ಬಹುನಿರೀಕ್ಷಿತ 'ಒಪ್ಪೊ ರೆನೊ' ಮತ್ತು 'ರೆನೊ 10X ಝೂಮ್‌' ಭಾರತದಲ್ಲಿ ಬಿಡುಗಡೆ!

|

ಸೆಲ್ಫಿ ಎಕ್ಸ್‌ಪರ್ಟ್‌ ಹೆಸರುವಾಸಿ ಒಪ್ಪೊ ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ ರೆನೊ ಇತ್ತೀಚಿಗೆ ಚೀನಾದಲ್ಲಿ ರೆನೊ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಯುವ ಗ್ರಾಹಕರನ್ನು ಸೆಳೆದಿದೆ. ತನ್ನ ಜನಪ್ರಿಯ 'ರೆನೊ 10X ಝೂಮ್‌ ಎಡಿಷನ್' ಮತ್ತು 'ಒಪ್ಪೊ ರೆನೊ' ಹೆಸರಿನ ಎರಡು ಸ್ಮಾರ್ಟ್‌ಫೋನ್‌ ಅನ್ನು ಇದೇ 28ರಂದು(ನೆನ್ನೆ) ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಿದ್ದು, ದೇಶಿಯ ಯುವ ಸಮೂಹದ ಗಮನಸೆಳೆದಿದೆ.

ಬಹುನಿರೀಕ್ಷಿತ 'ಒಪ್ಪೊ ರೆನೊ' ಮತ್ತು 'ರೆನೊ 10X ಝೂಮ್‌' ಭಾರತದಲ್ಲಿ ಬಿಡುಗಡೆ!

ಹೌದು, ಒಪ್ಪೊ ತನ್ನ ಸಬ್‌ ಬ್ಯ್ರಾಂಡ್‌ ರೆನೊ ಹೆಸರಿನಡಿ 'ರೆನೊ 10X ಝೂಮ್‌ ಎಡಿಷನ್' ಮತ್ತು 'ಒಪ್ಪೊ ರೆನೊ' ಎರಡು ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಇದೇ ಮೇ 28ರಂದು(ನೆನ್ನೆ) ಲಾಂಚ್‌ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿನ ಪ್ರಮುಖ ಹೈಲೈಟ್‌ ಎಂದರೇ ಸ್ವಿಂಗ್‌ ಸೆಲ್ಫಿ ಕ್ಯಾಮೆರಾ ಆಗಿದ್ದು, ರೆನೊ 10X ಝೂಮ್‌ ಎಡಿಷನ್ ಫೋನ್‌, 10X ಝೂಮ್‌ ಹೈಬ್ರಿಡ್‌ ಆಪ್ಟಿಕಲ್‌ ಝೂಮ್‌ ಫೀಚರ್‌ ಹೊಂದಿದೆ.

ಬಹುನಿರೀಕ್ಷಿತ 'ಒಪ್ಪೊ ರೆನೊ' ಮತ್ತು 'ರೆನೊ 10X ಝೂಮ್‌' ಭಾರತದಲ್ಲಿ ಬಿಡುಗಡೆ!

ರೆನೊ 10X ಝೂಮ್‌ ಎಡಿಷನ್ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದರೇ, ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಆಂತರಿಕ ಸಂಗ್ರಹ ಶಕ್ತಿಯನ್ನು ಒಳಗೊಂಡಿದೆ. ಹಾಗೆಯೇ ಹೈದ್ರಾಬಾದ್‌ನಲ್ಲಿ ಒಪ್ಪೊ ಫ್ಲ್ಯಾಗ್‌ಶಿಪ್‌ ಸ್ಟೋರ್‌ ಅನ್ನು ತರೆಯುವುದಾಗಿ ಸಹ ಘೋಷಿಸಲಾಗಿದೆ. ಹಾಗಾದರೇ ಒಪ್ಪೊ ರೆನೊ 10X ಝೂಮ್‌ ಎಡಿಷನ್' ಮತ್ತು 'ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!ಓದಿರಿ : ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!

