ಜಗತ್ತಿನ ತೆಳ್ಳನೆಯ ಫೋನ್ ಒಪ್ಪೊ ಆರ್5 ರೂ 29,990 ಕ್ಕೆ

Written By:

ಭಾರತದಲ್ಲಿ ಒಪ್ಪೊ ಡಿವೈಸ್ ತನ್ನ ಹೆಚ್ಚು ತೆಳ್ಳಗಿನ ಸ್ಮಾರ್ಟ್‌ಫೋನ್ ಆರ್5 ಅನ್ನು ಭಾರತದಲ್ಲಿ ರೂ 29,990 ಕ್ಕೆ ಲಾಂಚ್ ಮಾಡಿದೆ. ಜನವರಿ 1, 2015 ರಂದು ಫೋನ್‌ಗಾಗಿ ಪೂರ್ವ ಬುಕ್ಕಿಂಗ್ ಲಭ್ಯವಾಗುತ್ತಿದೆ.

ಇದನ್ನೂ ಓದಿ: 2014 ರಲ್ಲಿ ಭಾರತದಲ್ಲಿ ನಡೆದಿರುವ ಅತ್ಯಧಿಕ ಹುಡುಕಾಟಗಳು

4.85 ಎಮ್‌ಎಮ್ ದಪ್ಪನೆಯ ಸ್ಮಾರ್ಟ್‌ಫೋನ್ ಆಗಿರುವ ಒಪ್ಪೊ ಆರ್5 ಭಾರತದಲ್ಲಿ ಲಾಂಚ್ ಆಗಿರುವ 'ಸ್ಲಿಮ್ಮೆಸ್ಟ್ ಸ್ಮಾರ್ಟ್‌ಫೋನ್' ಎಂಬ ಬಿರುದಿಗೆ ಪಾತ್ರವಾಗಿದೆ. ವಿವೋಸ್‌ನ ಫ್ಲ್ಯಾಗ್‌ಶಿಪ್ X5Max ಈ ತಿಂಗಳ ಪೂರ್ವ ಭಾಗದಲ್ಲೇ ಲಾಂಚ್ ಆಗಿದ್ದು 4.75mm ದಪ್ಪದಲ್ಲಿ ಜಗತ್ತಿನ ಸ್ಲಿಮ್ ಫೋನ್ ಆಗಿ ಖ್ಯಾತಿಯನ್ನು ಪಡೆದಿದೆ.

ವಿಶ್ವದ ತೆಳ್ಳನೆಯ ಫೋನ್ ಆಗಿ ಒಪ್ಪೊ ಆರ್5

ಒಪ್ಪೊ ಆರ್5, 5.2 ಇಂಚಿನ ಪೂರ್ಣ HD (1080x1920 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಇದರ ಪಿಕ್ಸೆಲ್ ಡೆನ್ಸಿಟಿ 423ppi ಆಗಿದೆ. ಆರ್5 64 ಬಿಟ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 (MSM8939) ಪ್ರೊಸೆಸರ್ ಜೊತೆಗೆ (2.1GHz quad-core + 1.5GHz quad-core) 2 ಜಿಬಿ RAM ಮತ್ತು ಅಡ್ರೆನೊ 405 ಅನ್ನು ಫೋನ್ ಪಡೆದಿದೆ.

ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದ ಜೊತೆಗೆ ಸೋನಿ IMX214 ಸೆನ್ಸಾರ್ ಅನ್ನು ಹೊಂದಿದೆ; ಎಲ್‌ಇಡಿ ಫ್ಲ್ಯಾಶ್ ಕೂಡ ಫೋನ್‌ನಲ್ಲಿದೆ. ಇನ್ನು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು ಕಂಪೆನಿಯ ಕಲರ್ ಓಎಸ್ 2.0.1 ಚಾಲನೆಯಾಗುತ್ತಿದೆ. ಇದು ಸಿಂಗಲ್ ಮೈಕ್ರೋ ಸಿಮ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಫೋನ್‌ನಲ್ಲಿ ನಿಮಗೆ ಕಾಣಬಹುದು. ಇದನ್ನು ವಿಸ್ತರಿಸುವುದು ಸಾಧ್ಯವಿಲ್ಲ.

ಫೋನ್ 2000mAh ಬ್ಯಾಟರಿಯನ್ನು ಹೊಂದಿದ್ದು, VOOC ಚಾರ್ಜಿಂಗ್ ತಂತ್ರಜ್ಞಾನವನ್ನು ಡಿವೈಸ್ ಪಡೆದಿದೆ. ಇದು 0 ಯಿಂದ 75 ಶೇಕಡದಷ್ಟು ಬ್ಯಾಟರಿ ಚಾರ್ಜ್ ಅನ್ನು ಕೇವಲ 30 ನಿಮಿಷಗಳಲ್ಲಿ ಮಾಡುತ್ತದೆ. ಇನ್ನು ಫೋನ್‌ನ ಸಂಪರ್ಕ ವ್ಯವಸ್ಥೆಗಳತ್ತ ಗಮನಹರಿಸುವುದಾದರೆ ವೈಫೈ, ಬ್ಲ್ಯೂಟೂತ್, GPRS/ EDGE, TD LTE, LTE FDD ಹಾಗೂ ಮೈಕ್ರೊ-ಯುಎಸ್‌ಬಿಯನ್ನು ಫೋನ್ ಹೊಂದಿದೆ.

English summary
This article tells about Oppo India, as expected to in December, on Tuesday launched its slimmest smartphone, the R5, in India at Rs. 29,990.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot