ಒಪ್ಪೊ ರೆನೋ ಸರಣಿಯಲ್ಲಿ ರೆನೋ 2, ರೆನೋ 2Z ಮತ್ತು ರೆನೋ 2F ಲಾಂಚ್!
ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಯ 'ಒಪ್ಪೊ' ಇತ್ತೀಚಿಗೆ ರೆನೋ ಹೆಸರಿನ ಸಬ್‌ಬ್ರ್ಯಾಂಡ್‌ನಡಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಯುವಸಮೂಹವನ್ನು ಸೆಳೆದಿತ್ತು. ಮತ್ತೆ ಅದೇ ಹಾದಿಯಲ್ಲಿ ಮುನ್ನಡೆದಿರುವ ಕಂಪನಿಯು ರೆನೋ ಬ್ರ್ಯಾಂಡ್‌ನಡಿ ಮೂರು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡಿ ತನ್ನ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೌದು, ಒಪ್ಪೊ ಕಂಪನಿಯು ಇದೇ ಅಗಷ್ಟ್ 28ರಂದು ಭಾರತೀಯ ಮಾರುಕಟ್ಟೆಗೆ ತನ್ನ ರೆನೋ ಬ್ರ್ಯಾಂಡ್‌ನಲ್ಲಿ ಒಪ್ಪೊ ರೆನೋ 2, ಒಪ್ಪೊ ರೆನೋ 2Z ಮತ್ತು ಒಪ್ಪೊ ರೆನೋ 2F ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಒಪ್ಪೊ ರೆನೋ 2 ಸೆಪ್ಟಂಬರ್ 20ರಂದು ಸೇಲ್ ಆರಂಭಿಸಲಿದ್ದು, ಬೆಲೆಯು 36,990ರೂ.ಗಳಾಗಿದೆ. ಹಾಗಾಯೇ ಒಪ್ಪೊ ರೆನೋ 2Z 29,990ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಇದೇ ಸೆಪ್ಟಂಬರ್ 6ರಂದು ಲಭ್ಯವಾಗಲಿದೆ.

ಈ ಮೂರು ಸ್ಮಾರ್ಟ್‌ಫೋನ್‌ಗಳು 48ಎಂಪಿ ಕ್ಯಾಮೆರಾ ಸೆನ್ಸಾರ್ ಆಯ್ಕೆಯನ್ನು ಒಳಗೊಂಡಿದ್ದು, ಇದರೊಂದಿಗೆ VOOC 3.0 ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿವೆ. ರೆನೋ 2F ಸ್ಮಾರ್ಟ್‌ಫೋನ್ ಸೆಲ್ಫಿ ಕ್ಯಾಮೆರಾವು ಫೋನ್ ಮೇಲ್ಭಾಗದ ಮಧ್ಯದಲ್ಲಿ ನೀಡಲಾಗಿದೆ. ಹಾಗಾದರೇ ಒಪ್ಪೊ ಸಂಸ್ಥೆಯು ಬಿಡುಗಡೆ ಮಾಡಿರುವ ರೆನೋ 2, ರೆನೋ 2Z ಮತ್ತು ರೆನೋ 2F ಸರಣಿ ಸ್ಮಾರ್ಟ್‌ಫೋನ್‌ಗಳು ಇತರೆ ಯಾವೆಲ್ಲಾ ಫೀಚರ್ಸ್ ಪಡೆದಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒಪ್ಪೊ ರೆನೋ 2 ಫೀಚರ್ಸ್
1,080 x 2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನಿನ ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರ ಶೇ.93.1% ರಷ್ಟಾಗಿದೆ. ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್ ಇದ್ದು, 8GB RAM ಮತ್ತು 256GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. 4,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, VOOC 3.0 ಫಾಸ್ಟ್ ಚಾರ್ಜಿಂಗ್ ಪಡೆದಿದೆ. ಜೊತೆಗೆ 48+13+8ಎಂಪಿ ಸೆನ್ಸಾರ್‌ನ ತ್ರಿವಳಿ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಒದಗಿಸಲಾಗಿದೆ.

ಒಪ್ಪೊ ರೆನೋ 2Z ಫೀಚರ್ಸ್
1,080 x 2,340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನಿನ ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರ ಶೇ.91.6% ರಷ್ಟಾಗಿದ್ದು, ಮೀಡಿಯಾ ಟೆಕ್ ಹಿಲಿಯೊ P90 SoC ಪ್ರೊಸೆಸರ್ ಬಲ ಪಡೆದಿದೆ. 8GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ನೀಡಲಾಗಿದ್ದು, VOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ್ ಬೆಂಬಲಿತವಾದ 4,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಜೊತೆಗೆ 48+8+2ಎಂಪಿ ಸೆನ್ಸಾರ್‌ನ ತ್ರಿವಳಿ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಒದಗಿಸಲಾಗಿದೆ.

ಒಪ್ಪೊ ರೆನೋ 2F ಫೀಚರ್ಸ್
ಈ ಸ್ಮಾರ್ಟ್‌ಫೋನ್ ರೆನೋ 2Z ಫೋನಿನಂತೆ 1,080 x 2,340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನಿನ ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರ ಶೇ.91.6% ರಷ್ಟಾಗಿದ್ದು, ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ. ಮೀಡಿಯಾ ಟೆಕ್ ಹಿಲಿಯೊ P70 SoC ಪ್ರೊಸೆಸರ್ ಶಕ್ತಿಯೊಂದಿಗೆ, 8GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದೆ. VOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ್ ಬೆಂಬಲಿತವಾದ 4,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಜೊತೆಗೆ 48+8+2ಎಂಪಿ ಸೆನ್ಸಾರ್‌ನ ತ್ರಿವಳಿ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಒದಗಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೊ ರೆನೋ 2 ಓಶಿಯನ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, 36,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದೇ ಸೆಪ್ಟಂಬರ್ 10ರಂದು ಪ್ರಿ ಆರ್ಡರ್ ಶುರುವಾಗಲಿದ್ದು, ಸೆಪ್ಟಂಬರ್ 20ರಂದು ಖರೀದಿಗೆ ದೊರೆಯಲಿದೆ. ಹಾಗೆಯೇ ರೆನೋ 2Z ಸ್ಮಾರ್ಟ್‌ಫೋನ್ ಇದೀಗ ಪ್ರಿ ಆರ್ಡರ್‌ಗೆ ಲಭ್ಯವಿದ್ದು, ಇದೇ ಸೆಪ್ಟೆಂಬರ 6ರಂದು ಗ್ರಾಹಕರಿಗೆ ದೊರೆಯಲಿದೆ. ಇದರ ಬೆಲೆಯು 29,990ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಬ್ಲ್ಯಾಕ್, ವೈಟ್ ಮತ್ತು ಪೋಲಾರ್ ಶೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಒಪ್ಪೊ ರೆನೋ 2F ಬರುವ ನವಂಬರ ತಿಂಗಳಿನಲ್ಲಿ ಸೇಲ್ ಶುರುಮಾಡಲಿದೆ.


Click it and Unblock the Notifications