ಡಿಸೈನ್‌

ಡಿಸೈನ್‌

ಎರಡು ಸ್ಮಾರ್ಟ್‌ಫೋನ್‌ ಬಹುತೇಕ ಒಂದೇ ತರಹ ಡಿಸೈನ್‌ ಹೊಂದಿದ್ದು, 3D ಗ್ಲಾಸ್‌ ರಕ್ಷಣೆ ಒದಗಿಸಲಾಗಿದೆ. O-Dot ಸಿರಾಮಿಕ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಸೆಲ್ಫಿಗಾಗಿ ಶಾರ್ಕ್‌ ಫಿನ್‌ ಸೈಡ್‌ ಸ್ವಿಂಗ್‌ ಮಾದರಿಯ ಕ್ಯಾಮೆರಾ ಪರಿಚಯಿಸಲಾಗಿದ್ದು, ಅಲ್ಟ್ರಾ ಸಾನಿಕ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಗಳನ್ನು ಹೊಂದಿದೆ.

ಒಪ್ಪೊ ರೆನೊ ಡಿಸ್‌ಪ್ಲೇ

ಒಪ್ಪೊ ರೆನೊ ಡಿಸ್‌ಪ್ಲೇ

ಒಪ್ಪೊ ರೆನೊ ಡಿಸ್‌ಪ್ಲೇಯು 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಪನೋರಮಿಕ್ AMOLED ಡಿಸ್‌ಪ್ಲೇ ನೀಡಲಾಗಿದ್ದು, ಸ್ಕ್ರೀನ್‌ನಿಂದ ಬಾಹ್ಯಾ ಬಾಡಿಯ ನಡುವಿನ ಅಂತರ ಶೇ.93.1 ಆಗಿದೆ. ಸ್ಕ್ರೀನ್‌ ರಕ್ಷಣೆಗೆ ಆರನೇ ತಲೆಮಾರಿನ ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗಿದೆ.

10X ಝೂಮ್‌ ಡಿಸ್‌ಪ್ಲೇ

10X ಝೂಮ್‌ ಡಿಸ್‌ಪ್ಲೇ

10X ಝೂಮ್‌ ಡಿಸ್‌ಪ್ಲೇಯು 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.60 ಇಂಚಿನ ಫುಲ್‌ ಹೆಚ್‌ಡಿ ಪನೋರಮಿಕ್ AMOLED ಡಿಸ್‌ಪ್ಲೇ ನೀಡಲಾಗಿದ್ದು, ಸ್ಕ್ರೀನ್‌ನಿನ ಸುತ್ತಲೂ ಕಡಿಮೆ ಅಂಚಿನಿಂದ ಕೂಡಿದ್ದು, ಸ್ಕ್ರೀನ್‌ ರಕ್ಷಣೆಗೆ ಆರನೇ ತಲೆಮಾರಿನ ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗಿದೆ.

ಒಪ್ಪೊ ರೆನೊ ಪ್ರೊಸೆಸರ್‌

ಒಪ್ಪೊ ರೆನೊ ಪ್ರೊಸೆಸರ್‌

ಒಪ್ಪೊ ರೆನೊ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 710 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9 ಓಎಸ್‌ ಇದರಲ್ಲಿ ಕಾರ್ಯ ನಿರ್ವಹಿಸಲಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒದಗಿಸಲಾಗಿದೆ.

ರೆನೊ 10X ಝೂಮ್‌ ಪ್ರೊಸೆಸರ್‌

ರೆನೊ 10X ಝೂಮ್‌ ಪ್ರೊಸೆಸರ್‌

ಒಪ್ಪೊ ರೆನೊ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 855 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9 ಓಎಸ್‌ ಇದರಲ್ಲಿ ಕಾರ್ಯ ನಿರ್ವಹಿಸಲಿದೆ. 6GB ಮತ್ತು 8GB RAM ಹಾಗೂ ಇಲ್ಲಿಯೂ ಸಹ 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒದಗಿಸಲಾಗಿದೆ.

