Home
ಸುದ್ದಿಜಾಲ

Oppo: ಮೇ 23 ರಂದು ಲಾಂಚ್‌ ಆಗಲಿದೆ ಒಪ್ಪೋ ರೆನೋ 12 ಸರಣಿ! ನಿರೀಕ್ಷಿತ ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ

ಒಪ್ಪೋ (Oppo) ಕಂಪೆನಿಯು ಭಿನ್ನ ಫೀಚರ್ಸ್‌ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ಆಗಾಗ್ಗೆ ಸುನಾಮಿ ಎಬ್ಬಿಸುತ್ತಿರುತ್ತದೆ. ಅದರಂತೆ ಇನ್ನೇನು ಕೆಲವೇ ದಿನಗಳಲ್ಲಿ ಬಹು ನಿರೀಕ್ಷಿತ ಒಪ್ಪೋ ರೆನೋ 12 ಸರಣಿಯನ್ನು (Oppo Reno 12 series) ಅನಾವರಣ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ.

ಹೌದು, ಒಪ್ಪೋ ರೆನೋ 12 ಸರಣಿಯು ಮೇ 23 ರಂದು ಚೀನಾದಲ್ಲಿ ಲಾಂಚ್‌ ಆಗಲಿದೆ. ಅದಾಗ್ಯೂ ಈ ಫೋನ್‌ ಭಾರತದಲ್ಲಿಯೂ ಶೀಘ್ರದಲ್ಲೇ ಲಾಂಚ್‌ ಆಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಈ ನಡುವೆ TENAA ಪ್ರಮಾಣೀಕರಣವು ಈ ಫೋನ್‌ನ ಪ್ರಮುಖ ಫೀಚರ್ಸ್‌ ಅನ್ನು ನೀಡಿದೆ. ಹಾಗಿದ್ರೆ, ಬನ್ನಿ ಈ ಫೋನ್‌ ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿದೆ?, ಅನ್ನೋ ಮಾಹಿತಿಯನ್ನು ಈ ಮೂಲಕ ತಿಳಿಯೋಣ.

ಮೇ 23 ರಂದು ಲಾಂಚ್‌ ಆಗಲಿದೆ ಒಪ್ಪೋ ರೆನೋ 12 ಸರಣಿ!

ಒಪ್ಪೋ ರೆನೋ 12 ಸರಣಿ: ಒಪ್ಪೋ ರೆನೋ 12 ಮತ್ತು ರೆನೋ 12 ಪ್ರೊ (Oppo Reno 12, Reno 12 Pro) ವೇರಿಯಂಟ್‌ ಅನ್ನು ಒಳಗೊಂಡಿರುವ ಒಪ್ಪೋ ರೆನೋ 12 ಸರಣಿಯು ಮೇ 23 ರಂದು ಚೀನಾದಲ್ಲಿ ಲಾಂಚ್ ಆಗಲಿದ್ದು, ಕಂಪನಿಯು ಆನ್‌ಲೈನ್‌ನಲ್ಲಿ ಒಂದೆರಡು ಚಿತ್ರಗಳನ್ನು ಲೇವಡಿ ಮಾಡಿದೆ. ಬಣ್ಣದ ಆಯ್ಕೆಗಳ ಜೊತೆಗೆ, ಈ ಚಿತ್ರಗಳು ಮುಂಬರುವ ಡಿವೈಸ್‌ನ ಸಂಪೂರ್ಣ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ. ಈ ಫೋನ್ ಸರಣಿಯು ಆಂಡ್ರಾಯ್ಡ್ ಉದ್ಯಮದಲ್ಲಿ ಲೈವ್ ಫೋಟೋಗಳನ್ನು ನೀಡುವ ಮೊದಲನೆಯ ಫೋನ್ ಆಗಿರಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ, ಲೈವ್ ಫೋಟೋಗಳನ್ನು ನೀಡುವ ಆಂಡ್ರಾಯ್ಡ್ ಫೋನ್‌ಗಳು ಆ ಮೋಡ್‌ನಲ್ಲಿ ಫೋಟೋಗಳನ್ನು ಉಳಿಸಲು ಅನುಮತಿ ಪಡೆದಿರಲಿಲ್ಲ.

