ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!

|

ಚೀನಾ ಮೂಲದ ಒಪ್ಪೊ ಕಂಪನಿಯ ಇತ್ತೀಚಿಗೆ ಚೀನಾದಲ್ಲಿ ಲಾಂಚ್‌ ಮಾಡಿದ್ದ ಒಪ್ಪೊ ಕೆ3 ಸ್ಮಾರ್ಟ್‌ಫೋನ್‌ ಅನ್ನು ಇದೇ ಜುಲೈ19ರಂದು ಭಾರತೀಯ ಮಾರುಕಟ್ಟೆಗೆಗೂ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಪಾಪ್‌ಅಪ್‌ ಸೆಲ್ಫ ಕ್ಯಾಮೆರಾ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ ಶಕ್ತಿಯ ಜೊತೆಗೆ ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ.

ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!

ಹೌದು, ಒಪ್ಪೊ ಕಂಪನಿಯು ದೇಶಿಯ ಮಾರುಕಟ್ಟೆಗೆ 'ಒಪ್ಪೊ ಕೆ3' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, 6GB RAM + 64GB ಮತ್ತು 8GB RAM + 128GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.ಇದರೊಂದಿಗೆ 3,765mAh ಸಾಮರ್ಥ್ಯದ ಬ್ಯಾಟರಿ ಪವರ್‌ ಹೊಂದಿದ್ದು, ಜೊತೆಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ.

ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!

ಆರಂಭಿಕ ಬೆಲೆಯು 16,990ರೂ.ಗಳು ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿರುವ ಈ ಸ್ಮಾರ್ಟ್‌ಫೋನ್‌ ಎರಡು ಗ್ರೆಡಿಯಂಟ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಡ್ಯುಯಲ್ ರಿಯರ್‌ ಕ್ಯಾಮೆರಾ ಸೌಲಭ್ಯವನ್ನು ನೀಡಲಾಗಿದೆ. ಹಾಗಾದರೇ ಒಪ್ಪೊ ಕೆ3 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ :  ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 2,340 x 1,080 ಪಿಲ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.5 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 396 PPIರಷ್ಟು ಆಗಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.91.1% ರಷ್ಟಾಗಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಸಹ ಪಡೆದುಕೊಂಡಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 2.2 GHz ವೇಗದ ಆಕ್ಟಾ ಕೋರ್‌ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್‌OS 6.0 ಆಧಾರಿತ ಆಂಡ್ರಾಯ್ಡ್‌ ಪೈ 9.0 ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದುಕೊಂಡಿದ್ದು, ಮಲ್ಟಿಟಾಸ್ಕ್‌ ಕೆಲಸಗಳನ್ನು ಅತ್ಯುತ್ತಮವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಈ ಫೋನಿನಲ್ಲಿ ಕಾಣಬಹುದು.

ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ! ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

RAM ಮೆಮೊರಿ

RAM ಮೆಮೊರಿ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM +64GB ಸ್ಟೋರೇಜ್‌ ಮತ್ತು 8GB RAM + 128GB ಸ್ಟೋರೇಜ್‌ನ ಆಂತರಿಕ ಸಂಗ್ರಹದ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್‌ ಕ್ಯಾಮೆರಾ

ಡ್ಯುಯಲ್‌ ಕ್ಯಾಮೆರಾ

ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.7 ಅಪಾರ್ಚರ್‌ ಸಾಮರ್ಥ್ಯದೊಂದಿಗೆ 16ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿಗಾಗಿ ಫ್ಲ್ಯಾಶ್‌ ಲೈಟ್‌ ಜೊತೆಗೆ ಪಾಪ್‌ಅಪ್‌ ಕ್ಯಾಮೆರಾ ನೀಡಲಾಗಿದ್ದು, ಅದು ಸಹ 16ಎಂಪಿ ಸೆನ್ಸಾರ್‌ನಲ್ಲಿದೆ.

ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ! ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ!

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಒಪ್ಪೊ ಕೆ3 ಸ್ಮಾರ್ಟ್‌ಫೋನ್ 3,765mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಡ್ಯುಯಲ್‌ ಬ್ಯಾಂಡ್‌ ವೈಫೈ, ಬ್ಲೂಟೂತ್ 5.0, A-GPS ಜೊತೆಗೆ GLONASS, ಗೇಮ್‌ಬೂಸ್ಟ್‌ 2.0, ಫ್ರೇಮ್‌ ಬೂಸ್ಟ್‌ ಮತ್ತು ಟಚ್‌ ಬೂಸ್ಟ್‌ ಆಯ್ಕೆಗಳನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತೀಯ ಮಾರುಕಟ್ಟೆಗೆ ಇದೇ ಜುಲೈ 19ರಂದು(ನೆನ್ನೆ) ಬಿಡುಗಡೆ ಆಗಿರುವ ಒಪ್ಪೊ ಕೆ3 ಸ್ಮಾರ್ಟ್‌ಫೋನ್ ಸೇಲ್‌ ಇದೇ ಜುಲೈ 23ರಂದು ಮಧ್ಯಹ್ನ 12ರಿಂದ ಆರಂಭವಾಗಲಿದೆ. ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. 6GB RAM +64GB ವೇರಿಯಂಟ್ ಬೆಲೆಯು 16,990ರೂ.ಗಳು ಮತ್ತು 8GB RAM + 128GB ವೇರಿಯಂಟ್ ಬೆಲೆಯು 19,990ರೂ.ಗಳಾಗಿವೆ.

ಓದಿರಿ : ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ? ಓದಿರಿ : ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ?

Best Mobiles in India

English summary
The smartphone will be made available in two gradient color options on Amazon India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X