು, ಹಾಗೆಯೇ ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೆಟ್‌ಅಪ್‌ ಅನ್ನು ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಒದಗಿಸಲಾಗಿದೆ.

ಒಪ್ಪೋ K12x 5G ಮೊಬೈಲ್‌ 5,100 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 45W SuperVOOC ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿದೆ. ಅಲ್ಲದೇ ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ, ಜಿಪಿಎಸ್, ಬ್ಲೂಟೂತ್ 5.0 ಮತ್ತು ಯುಎಸ್‌ಬಿ ಟೈಪ್ - ಸಿ ಆಯ್ಕೆಗಳನ್ನು ಪಡೆದಿದೆ. ಇನ್ನು ಈ ಮೊಬೈಲ್‌ ಬ್ರೀಜ್‌ ಬ್ಲೂ, ಪಿಂಕ್ ಮತ್ತು ಮೀಡ್‌ನೈಟ್‌ ವೈಲೆಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
OPPO K12x 5G receives a price cut in Flipkart India. Check Price, Offer and more Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+