TENAA ಪ್ರಮಾಣೀಕರಣದಲ್ಲಿ ಉಲ್ಲೇಖ ಮಾಡಿದಂತೆ ಈ ಫೋನ್ 2412x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಫುಲ್‌ಹೆಚ್‌ಡಿ+ ಅನೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ. ಸ್ಟ್ಯಾಂಡರ್ಡ್ ರೂಪಾಂತರ ಮಿಲೇನಿಯಮ್ ಸಿಲ್ವರ್, ಸಾಫ್ಟ್ ಪೀಚ್ ಮತ್ತು ಎಬೊನಿ ಬ್ಲ್ಯಾಕ್ ಸೇರಿದಂತೆ ಮೂರು ಬಣ್ಣದ ಆಯ್ಕೆಗಳನ್ನು ಬರಲಿದ್ದು, ಪ್ರೊ ಆವೃತ್ತಿಯು ಸಿಲ್ವರ್, ಫ್ಯಾಂಟಮ್ ಪರ್ಪಲ್, ಷಾಂಪೇನ್ ಗೋಲ್ಡ್ ಮತ್ತು ಎಬೊನಿ ಕಪ್ಪು ಬಣ್ಣಗಳನ್ನು ಲಭ್ಯ ಇರಲಿದೆ.

ಮೇ 23 ರಂದು ಲಾಂಚ್‌ ಆಗಲಿದೆ ಒಪ್ಪೋ ರೆನೋ 12 ಸರಣಿ!

ಎರಡೂ ಸ್ಮಾರ್ಟ್‌ಫೋನ್‌ಗಳು ಸೆಲ್ಫಿ ಸ್ನ್ಯಾಪರ್, ಫ್ಲಾಟ್ ಎಡ್ಜ್‌ಗಳು ಮತ್ತು ಸ್ಲಿಮ್ ಬೆಜೆಲ್‌ಗಳಿಗಾಗಿ ಸೆಂಟರ್‌ ಪ್ಲೇಸ್‌ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿರಲಿದ್ದು, ಮಾದರಿಗಳು ಅಂಚುಗಳ ಕಡೆಗೆ ಸ್ವಲ್ಪ ವಕ್ರತೆಯ ಶೈಲಿಯನ್ನು ಪಡೆದಿರಲಿವೆ. ಜೊತೆಗೆ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್‌ಗಳು ಬಲ ಅಂಚಿನಲ್ಲಿರಲಿವೆ ಎಂದು ಈಗಾಗಲೇ ಶೇರ್‌ ಮಾಡಲಾದ ಫೋಟೋಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪ್ರೊ ಆವೃತ್ತಿ ಫೋನ್ 4,880mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದ್ದು, 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ವದಂತಿಗಳಿವೆ. ಪ್ರೊ ಫೋನ್ ಎರಡು 50 ಮೆಗಾಪಿಕ್ಸೆಲ್ ಸೆನ್ಸರ್‌ ಮತ್ತು 8 ಮೆಗಾಪಿಕ್ಸೆಲ್‌ ಲೆನ್ಸ್ ಹೊಂದಿರುವ ಸಾಧ್ಯತೆ ಇದ್ದು, 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದು ಎಂದು ತಿಳಿದುಬಂದಿದೆ. ಉಳಿದಂತೆ ಈ ಫೋನ್ 3.23GHz ಗರಿಷ್ಠ ಗಡಿಯಾರದ ವೇಗದೊಂದಿಗೆ ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಸಂಭಾವ್ಯವಾಗಿ ಮೀಡಿಯಾಟೆಕ್‌ ಡೈಮೆನ್ಸಿಟಿ 9300 ಪ್ರೊಸೆಸರ್‌ ಬಲ ಪಡೆದಿರಲಿದೆ ಎನ್ನಲಾಗಿದೆ.

ಹಾಗೆಯೇ ಈ ಸರಣಿ ಫೋನ್‌ಗಳು 12GB ಅಥವಾ 16GB RAM ಮತ್ತು 256GB, 512GB ಮತ್ತು 1TB ಇಂಟರ್ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಈ ಫೋನ್‌ ಪ್ರೀಮಿಯಂ ಫೀಚರ್ಸ್‌ ಅನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
Oppo Reno 12 series will be launched in China on May 23. However, there are also rumors that this phone will also be launched in India soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+