ಒಪ್ಪೊ ರೆನೊ ಕ್ಯಾಮೆರಾ

ಒಪ್ಪೊ ರೆನೊ ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್‌ ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 18ಎಂಪಿ ಯೊಂದಿಗೆ ಸೋನಿಯ IMX586 ಸೆನ್ಸಾರ್‌ ಅನ್ನು ಸಹ ಹೊಂದಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಒಂದಿಗೆ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಸೆಲ್ಫಿಗಾಗಿ ಐಕಾನಿಕ್ ಶಾರ್ಕ್‌ ಫಿನ್‌ ಸ್ವಿಂಗ್‌ ಕ್ಯಾಮೆರಾ ಪರಿಚಯಿಸಿದ್ದು, ಸೆಲ್ಫಿಯು 16ಎಂಪಿ ಸಾಮರ್ಥ್ಯದಲ್ಲಿದೆ.

10X ಝೂಮ್‌ ಕ್ಯಾಮೆರಾ

10X ಝೂಮ್‌ ಕ್ಯಾಮೆರಾ

10X ಝೂಮ್‌ ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ರೇರ್‌ ಕ್ಯಾಮೆರಾವು 48ಎಂಪಿ ಜೊತೆಗೆ ಸೋನಿಯ IMX586 ಸೆನ್ಸಾರ್‌ ಅನ್ನು ಸಹ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 13ಎಂಪಿ ಮತ್ತು ತೃತೀಯ ಕ್ಯಾಮೆರಾವು 8ಎಂಪಿ ಯೊಂದಿಗೆ ಟೆರಿಟರಿ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಮುಂಬದಿ ಸೆಲ್ಫಿಯು 16ಎಂಪಿ ಸಾಮರ್ಥ್ಯದಲ್ಲಿದೆ.

ಒಪ್ಪೊ ರೆನೊ ಬ್ಯಾಟರಿ

ಒಪ್ಪೊ ರೆನೊ ಬ್ಯಾಟರಿ

3,765mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ಬಹುಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೇಯೇ USB Type-C port ಆಯ್ಕೆಯನ್ನು ಸಹ ನೀಡಲಾಗಿದೆ.

10X ಝೂಮ್‌ ಬ್ಯಾಟರಿ

10X ಝೂಮ್‌ ಬ್ಯಾಟರಿ

4,065mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ಬಹುಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೇಯೇ USB Type-C port ಆಯ್ಕೆಯನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೊ ರೆನೊ ಮತ್ತು ರೆನೊ 10X ಝೂಮ್‌ ಸ್ಮಾರ್ಟ್‌ಫೋನ್‌ಗಳು ಇದೇ 28ರಂದು ಭಾರತದಲ್ಲಿ ಲಾಂಚ್‌ ಆಗಿದ್ದು, ಇದೇ ಜೂನ್ 7ರಂದು ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಸೇಲ್‌ ಆರಂಭಿಸಲಿವೆ. ಒಪ್ಪೊ ರೆನೊ 8GB RAM ಮತ್ತು 128GB ವೇರಿಯಂಟ್‌ ಬೆಲೆಯು 32,990ರೂ.ಗಳು ಹಾಗೆಯೇ ರೆನೊ 10X ಝೂಮ್‌ 6GB RAM ಮತ್ತು 128GB ವೇರಿಯಂಟ್‌ ಬೆಲೆಯು 39,990ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್‌ ಬೆಲೆಯು 49,990ರೂ.ಗಳು ಆಗಿವೆ.

ಓದಿರಿ : ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!ಓದಿರಿ : ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!

Best Mobiles in India

English summary
Oppo Reno 10x Zoom Edition, Oppo Reno Launched in India: Price, Specifications.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X