Home
ಸುದ್ದಿಜಾಲ

ಒಪ್ಪೋ ರೆನೋ 10 ಪ್ರೊ 5G ಫೋನ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!..ಈ ಚಾನ್ಸ್‌ ಬಿಡಬೇಡಿ!

ಒಪ್ಪೋ ಸಂಸ್ಥೆಯು ಇತ್ತೀಚಿಗೆ ಚೀನಾದಲ್ಲಿ ತನ್ನ ಒಪ್ಪೋ ರೆನೋ 11 ಸ್ಮಾರ್ಟ್‌ಫೊನ್‌ ಸರಣಿಯನ್ನು ಪ್ರಾರಂಭಿಸಿತು. ಈ ಸರಣಿಯು ಈ ಹಿಂದಿನ ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್‌ ಉತ್ತರಾಧಿಕಾರಿ ಆಗಿದೆ. ಆದರೆ ದೇಶಿಯ ಮಾರುಕಟ್ಟೆಗೆ ರೆನೋ 11 ಸ್ಮಾರ್ಟ್‌ಫೊನ್‌ ಸರಣಿ ಎಂಟ್ರಿ ನೀಡುವ ಮುನ್ನವೇ ಒಪ್ಪೋ ರೆನೋ 10 ಪ್ರೊ 5G ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ.

ಹೌದು, ಒಪ್ಪೋ ಸಂಸ್ಥೆಯು ತನ್ನ ಒಪ್ಪೋ ರೆನೋ 10 ಪ್ರೊ 5G (OPPO Reno 10 Pro 5G) ಫೋನ್‌ ಬೆಲೆಯಲ್ಲಿ ಶಾಶ್ವತವಾಗಿ 2,000ರೂ. ಗಳ ಇಳಿಕೆ ಮಾಡಿದೆ. ಈ ಫೋನ್‌ 12 GB RAM ಮತ್ತು 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇದರ ಬೆಲೆಯು 39,999ರೂ. ಆಗಿದ್ದು, ಬೆಲೆ ಇಳಿಕೆಯಿಂದಾಗಿ ಇನ್ನು 37,999ರೂ. ಗಳಿಗೆ ಈ ಫೋನ್‌ ಖರೀದಿಗೆ ಲಭ್ಯ.

ಒಪ್ಪೋ ರೆನೋ 10 ಪ್ರೊ 5G ಫೋನ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!..ಈ ಚಾನ್ಸ್‌ ಬಿಡಬೇಡಿ

ಅಂದಹಾಗೆ ಒಪ್ಪೋ ರೆನೋ 10 ಪ್ರೊ 5G ಮೊಬೈಲ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಇದು ಒಳಗೊಂಡಿದೆ. ಅಲ್ಲದೇ 4,350mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ಕೂಡಾ ಪಡೆದುಕೊಂಡಿದೆ. ಹಾಗಾದರೇ ಒಪ್ಪೋ ರೆನೋ 10 5G ಮೊಬೈಲ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ರೆನೋ 10 ಪ್ರೊ 5G ಫೋನ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!..ಈ ಚಾನ್ಸ್‌ ಬಿಡಬೇಡಿ

ಡಿಸ್‌ಪ್ಲೇ ಡಿಸೈನ್‌ ಹಾಗೂ ರಚನೆಯ ಮಾಹಿತಿ

ಒಪ್ಪೋ ರೆನೋ 10 ಪ್ರೊ 5G ಫೋನ್‌ 6. 74 ಇಂಚಿನ ಕರ್ವ್ಡ್ OLED ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದ್ದು, 20:9 ಆಕಾರ ಅನುಪಾತ ಪಡೆದಿದೆ. ಇದರೊಂದಿಗೆ 1080 x 2400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿರುವ ಬೆಜೆಲ್-ಫ್ರೀ ಪಂಚ್ ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ನ ರಿಫ್ರೆಶ್ ರೇಟ್‌ ಆಯ್ಕೆ ಹಾಗೂ 240Hz ಸ್ಯಾಂಪ್ಲಿಂಗ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.

ಯಾವ ಪ್ರೊಸೆಸರ್‌ ಸೌಲಭ್ಯ ಲಭ್ಯ

ರೆನೋ 10 ಪ್ರೊ 5G ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಇದು 642L GPU ಸಪೋರ್ಟ್‌ ಸಹ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 12GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದುಕೊಂಡಿದೆ.

ಒಪ್ಪೋ ರೆನೋ 10 ಪ್ರೊ 5G ಫೋನ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!..ಈ ಚಾನ್ಸ್‌ ಬಿಡಬೇಡಿ

ಕ್ಯಾಮೆರಾ ಸೆನ್ಸಾರ್ ಮಾಹಿತಿ

ರೆನೋ 10 ಪ್ರೊ 5G ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡಿದೆ. ದ್ವಿತೀಯ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದ್ದರೇ, ತೃತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ. ಇನ್ನು ಇದರ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆನ್ಸಾರ್‌ಮ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ರೆನೋ 10 ಪ್ರೊ 5G ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಹಾಗೆಯೇ ಇದು ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಲೈಟ್‌ವೈಟ್‌ ರಚನೆ ಗ್ರಾಹಕರನ್ನು ಸೆಳೆಯುವ ಪ್ರಮುಖ ಅಂಶಗಳಲ್ಲಿ ಒಂದಾಗಿವೆ. ಇನ್ನು ಈ ಫೋನ್‌ ಅನ್ನು ಗ್ರಾಹಕರು ಸಿಲ್ವರ್ ಗ್ರೇ ಹಾಗೂ ಗ್ಲೋಸಿ ಪರ್ಪಲ್ ಕಲರ್‌ನಲ್ಲಿ ಖರೀದಿಸಲು ಅವಕಾಶ ಇದೆ.

Best Mobiles in India

English summary
OPPO Reno 10 Pro 5G Receives permanent price cut in India. check offer price and specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+