Home
ಸುದ್ದಿಜಾಲ

12,000ರೂ. ಒಳಗೆ ಲಭ್ಯ ಒಪ್ಪೋದ ಈ ಅತ್ಯುತ್ತಮ ಫೋನ್‌ಗಳು!

ಭಾರತದಲ್ಲಿ ಬಹುಪಾಲು ಮಂದಿ ಅಧಿಕ ಬೆಲೆ ನೀಡಿ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಮುಂದಾಗುವುದಿಲ್ಲ.ಈ ಕಾರಣಕ್ಕೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಇರುವ ಅದೆಷ್ಟೋ ಫೋನ್‌ಗಳನ್ನು ವಿವಿಧ ಕಂಪೆನಿಗಳು ಅನಾವರಣ ಮಾಡಿವೆ. ಆದರೂ ಸಹ ಒಪ್ಪೋ ಕಂಪೆನಿಯ ಫೋನ್‌ಗಳು ಹೆಚ್ಚು ಬೇಡಿಕೆ ಹೊಂದಿವೆ.

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ನಿಮಗೆ ಸಾಕಷ್ಟು ಬ್ರ್ಯಾಂಡ್‌ಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರಬಹುದು. ಆದರೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡರೆ ನಿಮಗೆ ಸ್ವಲ್ಪ ಗೊಂದಲ ಉಂಟಾಗಬಹುದು. ಈ ಕಾರಣಕ್ಕೆ ಕೇವಲ 12,000ರೂ. ಗಳ ಒಳಗೆ ಲಭ್ಯ ಇರುವ ಒಪ್ಪೋ ಸ್ಮಾರ್ಟ್‌ಫೋನ್‌ಗಳ ಡಿಟೇಲ್ಸ್‌ ನೀಡಿದ್ದೇವೆ ಓದಿರಿ.

12,000ರೂ. ಒಳಗೆ ಲಭ್ಯ ಒಪ್ಪೋದ ಈ ಅತ್ಯುತ್ತಮ ಫೋನ್‌ಗಳು!

ಒಪ್ಪೋ A17K

ಒಪ್ಪೋ A17K ಸ್ಮಾರ್ಟ್‌ಫೋನ್‌ 6.56 ಇಂಚಿನ ಡಿಸ್‌ಪ್ಲೆ ಹೊಂದಿದ್ದು, 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಈ ಫೋನ್‌ನ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿ ಹೊಂದಿದೆ. ಇನ್ನುಳಿದಂತೆ ಈ ಫೋನ್ ಹಿಲಿಯೋ G35 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 3 GB RAM ಹಾಗೂ 64 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಈ ಫೋನ್ 9,438ರೂ. ಗಳ ಬೆಲೆ ಹೊಂದಿದೆ.

ಒಪ್ಪೋ A16e

ಒಪ್ಪೋ A16e ಸ್ಮಾರ್ಟ್‌ಫೋನ್ 6.52 ಇಂಚಿನ ಡಿಸ್‌ಪ್ಲೇಯೊಂದಿಗೆ 720 x 1600 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಜೊತೆಗೆ ಹಿಲಿಯೋ P22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು,3 GB RAM ಹಾಗೂ 32 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹಾಗೂ 4230 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ವಿಶೇಷ ಎನಿಸಿದ್ದು, ನೀವು 8,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು.

ಒಪ್ಪೋ A15s

ಒಪ್ಪೋ A15s ಸ್ಮಾರ್ಟ್‌ಫೋನ್‌ 6.52 ಇಂಚಿನ ಡಿಸ್‌ಪ್ಲೇಯೊಂದಿಗೆ 720 x 1600 ಪಿಕ್ಸೆಲ್ ರೆಸಲ್ಯೂಶನ್‌ ಹೊಂದಿದೆ. ಇನ್ನು ಹಿಲಿಯೋ P35 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 4 GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 13 MP + 2 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದರಲ್ಲಿದೆ. ಈ ಫೋನ್ ಅನ್ನು 11,490ರೂ. ಗಳಿಗೆ ಖರೀದಿ ಮಾಡಬಹುದು.

12,000ರೂ. ಒಳಗೆ ಲಭ್ಯ ಒಪ್ಪೋದ ಈ ಅತ್ಯುತ್ತಮ ಫೋನ್‌ಗಳು!

ಒಪ್ಪೋ A54

ಒಪ್ಪೋ A54 ಫೋನ್ 6.51 ಇಂಚಿನ 1600 x 720 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದ್ದು, ಹಿಲಿಯೋ P35 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು 13 MP+2 MP+2 MP ಟ್ರಿಪಲ್ ರಿಯರ್‌ ಕ್ಯಾಮೆರಾದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಫೋನ್‌ 11,990ರೂ. ಗಳ ಬೆಲೆಗೆ ಲಭ್ಯ.

ಒಪ್ಪೋ A16K

ಒಪ್ಪೋ A16K ಫೋನ್‌ 6.52 ಇಂಚಿನ 720 x 1600 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದ್ದು, ಹಿಲಿಯೋ G35 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3 GB RAM ಹಾಗೂ 32 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದ್ದು, ರಿಯರ್‌ನಲ್ಲಿ 13 MP ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 4230 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ವಿಶೇಷ ಎನಿಸಿದ್ದು, ಈ ಫೋನ್‌ ಅನ್ನು ಕೇವಲ 8,999ರೂ. ಗಳಿಗೆ ಖರೀದಿಸಬಹುದು.

12,000ರೂ. ಒಳಗೆ ಲಭ್ಯ ಒಪ್ಪೋದ ಈ ಅತ್ಯುತ್ತಮ ಫೋನ್‌ಗಳು!

ಒಪ್ಪೋ A33 2020

ಒಪ್ಪೋ A33 2020 ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 90 Hz ರಿಫ್ರೆಶ್‌ ರೇಟ್‌ ನೀಡಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 460 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 3 GB RAM ಹಾಗೂ 32 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ ಹೊಂದಿದೆ. ಇನ್ನು 13 MP+2 MP+2 MP ಟ್ರಿಪಲ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಈ ಫೋನ್ 10,490ರೂ. ಗಳಿಗೆ ಲಭ್ಯ.

Best Mobiles in India

English summary
If you want to buy the best smartphone at a budget price of just Rs 12,000 you can buy these Oppo smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+