ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಎಂಟ್ರಿ ಕೊಡ್ತು ಒಪ್ಪೋ ರೆನೋ 10 ಫೋನ್: ಫೀಚರ್ಸ್ ಏನು!
ಒಪ್ಪೋ(OPPO) ಸಂಸ್ಥೆಯು ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಫೋನ್‌ಗಳು ವಿವಿಧ ಫೀಚರ್ಸ್ ಹಾಗೂ ವಿಶೇಷ ಶೈಲಿಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಮುಂದಾಗಿವೆ. ಅಷ್ಟು ಮಾತ್ರವಲ್ಲದೆ ಫಾಸ್ಟ್ ಚಾರ್ಜಿಂಗ್ ಫೀಚರ್ಸ್ ಅಂತೂ ಬಳಕೆದಾರರನ್ನು ಸೆಳೆಯದೆ ಇರದು.
ಹೌದು, ಒಪ್ಪೋ ತನ್ನ ಬಹು ನಿರೀಕ್ಷಿತ ರೆನೋ 10 ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯಲ್ಲಿ ರೆನೋ 10, ರೆನೋ 10 ಪ್ರೊ ಮತ್ತು ರೆನೋ 10 ಪ್ರೊ+ ಸೇರಿವೆ. ಇನ್ನು ಈ ಮೇ ತಿಂಗಳಲ್ಲಿ ಚೀನಾದಲ್ಲಿ ಈ ರೆನೋ 10 ಸರಣಿಯನ್ನು ಪ್ರಾರಂಭ ಮಾಡಲಾಗಿತ್ತು. ಇದೀಗ ಈ ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡಿವೆ. ಈ ಫೋನ್‌ಗಳಲ್ಲಿ ರೆನೋ 10 ಫೋನ್ ವಿಶೇಷ ಎನಿಸಿದ್ದು, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯಲು ಈ ಲೇಖನ ಓದಿರಿ.

ಒಪ್ಪೋ ರೆನೋ 10 ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಅಮೋಲೆಡ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಪಡೆದಿದೆ. ಜೊತೆಗೆ ಈ ಫೋನ್‌ನಲ್ಲಿ ಇರುವ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಫೋನ್‌ನ ಬಳಕೆಯಲ್ಲಿ ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ.
ಒಪ್ಪೋ ರೆನೋ 10 ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಬಲ ಹೊಂದಿದ್ದು, ಮೂರು ಸ್ಟೋರೇಜ್ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ 8GB RAM ಮತ್ತು 12GB RAM, 256GB ಸ್ಟೋರೇಜ್ ಗಮನಾರ್ಹವಾಗಿದೆ. ಉಳಿದಂತೆ 8GB ವರೆಗೆ RAM ವಿಸ್ತರಣೆಗೂ ಈ ಫೋನ್ ಬೆಂಬಲ ನೀಡುತ್ತದೆ.
ಒಪ್ಪೋ ರೆನೋ 10 ಕ್ಯಾಮೆರಾ ಫೀಚರ್ಸ್: ಇದರ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ 64MP ಪ್ರಾಥಮಿಕ ಕ್ಯಾಮೆರಾ, 32MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಜೊತೆಗೆ ಸೆಲ್ಫಿ ಉದ್ದೇಶಕ್ಕೆ 32MP ಕ್ಯಾಮೆರಾ ಆಯ್ಕೆ ಹೊಂದಿದೆ.
ಒಪ್ಪೋ ರೆನೋ 10 ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 67W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಬೆಂಬಲ ನೀಡಲಿದೆ. ಅಂದರೆ 47 ನಿಮಿಷಗಳಲ್ಲಿ ಈ ಫೋನ್ ಭರ್ತಿ ಆಗುತ್ತದೆ. ಉಳಿದಂತೆ ಈ ಫೋನ್ ಸುಧಾರಿಯ ವೈ-ಫೈ, ಬ್ಲೂಟೂತ್‌ನ ಇತ್ತೀಚಿನ ಆವೃತ್ತಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ.
ಈ ಫೋನ್ ನ ಬೆಲೆಯನ್ನು ಈವರೆಗೂ ನಿರ್ಧಾರ ಮಾಡಿಲ್ಲ. ಆದರೆ, ಜುಲೈ 20 ರಂದು ಫ್ಲಿಪ್‌ಕಾರ್ಟ್ ಮೂಲಕ ಇದರ ಬೆಲೆ ಬಹಿರಂಗಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಫೋನ್ ಆಂಡ್ರಾಯ್ಡ್ 13 ಅನ್ನು ಆಧರಿಸಿ ಕಲರ್‌ಓಎಸ್ 13 ಅನ್ನು ರನ್ ಮಾಡುತ್ತದೆ. ಉಳಿದಂತೆ ಇದು ಐಸ್ ಬ್ಲೂ ಮತ್ತು ಸಿಲ್ವರಿ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಕಂಡುಬಂದಿದೆ.

ಈ ಫೋನ್‌ಗಳ ಜೊತೆಗೆ ಒಪ್ಪೋ ಸಂಸ್ಥೆಯು ಒಪ್ಪೋ ಎನ್ಕೋ ಏರ್ 3 ಪ್ರೊ(Oppo Enco Air 3 Pro) ಇಯರ್‌ಬಡ್ಸ್ ಅನ್ನು ಸಹ ಅನಾವರಣ ಮಾಡಿದೆ. ಇದು ಸಕ್ರಿಯ ಶಬ್ದ ರದ್ದತಿ (ANC) ಯೊಂದಿಗೆ ಪ್ಯಾಕ್ ಆಗಿದ್ದು, ಇದರೊಂದಿಗೆ ಇದು ಉತ್ತಮ ಗುಣಮಟ್ಟದ LDAC ಬ್ಲೂಟೂತ್ ಕೊಡೆಕ್‌ಗೆ ಬೆಂಬಲವನ್ನು ಹೊಂದಿದೆ. ಇಯರ್‌ಬಡ್‌ಗಳು 49db ವರೆಗೆ ಶಬ್ದ ರದ್ದತಿ ಡೀಪ್ ಅನ್ನು ನೀಡಲಿದ್ದು, ಸ್ಪರ್ಶ ಕಂಟ್ರೋಲ್ ಆಯ್ಕೆ ಪಡೆದುಕೊಂಡಿವೆ. ಇದು 4,999ರೂ.ಗಳ ಬೆಲೆ ಹೊಂದಿದೆ.


Click it and Unblock the Notifications








