Oppo: ಶೀಘ್ರದಲ್ಲೇ ಸಂಚಲನ ಸೃಷ್ಟಿಸಲಿದೆ ಒಪ್ಪೋ ರೆನೋ 12 ಸರಣಿ! ಫೀಚರ್ಸ್ ಲೀಕ್...
ಒಪ್ಪೋ (Oppo) ಫೋನ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ರೆನೋ ಸರಣಿ ಫೋನ್‌ಗಳಿಗೆ ಬಹು ಬೇಡಿಕೆ ಇದ್ದು, ಕೆಲವು ವಾರಗಳ ಹಿಂದೆ ಅನಾವರಣ ಆದ ರೆನೋ 11 ಸ್ಮಾರ್ಟ್‌ಫೋನ್ (Oppo Reno 11 smartphone) ಈ ಕ್ಷಣಕ್ಕೂ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸುತ್ತಿದೆ. ಈ ಬೆಳವಣಿಗೆ ನಡುವೆ ಈಗ ಒಪ್ಪೋ ಪ್ರಿಯರಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಲಾಗಿದೆ.
ಹೌದು, ಒಪ್ಪೋದ ಒಪ್ಪೋ ರೆನೋ 12 ಸರಣಿ (Oppo Reno 12 series) ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಈ ಫೋನ್ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹಾಗೂ 67W ಚಾರ್ಜಿಂಗ್ ಬೆಂಬಲದಂತದ ಫೀಚರ್ಸ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಲೀಕ್ ಫೀಚರ್ಸ್ ಏನು ಹಾಗೂ ಇದು ಯಾವಾಗ ಅನಾವರಣ ಆಗಲಿದೆ ಅನ್ನೋ ಮಾಹಿತಿ ತಿಳಿಯೋಣ ಬನ್ನಿ.

ಒಪ್ಪೋ ರೆನೋ 12 ಸರಣಿ: ಒಪ್ಪೋ ಜೂನ್ 2024 ರಲ್ಲಿ ಒಪ್ಪೋ ರೆನೋ 12 ಸರಣಿಯನ್ನು ಅನಾವರಣ ಮಾಡಲಿದೆ ಎಂಬ ಮಾಹಿತಿ ಇದೆ. ಅದರಲ್ಲೂ ಇತ್ತೀಚೆಗೆ ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ 11 ಪ್ರೊ ಅನ್ನು ಅನಾವರಣ ಮಾಡಿ ಸದ್ದು ಮಾಡಿತ್ತು. ಅದರಂತೆ ಈಗ ಅದರ ಉತ್ತರಾಧಿಕಾರಿಯಾದ ಒಪ್ಪೋ ರೆನೋ 12 ಸರಣಿಯ ಬಗ್ಗೆ ವರದಿಗಳು ಮುನ್ನೆಲೆಗೆ ಬಂದಿವೆ.
ಇನ್ನು ಲೀಕ್ ಆದ ಆಂತರಿಕ ಮಾಹಿತಿ ಪ್ರಕಾರ, ಈ ಹೊಸ ಫೋನ್ 2x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಬಹುದು ಎನ್ನಲಾಗಿದೆ. ಅಲ್ಲದೆ ಈ ಲೀಕ್ ಆದ ಡಾಕ್ಯುಮೆಂಟ್, ಎಮ್‌ಎಸ್ ಪವರ್ ಯೂಸರ್ ನಿಂದ ವರದಿಯಾಗಿದೆ. ಅದರ ಪ್ರಕಾರ ಒಪ್ಪೋ ರೆನೋ 12 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 6.7 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8 ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 2x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹಾಗೂ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಬಹುದು ಎಂದು ಊಹಿಸಲಾಗಿದೆ. ಹಾಗೆಯೇ ಆಟೋಫೋಕಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಸರಣಿ 12GB RAM ನೊಂದಿಗೆ 256GB ಮತ್ತು 512 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದ್ದು, ಈ ಡಿವೈಸ್ 67W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಬಹುದು ಮತ್ತು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿರಬಹುದು ಎಂದು ನಂಬಲಾಗಿದೆ. ಇದು ಪ್ರೊ ಮಾದರಿಯಾಗಿದ್ದರೆ ಸಾಮಾನ್ಯ ವೇರಿಯಂಟ್ ಏನೆಲ್ಲಾ ಫೀಚರ್ಸ್ ಪಡೆದಿರಲಿದೆ ಅನ್ನೋದನ್ನು ನೋಡೋಣ ಬನ್ನಿ.
ಒಪ್ಪೋ ರೆನೋ 12 ಸ್ಮಾರ್ಟ್‌ಫೋನ್ ಫೀಚರ್ಸ್: ಒಪ್ಪೋ ರೆನೋ 12 ಪ್ರೊ ಆವೃತ್ತಿಯಂತೆಯೇ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದ್ದು. ಈ ಫೋನ್ 120Hz ರಿಫ್ರೆಶ್ ರೇಟ್ ಮತ್ತು ಅದೇ ಕ್ಯಾಮೆರಾ ರಚನೆ ಪಡೆದಿರಲಿದೆ ಎಂದು ತೋರುತ್ತದೆ, ಅದಾಗ್ಯೂ ಸೆಲ್ಫಿ ಕ್ಯಾಮೆರಾವು ಆಟೋಫೋಕಸ್ ಅನ್ನು ಹೊಂದಿರುವುದಿಲ್ಲ ಎಂದು ಹೇಳಲಾಗಿದೆ. ಉಳಿದಂತೆ ಈ ಫೋನ್ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, 67W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದೆ.

ಈ ಎರಡೂ ವೇರಿಯಂಟ್‌ಗಳನ್ನು ಲೀಕ್ ಮಾಹಿತಿ ಆಧಾರದಲ್ಲಿ ತಾಳೆ ಹಾಕಿ ನೋಡಿದರೆ ಪ್ರಾಥಮಿಕ ವ್ಯತ್ಯಾಸ ಏನೆಂದರೆ ಸೆಲ್ಫಿ ಕ್ಯಾಮೆರಾ, ಚಿಪ್‌ಸೆಟ್ ಮತ್ತು ಆಟೋಫೋಕಸ್ ಫೀಚರ್ಸ್ ಆಗಿದೆ. ಈ ವಿವರಗಳು ಸೋರಿಕೆಯಾದ ಡಾಕ್ಯುಮೆಂಟ್‌ನಿಂದ ಬಂದಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ ಮತ್ತು ಫೋನ್‌ಗಳು ಇನ್ನೂ ಆರಂಭಿಕ ಅಭಿವೃದ್ಧಿಯಲ್ಲಿರುವುದರಿಂದ ನಿಜವಾದ ಫೀಚರ್ಸ್ ಬೇರೆಯದೇ ಆಗಿರಬಹುದು.


Click it and Unblock the Notifications








