OLED ಡಿಸ್ಪ್ಲೇ ಇರುವ ಈ ಒಪ್ಪೋ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಈಗ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಆಯೋಜಿಸಿದ್ದು, ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್‌ಫೊನ್‌ಗಳು ಆಕರ್ಷಕ ರಿಯಾಯಿತಿ ಪಡೆದಿದ್ದು, ಫೋನ್ ಪ್ರಿಯರಗೆ ಅಚ್ಚರಿ ಮೂಡಿಸಿದೆ. ಆ ಪೈಕಿ ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ ಗಮನ ಸೆಳೆವ ರಿಯಾಯಿತಿ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಒಪ್ಪೋ ರೆನೋ 10 5G ಫೋನ್ ಶೇ. 15% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಒಪ್ಪೋ ರೆನೋ 10 5G ಮೊಬೈಲ್ ಆಫರ್ ಬೆಲೆಯು 32,999ರೂ. ಆಗಿದ್ದು, ಇದಲ್ಲದೇ ಬ್ಯಾಂಕ್ ಹಾಗೂ ಇತರೆ ಕೊಡುಗೆ ಸೇರಿ ಈ ಫೋನ್ ಅನ್ನು ಗ್ರಾಹಕರು 29,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಒಪ್ಪೋ ಸಂಸ್ಥೆಯ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಅನುಗುಣವಾಗಿ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಹಾಗಾದರೆ ಒಪ್ಪೋ ರೆನೋ 10 5G ಮೊಬೈಲ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಹಾಗೂ ವಿನ್ಯಾಸ ರಚನೆ ಹೀಗಿದೆ
ಒಪ್ಪೋ ರೆನೋ 10 5G ಮೊಬೈಲ್ 6.74 ಇಂಚಿನ OLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 950 ನೀಟ್ಸ್ ಬ್ರೈಟ್‌ನೆಸ್‌ನೊಂದಿಗೆ ಅನ್ನು ಪಡೆದುಕೊಂಡಿದೆ.
ಪ್ರೊಸೆಸರ್ ಪವರ್ ಎಷ್ಟಿದೆ
ಒಪ್ಪೋ ರೆನೋ 10 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಇದು ಆಂಡ್ರಾಯ್ಡ್ 13 ಓಎಸ್ ಬೆಂಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಮೊಬೈಲ್ 8GB + 256 GB ಸ್ಟೋರೇಜ್ ಕಾನ್ಫಿಗರೇಶನ್ ಆಯ್ಕೆ ಪಡೆದುಕೊಂಡಿದೆ.
ಕ್ಯಾಮೆರಾ ಸೆನ್ಸಾರ್ ಎಷ್ಟಿದೆ
ಒಪ್ಪೋ ರೆನೋ 10 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಓಮ್ನಿವಿಷನ್ OV64B ಸೆನ್ಸಾರ್, ದ್ವಿತೀಯ ಕ್ಯಾಮೆರಾ 32 ಮೆಗಾ ಪಿಕ್ಸಲ್ ಟೆಲಿಫೋಟೋ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಲೆನ್ಸ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ 4600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು 100W SuperVOOC ಫ್ಲ್ಯಾಶ್ ಚಾರ್ಜ್ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi, ಬ್ಲೂಟೂತ್, GPS, ಮತ್ತು USB ಟೈಪ್-C ಪೋರ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.


Click it and Unblock the Notifications








