Home
ಸುದ್ದಿಜಾಲ

3D ಕರ್ವ್ಡ್‌ ಡಿಸ್‌ಪ್ಲೇ ಇರುವ ಒಪ್ಪೋದ ಈ ಫೋನಿನ ಬೆಲೆಯಲ್ಲಿ ಸಖತ್‌ ಇಳಿಕೆ!

ಪ್ರಮುಖ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಸೇಲ್‌ ಮೇಳ ಆಯೋಜಿಸಿ ಗ್ರಾಹಕರ ಗಮನ ಸೆಳೆಯುತ್ತದೆ. ಸದ್ಯ ಫ್ಲಿಪ್‌ಕಾರ್ಟ್‌ ತಾಣವು ಸೂಪರ್‌ ವ್ಯಾಲ್ಯೂ ಸೇಲ್‌ ಮಾರಾಟ ಮೇಳವನ್ನು ಆಯೋಜಿಸಿದ್ದು, ಆಯ್ದ ಕೆಲವು ಸ್ಮಾರ್ಟ್‌ಫೊನ್‌ಗಳಿಗೆ ಬೊಂಬಾಟ್‌ ರಿಯಾಯಿತಿ ಘೋಷಿಸಿದೆ. ಸೇಲ್‌ನಲ್ಲಿ ಒಪ್ಪೋ ಸಂಸ್ಥೆಯ ಈ ಪ್ರೀಮಿಯಂ ಫೋನ್‌ ಆಕರ್ಷಕ ಬೆಲೆ ಇಳಿಕೆ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಸಂಸ್ಥೆಯ 'ಸೂಪರ್‌ ವ್ಯಾಲ್ಯೂ ಸೇಲ್‌' ನಲ್ಲಿ ಒಪ್ಪೋ ರೆನೋ 10 5G ಮೊಬೈಲ್‌ ಬರೋಬ್ಬರಿ ಶೇ. 15% ರಷ್ಟು ನೇರ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 12 GB RAM + 256 GB ವೇರಿಯಂಟ್‌ 37,999ರೂ. ಗಳ ಆಫರ್‌ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಕೆಲವು ಬ್ಯಾಂಕ್‌ ಮತ್ತು ಇತರೆ ಆಫರ್‌ ಪಡೆದುಕೊಂಡರೆ, ಇನ್ನಷ್ಟು ರಿಯಾಯಿತಿಯಲ್ಲಿ ಫೋನ್‌ ಖರೀದಿ ಮಾಡಬಹುದಾಗಿದೆ.

3D ಕರ್ವ್ಡ್‌ ಡಿಸ್‌ಪ್ಲೇ ಇರುವ ಒಪ್ಪೋದ ಈ ಫೋನಿನ ಬೆಲೆಯಲ್ಲಿ ಸಖತ್‌ ಇಳಿಕೆ!

ಅಂದಹಾಗೆ ರಿಯಲ್‌ಮಿ ಈ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ ಎರಡು ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಸೆನ್ಸಾರ್ ಅನ್ನು ಹೊಂದಿದೆ. ಹಾಗಾದರೆ ಒಪ್ಪೋ ರೆನೋ 10 5G ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

3D ಕರ್ವ್ಡ್‌ ಡಿಸ್‌ಪ್ಲೇ ಇರುವ ಒಪ್ಪೋದ ಈ ಫೋನಿನ ಬೆಲೆಯಲ್ಲಿ ಸಖತ್‌ ಇಳಿಕೆ!

ಒಪ್ಪೋ ರೆನೋ 10 5G ಫೀಚರ್ಸ್‌ ಹೀಗಿವೆ

ಒಪ್ಪೋ ರೆನೋ 10 5G ಮೊಬೈಲ್‌ 6.74 ಇಂಚಿನ OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಸಪೋರ್ಟ್‌ ಮಾಡಲಿದ್ದು, 950 ನೀಟ್ಸ್‌ ಬ್ರೈಟ್‌ನೆಸ್‌ನೊಂದಿಗೆ ಅನ್ನು ಒಳಗೊಂಡಿದೆ.

ಹಾಗೆಯೇ ಒಪ್ಪೋ ರೆನೋ 10 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಇದು ಆಂಡ್ರಾಯ್ಡ್‌ 13 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಮೊಬೈಲ್‌ 8GB + 256 GB ಹಾಗೂ 12 GB RAM + 256 GB ಸ್ಟೋರೇಜ್ ಕಾನ್ಫಿಗರೇಶನ್ ಆಯ್ಕೆಗಳನ್ನು ಪಡೆದುಕೊಂಡಿದೆ.

3D ಕರ್ವ್ಡ್‌ ಡಿಸ್‌ಪ್ಲೇ ಇರುವ ಒಪ್ಪೋದ ಈ ಫೋನಿನ ಬೆಲೆಯಲ್ಲಿ ಸಖತ್‌ ಇಳಿಕೆ!

ಒಪ್ಪೋ ರೆನೋ 10 5G ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಓಮ್ನಿವಿಷನ್ OV64B ಸೆನ್ಸಾರ್‌ ಪಡೆದಿದೆ. ಇದರ ಎರಡನೇ ಕ್ಯಾಮೆರಾ 32 ಮೆಗಾ ಪಿಕ್ಸಲ್‌ ಟೆಲಿಫೋಟೋ ಸೆನ್ಸಾರ್‌ ಪಡೆದುಕೊಂಡಿದೆ.

ಅದೇ ರೀತಿ ಈ ಫೋನಿನ ತೃತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಒಪ್ಪೋ ರೆನೋ 10 5G ಮೊಬೈಲ್‌ 4600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 100W SuperVOOC ಫ್ಲ್ಯಾಶ್ ಚಾರ್ಜ್ ಸಪೋರ್ಟ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi, ಬ್ಲೂಟೂತ್, GPS, ಮತ್ತು USB ಟೈಪ್-C ಪೋರ್ಟ್ ಚಾರ್ಜಿಂಗ್‌ ಸಪೋರ್ಟ್‌ ಹೊಂದಿದೆ. ಇದರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಪಡೆದಿದೆ.

Best Mobiles in India

English summary
OPPO Reno 10 Pro 5G big price drop in india. offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+