'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

|

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ ಒಪ್ಪೊ ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚಿಗೆ 'ಒಪ್ಪೊ ಎಫ್‌11 ಪ್ರೊ' ಸ್ಮಾರ್ಟ್‌ಫೋನ್‌ ಮೂಲಕ ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಒಪ್ಪೊ ಕೆ3 ಹೆಸರಿನ ಮಿಡ್‌ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಅಣಿಯಾಗುತ್ತಿದೆ. ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಸಖತ್ ಸೌಂಡ್‌ ಮಾಡುವ ಲಕ್ಷಣಗಳನ್ನು ಹೊರಹಾಕಿದೆ.

'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

ಹೌದು, ಒಪ್ಪೊ ಕಂಪನಿಯು ತನ್ನ ಬಹುನಿರೀಕ್ಷಿತ ಒಪ್ಪೊ ಕೆ3 ಸ್ಮಾರ್ಟ್‌ಫೋನ್‌ ಅನ್ನು ಇದೇ ಜುಲೈ 17ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ದಿನಾಂಕ ನಿಗದಿ ಮಾಡಿದೆ. ಆಕ್ಟಾ ಕೋರ್‌ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಜೊತೆಗೆ 16ಎಂಪಿ ಸೆನ್ಸಾರ್‌ ಸಾಮರ್ಥ್ಯದ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ.

'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

ಹಾಗೆಯೇ ಒಪ್ಪೊ ಕೆ3 ಸ್ಮಾರ್ಟ್‌ಫೋನ್ 6GB+64GB, 8GB+128GB ಮತ್ತು 8GB+256GB ಸಾಮರ್ಥ್ಯದ ಮೂರು ವೇರಿಯಂಟ್‌ ಆಯ್ಕೆಗಳಲ್ಲಿ ದೊರೆಯಲಿದೆ. 3,765mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯ ಜೊತೆಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಸಹ ಹೊಂದಿರಲಿದೆ. ಹಾಗಾದರೇ ಒಪ್ಪೊ ಕೆ3 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 2,340 x 1,080 ಪಿಲ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.5 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 396 PPIರಷ್ಟು ಆಗಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.91.1% ರಷ್ಟಾಗಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 2.2 GHz ವೇಗದ ಆಕ್ಟಾ ಕೋರ್‌ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸಮಾಡಲಿದ್ದು, ಇದರೊಂದಿಗೆ ಕಲರ್‌OS 6.0 ಆಧಾರಿತ ಆಂಡ್ರಾಯ್ಡ್‌ ಪೈ 9.0 ಆಪರೇಟಿಂಗ್ ಸಿಸ್ಟಮ್ ಬೆಂಬಲ ಹೊಂದಿದೆ. ಮಲ್ಟಿಟಾಸ್ಕ್‌ ಕೆಲಸಗಳನ್ನು ಅತ್ಯುತ್ತಮವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆದಿದೆ.

ಓದಿರಿ : 'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ! ಓದಿರಿ : 'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!

RAM ಮೆಮೊರಿ

RAM ಮೆಮೊರಿ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM +64GB ಸ್ಟೋರೇಜ್‌, 8GB RAM + 128GB ಸ್ಟೋರೇಜ್‌ ಮತ್ತು 8GB RAM + 256GB ಆಂತರಿಕ ಸಂಗ್ರಹದ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್‌ ಕ್ಯಾಮೆರಾ

ಡ್ಯುಯಲ್‌ ಕ್ಯಾಮೆರಾ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.7 ಅಪಾರ್ಚರ್‌ ಸಾಮರ್ಥ್ಯದೊಂದಿಗೆ 16ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿಗಾಗಿ ಫ್ಲ್ಯಾಶ್‌ ಲೈಟ್‌ ಜೊತೆಗೆ ಪಾಪ್‌ಅಪ್‌ ಕ್ಯಾಮೆರಾ ನೀಡಲಾಗಿದ್ದು, ಅದು ಸಹ 16ಎಂಪಿ ಸೆನ್ಸಾರ್‌ನಲ್ಲಿದೆ.

ಓದಿರಿ : ವಾಟ್ಸಪ್ ಈಗ ಮತ್ತಷ್ಟು ಸುಲಭ!..ಸೇರಲಿದೆ ಮತ್ತೆ ಹೊಸ ಫೀಚರ್!ಓದಿರಿ : ವಾಟ್ಸಪ್ ಈಗ ಮತ್ತಷ್ಟು ಸುಲಭ!..ಸೇರಲಿದೆ ಮತ್ತೆ ಹೊಸ ಫೀಚರ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 3,765mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಡ್ಯುಯಲ್‌ ಬ್ಯಾಂಡ್‌ ವೈಫೈ, ಬ್ಲೂಟೂತ್ 5.0, A-GPS ಜೊತೆಗೆ GLONASS, ಗೇಮ್‌ಬೂಸ್ಟ್‌ 2.0, ಫ್ರೇಮ್‌ ಬೂಸ್ಟ್‌ ಮತ್ತು ಟಚ್‌ ಬೂಸ್ಟ್‌ ಆಯ್ಕೆಗಳನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಚೀನಾದಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಇದೇ ಜುಲೈ 19ರಂದು ಇ ಕಾಮರ್ಸ್‌ ತಾಣ ಅಮೆಜಾನ್‌ ಸಹಯೋಗದೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಪರ್ಪಲ್, ಮಾರ್ನಿಂಗ್ ವೈಟ್‌ ಮತ್ತು ಡಾರ್ಕ್‌ ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಈ ಸ್ಮಾರ್ಟ್‌ಫೋನ್‌ ಹೈ ಎಂಡ್‌ ವೇರಿಯಂಟ್‌ ಬೆಲೆಯು 23,000ರೂ.ಗಳು ಎಂದು ಊಹಿಸಲಾಗಿದೆ.

ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?

Best Mobiles in India

English summary
The OPPO said that K3 smartphone will be launching in the country on July 19th in collaboration with the e-tailer Amazon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X