Oppo: ಜನವರಿ 18 ಕ್ಕೆ ಒಪ್ಪೋ ರೆನೋ 11 ಪ್ರೊ ಮೊದಲ ಸೇಲ್: ಭಾರತದಲ್ಲಿ ಇದರ ಬೆಲೆ ಎಷ್ಟು?
ಒಪ್ಪೋ ಫೋನ್‌ಗಳು (Oppo phones) ಭಾರತದಲ್ಲಿ ಸುನಾಮಿಯನ್ನೇ ಸೃಷ್ಟಿಸಲಿವೆ. ಇದಕ್ಕೆ ನಿದರ್ಶನ ಎಂಬಂತೆ ಒಪ್ಪೋ ರೆನೋ 11 ಪ್ರೊ ಸ್ಮಾರ್ಟ್‌ಫೋನ್ (Oppo Reno 11 Pro smartphone) ಖರೀದಿಗೆ ಜನರು ಭಾರತದಲ್ಲಿ ಕಾತುರದಿಂದ ಕಾಯುತ್ತಿದ್ದು, ಈ ಫೋನ್ ಅನ್ನು ಇದೇ ತಿಂಗಳ 18 ರಿಂದ ಖರೀದಿ ಮಾಡಬಹುದಾಗಿದೆ.
ಹೌದು, ಒಪ್ಪೋ ರೆನೋ 11 ಪ್ರೊ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗಷ್ಟೇ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಈ ತಿಂಗಳ 18 ರಿಂದ ಸೇಲ್ ಆಗಲಿದೆ. ಈ ಫೋನ್ ಭಾರತದಲ್ಲಿ ಒಂದೇ ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ. ಹಾಗಿದ್ರೆ, ತಡಯಾಕೆ ಬನ್ನಿ ಭಾರತದಲ್ಲಿ ಈ ಫೋನ್ ಬೆಲೆ ಎಷ್ಟು?, ಇದರ ಪ್ರಮುಖ ಫೀಚರ್ಸ್ ಏನು? ಇದನ್ನು ಎಲ್ಲಿ ಖರೀದಿ ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ ರೆನೋ 11 ಪ್ರೊ ಸ್ಮಾರ್ಟ್‌ಫೋನ್ ಸೇಲ್: ಒಪ್ಪೋ ರೆನೋ 11 ಪ್ರೊ ಅನ್ನು ಭಾರತದಲ್ಲಿ ಒಂದೇ ವೇರಿಯಂಟ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ಈ ಫೋನ್‌ಗೆ ಭಾರತದಲ್ಲಿ 39,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇನ್ನು 12GB RAM + 256GB ಇಂಟರ್ ಸ್ಟೋರೇಜ್‌ನ ಫೋನ್ ಇದಾಗಿರಲಿದೆ. ಅಲ್ಲದೆ ಇದು ರಾಕ್ ಗ್ರೇ ಮತ್ತು ವೇವ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯ ಇರಲಿದೆ. ಈ ವಿಶೇಷ ಫೋನ್ ಅನ್ನು ಬ್ರ್ಯಾಂಡ್‌ನ ಇ-ಸ್ಟೋರ್, ಫ್ಲಿಪ್‌ಕಾರ್ಟ್ (Flipkart) ಮತ್ತು ಇತರ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.
ಒಪ್ಪೋ ರೆನೋ 11 ಪ್ರೊ ಫೋನ್‌ಗೆ ಆಫರ್ ಏನಿದೆ?: ಈ ಫೋನ್ ಭಾರತದಲ್ಲಿ 39,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮಾರಾಟದ ಸಮಯದಲ್ಲಿ ಎಸ್‌ಬಿಐ ಐಸಿಐಸಿಐ, ಒನ್ ಕಾರ್ಡ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐ ವ್ಯವಹಾರದ ಮೇಲೆ 4,000 ರೂ.ಗಳ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

ಒಪ್ಪೋ ರೆನೋ 11 ಪ್ರೊ ಫೋನ್ ಫೀಚರ್ಸ್: ಈ ಸ್ಮಾರ್ಟ್ಫೋನ್ 6.7ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ಡೈನಾಮಿಕ್ ರಿಫ್ರೆಶ್ ರೇಟ್‌ನೊಂದಿಗೆ ಅತ್ಯುತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ನಲ್ಲಿ (MediaTek Dimensity 8200 SoC processor) ಕಾರ್ಯನಿರ್ವಹಿಸಲಿದ್ದು, 80W ಸೂಪರ್ ವೂಕ್ ಚಾರ್ಜರ್‌ನೊಂದಿಗೆ 4,600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.
ಈ ಫೋನ್ ಪ್ರಮುಖವಾಗಿ ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಇಷ್ಟವಾಗಲಿದೆ. ಯಾಕೆಂದರೆ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX890 ಕ್ಯಾಮೆರಾ, 32 ಮೆಗಾಪಿಕ್ಸೆಲ್ ಸೋನಿ IMX709 RGBW ಟೆಲಿಫೋಟೋ ಕ್ಯಾಮರಾ ಮತ್ತು 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ ವೈಡ್ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದು.
ಇನ್ನು ಸಾಮಾನ್ಯವಾಗಿ ಒಪ್ಪೋ ವಿಶೇಷ ವಿನ್ಯಾಸಗಳನ್ನು ಪ್ರಯೋಗಿಸಲು ಹೆಸರುವಾಸಿಯಾಗಿದೆ. ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ನೀಡಲು ಸದಾ ಹಾತೊರೆಯುತ್ತಿರುತ್ತದೆ. ಅದರಂತೆ ಈ ಫೋನ್ ಗಾಜಿನ ರಿಯರ್ ಪ್ಯಾನಲ್ ವಿನ್ಯಾಸ ಮತ್ತು ಸ್ಲಿಮ್ ಪ್ರೊಫೈಲ್ ಅನ್ನು ಹೊಂದಿದೆ. ಇದರೊಂದಿಗೆ ಈ ಡಿವೈಸ್ ಸಾಕಷ್ಟು ಹಗುರವಾಗಿದ್ದು, ಕರ್ವ್ಡ್ ಅಂಚುಗಳು ಫೋನ್‌ನಲ್ಲಿ ಉತ್ತಮ ಹಿಡಿತವನ್ನು ನೀಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ 40,000 ರೂ.ಗಳಿಗಿಂತ ಕಡಿಮೆ ಬೆಲೆ ಶ್ರೇಣಿಯಲ್ಲಿ ಉತ್ತಮ ಕ್ಯಾಮೆರಾ ಫೋನ್ ಅನ್ನು ಖರೀದಿ ಮಾಡಲು ನೀವು ಇಚ್ಚಿಸಿದ್ರೆ ಈ ಫೋನ್ ಉತ್ತಮ ಆಯ್ಕೆ ಆಗಿರಲಿದೆ. ಅದರಲ್ಲೂ ಫಾಸ್ಟ್ ಚಾರ್ಜಿಂಗ್ ಸೌಲಭ್ಯ, ಉತ್ತಮ ಪ್ರೊಸೆಸರ್, ಸೋನಿ ಸೆನ್ಸರ್‌ಗಳು ಈ ಫೋನ್ ಅನ್ನು ಪ್ರೀಮಿಯಂ ವಿಭಾಗದಲ್ಲಿ ಇರಿಸುತ್ತವೆ.


Click it and Unblock the Notifications








