Home
ಸುದ್ದಿಜಾಲ

ಭಾರತದಲ್ಲಿ Oppo Reno 12 5G ಬಿಡುಗಡೆ; ಫೀಚರ್ಸ್‌ಗೆ ಗ್ರಾಹಕರು ಫಿದಾ!

ಜನಪ್ರಿಯ ಒಪ್ಪೋ ಸಂಸ್ಥೆಯು ತನ್ನ ರೆನೋ ಫೋನ್‌ ಸರಣಿಯಲ್ಲಿ ಈಗಾಗಲೇ ಹಲವು ಫೋನ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಸಂಸ್ಥೆಯು ಒಪ್ಪೋ ರೆನೋ 12 ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ಒಪ್ಪೋ ರೆನೋ 12 5G ಹಾಗೂ ಒಪ್ಪೋ ರೆನೋ 12 ಪ್ರೊ 5G ಫೋನ್‌ಗಳನ್ನು ಒಳಗೊಂಡಿದೆ. ಆ ಪೈಕಿ ಒಪ್ಪೋ ರೆನೋ 12 5G (Oppo Reno 12 5G) ಆಕರ್ಷಕ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರ ಮನಗೆದ್ದಿದೆ.

ಹೌದು, ಒಪ್ಪೋ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ ರೆನೋ 12 5G (Oppo Reno 12 5G) ಫೋನ್‌ ದೇಶಿಯ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಆಸ್ಟ್ರೋ ಸಿಲ್ವರ್, ಮ್ಯಾಟ್ ಬ್ರೌನ್ ಮತ್ತು ಸನ್ಸೆಟ್ ಪೀಚ್ ಕಲರ್‌ ಆಯ್ಕೆಯಲ್ಲಿ ಲಭ್ಯ ಆಗಲಿದೆ. ಹಾಗಾದರೇ ಈ ಫೋನ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಭಾರತದಲ್ಲಿ Oppo Reno 12 5G ಬಿಡುಗಡೆ; ಫೀಚರ್ಸ್‌ಗೆ ಗ್ರಾಹಕರು ಫಿದಾ!

ಒಪ್ಪೋ ರೆನೋ 12 5G - ಫೀಚರ್ಸ್‌

ಒಪ್ಪೋ ರೆನೋ 12 5G ಸ್ಮಾರ್ಟ್‌ಫೋನ್‌ 6.70 ಇಂಚಿನ OLED ಕರ್ವ್ಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹಾಗೂ 394ppi ಪಿಕ್ಸೆಲ್ ಸಾಂದ್ರತೆ ಜೊತೆಗೆ 20:9 ಆಕಾರ ಅನುಪಾತವನ್ನು ಪಡೆದುಕೊಂಡಿದೆ. ಅಲ್ಲದೇ ಇದು ಕಾರ್ನಿಂಗ್ Gorilla Glass 7i ರಕ್ಷಣೆ ಪಡೆದಿದೆ.

ಒಪ್ಪೋ ರೆನೋ 12 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಎನರ್ಜಿ SoC ಪ್ರೊಸೆಸರ್‌ ಹೊಂದಿದ್ದು, ಇದು ಆಂಡ್ರಾಯ್ಡ್‌ 14 ಆಧಾರಿತ ColorOS 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 1 TB ವರೆಗೂ ವಿಸ್ತರಿಸಲು ಅವಕಾಶ ನೀಡಿದೆ.

ಒಪ್ಪೋ ರೆನೋ 12 5G ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ ಸಹ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.

ಒಪ್ಪೋ ರೆನೋ 12 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಿದ್ದು, ಇದಕ್ಕೆ ಪೂರಕವಾಗಿ 80W ಸೂಪರ್ವೂಕ್‌ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್ 5.4, IR ಬ್ಲಾಸ್ಟರ್ ಮತ್ತು Wi-Fi 6 ಆಯ್ಕೆಗಳು ಇವೆ. ಹಾಗೆಯೇ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ಅನ್ನು ಹೊಂದಿದ್ದು, ಫೇಸ್ ಅನ್‌ಲಾಕ್ ಫೀಚರ್‌ ಅನ್ನು ಸಹ ಸಪೋರ್ಟ್‌ ಮಾಡುತ್ತದೆ.

ಬೆಲೆ ಹಾಗೂ ಲಭ್ಯತೆ

ಒಪ್ಪೋ ರೆನೋ 12 5G (Oppo Reno 12 5G) ಸ್ಮಾರ್ಟ್‌ಫೋನ್‌ 8GB RAM + 256GB ವೇರಿಯಂಟ್‌ ಬೆಲೆಯು 32,999ರೂ. ಗಳು ಆಗಿದೆ. ಇನ್ನು ಈ ಫೋನ್ ಆಸ್ಟ್ರೋ ಸಿಲ್ವರ್, ಮ್ಯಾಟ್ ಬ್ರೌನ್ ಮತ್ತು ಸನ್ಸೆಟ್ ಪೀಚ್ ಕಲರ್‌ ಆಯ್ಕೆಗಳಲ್ಲಿ ಲಭ್ಯ. ಅಂದಹಾಗೆ ಇದು ಜುಲೈ 25 ರಿಂದ ಈ ಫೋನ್‌ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮತ್ತು ಒಪ್ಪೋ ಇಂಡಿಯಾ ವೆಬ್‌ಸೈಟ್ ಮೂಲಕ ಮಾರಾಟ ಪ್ರಾರಂಭಿಸಲಿದೆ.

Best Mobiles in India

English summary
Oppo Reno 12 5G With 80W SuperVOOC charging Launched In India. check offer, Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+