ಒಪ್ಪೋ ಪವರ್‌ಬ್ಯಾಂಕ್ 2 ಬಿಡುಗಡೆ!..ಬೆಲೆ 1,299ರೂ.!

|

ಒಪ್ಪೋ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹಲವು ಸ್ಮಾರ್ಟ್‌ ಡಿವೈಸ್‌ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಆ ಲಿಸ್ಟಿಗೆ ಈಗ ಹೊಸದಾಗಿ ಪವರ್‌ಬ್ಯಾಂಕ್ ಒಂದನ್ನು ಸೇರ್ಪಡೆ ಮಾಡಿಕೊಂಡಿದೆ. ಅದುವೇ ಒಪ್ಪೋ ಪವರ್‌ಬ್ಯಾಂಕ್ 2. ಈ ಪವರ್‌ಬ್ಯಾಂಕ್ 10,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಡಿವೈಸ್‌ ಬೆಲೆಯು ಗ್ರಾಹಕ ಸ್ನೇಹಿ ಆಗಿದೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆಯು ಮಾರುಕಟ್ಟೆಗೆ ಹೊಸದಾಗಿ ಒಪ್ಪೋ ಪವರ್‌ಬ್ಯಾಂಕ್ 2 ಲಾಂಚ್ ಮಾಡಿದೆ. ಈ ಸಾಧನವು 10,000mAh ಸಾಮರ್ಥ್ಯದ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್‌ 18W ಸಾಮರ್ಥ್ಯದ ಟು ವೇ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಖರೀದಿಗೆ ಲಭ್ಯ ಇದೆ. ಈ ಡಿವೈಸ್‌ ಬೆಲೆಯು 1,299ರೂ.ಗಳು ಆಗಿದೆ.

ಪವರ್‌ಬ್ಯಾಂಕ್

ಒಪ್ಪೋದ ಈ ಹೊಸ ಪವರ್‌ಬ್ಯಾಂಕ್ ಒಟ್ಟು ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿದ್ದು, ಎಲ್ಲ ಬಗೆಯ ಸ್ಮಾರ್ಟ್‌ಫೋನ್‌ಗಳಿಗೂ ಪೂರಕವಾಗಿದೆ. ಹಾಗೆಯೇ ಲೋ-ಕರೆಂಟ್ ಮೋಡ್ ಇದ್ದು ಇದು ಸ್ಮಾರ್ಟ್‌ವಾಚ್ ಹಾಗೂ TWS ಬಡ್ಸ್‌ನಂತಹ ಡಿವೈಸ್‌ಗಳ ಚಾರ್ಜಿಂಗ್‌ಗೆ ಪೂರಕವಾಗಿದೆ. ಇದರೊಂದಿಗೆ ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳು ಮತ್ತು ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

ಯುಎಸ್‌ಬಿ

ಇದು ಮೈಕ್ರೋ-ಯುಎಸ್‌ಬಿ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಒಳಗೊಂಡಂತೆ ಎರಡು ಇನ್ ಒನ್ ಚಾರ್ಜಿಂಗ್ ಕೇಬಲ್‌ನೊಂದಿಗೆ ರವಾನಿಸುತ್ತದೆ. ಚಾರ್ಜಿಂಗ್ ಸ್ಥಿತಿಯ ಬಗ್ಗೆ ನಿಮಗೆ ತಿಳಿಸಲು ಎಲ್ಇಡಿ ಸೂಚಕವಿದೆ. ಪವರ್‌ಬ್ಯಾಂಕ್‌ನಲ್ಲಿರುವ ಬ್ಯಾಟರಿ ಬ್ಯಾಕ್‌ಅಪ್‌ ಸ್ಟೇಟಸ್‌ ತಿಳಿಸಲು ನಾಲ್ಕು ಎಲ್‌ಇಡಿ ಲೈಟ್‌ ಇಂಡಿಕೇಟರ್‌ಗಳನ್ನು ನೀಡಲಾಗಿದೆ. VOOK ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ ಸ್ಮಾರ್ಟ್‌ಫೋನ್‌ಗಳಿಗೆ ಈ ಪವರ್‌ಬ್ಯಾಂಕ್ ಅತ್ಯುತ್ತಮ ಸಪೋರ್ಟ್‌ ಒದಗಿಸಲಿದೆ. ಇಂತಹ ಹಲವು ವೈಶಿಷ್ಟತೆಗಳಿಂದಾಗಿ ಮಾರುಕಟ್ಟೆಯಲ್ಲಿನ 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳಲ್ಲಿ ಒಪ್ಪೊದ ಈ ಪವರ್‌ಬ್ಯಾಂಕ್‌ ಭಿನ್ನವಾಗಿ ಕಾಣಿಸುತ್ತದೆ.

ಬ್ಯಾಂಕ್

2019 ರ ನವೆಂಬರ್‌ನಲ್ಲಿ ಒಪ್ಪೊ ಭಾರತದಲ್ಲಿ 20W VOOC ಫಾಸ್ಟ್ ಚಾರ್ಜಿಂಗ್ ಪವರ್ ಬ್ಯಾಂಕ್ ಅನ್ನು ಪ್ರಾರಂಭಿಸಿತ್ತು. 10,000mAh VOOC ಫ್ಲ್ಯಾಷ್ ಚಾರ್ಜ್ ಪವರ್ ಬ್ಯಾಂಕ್ ಅನ್ನು 1,499 ರೂ. ಇದನ್ನು ಅಮೆಜಾನ್ ಇಂಡಿಯಾ ಮತ್ತು ಆಫ್‌ಲೈನ್ ಮಳಿಗೆಗಳ ಮೂಲಕ ಲಭ್ಯಗೊಳಿಸಲಾಯಿತು. ಪವರ್ ಬ್ಯಾಂಕ್ ದ್ವಿಮುಖ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿತ್ತು ಮತ್ತು ಇದು ಎಲ್ಲಾ ಸ್ಮಾರ್ಟ್ಫೋನ್ಗಳೊಂದಿಗೆ ಹೊಂದಿಕೊಳ್ಳುತ್ತದೆ.

Best Mobiles in India

English summary
Oppo Power Bank 2 has been priced at Rs 1,299 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X