ಒಪ್ಪೊ ರೆನೋ 2F ಫೋನ್ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ!

|

ಚೀನಾ ಮೂಲದ ಒಪ್ಪೊ ಸಂಸ್ಥೆಯು ಕಳೆದ ವರ್ಷ ತನ್ನ ಸಬ್‌ಬ್ರ್ಯಾಂಡ್‌ ರೆನೋ ಹೆಸರಿನಲ್ಲಿ ಕೆಲವು ಫೋನ್‌ಗಳನ್ನು ಪರಿಚಯಿಸಿತ್ತು. ಆ ಪೈಕಿ 'ಒಪ್ಪೊ ರೆನೋ 2Z' ಮತ್ತು 'ಒಪ್ಪೊ ರೆನೋ 2F' ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿದ್ದವು. ಇದೀಗ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ತಿಳಿಸಿದ್ದು, ಜನಪ್ರಿಯ 'ಒಪ್ಪೊ ರೆನೋ 2F' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.

ರೆನೋ 2F ಸ್ಮಾರ್ಟ್‌ಫೋನ್‌

ಹೌದು, ಒಪ್ಪೊ ಸಂಸ್ಥೆಯು ತನ್ನ ರೆನೋ 2F ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ಈಗ 2,000ರೂ. ಕಡಿತ ಮಾಡಿದ್ದು, ಇನ್ನು ಈ ಫೋನ್ ಎರಡನೇ ಭಾರಿ ಬೆಲೆ ಇಳಿಕೆ ಕಂಡಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ 23,990ರೂ.ಬೆಲೆಯನ್ನು ಹೊಂದಿದ್ದು, ಇದೀಗ ಬೆಲೆ ಇಳಿಕೆಯಿಂದ 21,990ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ಅಮೆಜಾನ್ ಇ-ಕಾಮರ್ಸ್‌ ತಾಣದಲ್ಲಿ ಖರೀದಿಸಬಹುದಾಗಿದೆ. 48ಎಂಪಿ ಕ್ಯಾಮೆರಾ, 4000mAh ಬ್ಯಾಟರಿ, ಪ್ರಮುಖ ಆಕರ್ಷಣೆ ಆಗಿವೆ. ಇನ್ನು ರೆನೋ 2F ಸ್ಮಾರ್ಟ್‌ಫೋನಿನಲ್ಲಿ ಯಾವೆಲ್ಲ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ರೆನೋ 2F ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇಯು 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಮಾದರಿಯನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಜೊತೆಗೆ ಗೊರಿಲ್ಲಾ ಗ್ಲಾಸ್ 4 ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ರೆನೋ 2F ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ ಪಿ70 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಇದೆ. ಹಾಗೆಯೇ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶದ ಆಯ್ಕೆಯನ್ನು ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ಇದೆ.

ಕ್ವಾಡ್‌ ಕ್ಯಾಮೆರಾ

ಕ್ವಾಡ್‌ ಕ್ಯಾಮೆರಾ

ರೆನೋ 2F ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಆಯ್ಕೆಯನ್ನು ಹೊಂದಿವೆ. ಜೊತೆಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಪಡೆದಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ರೆನೋ 2F ಸ್ಮಾರ್ಟ್‌ಫೋನ್‌ 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ VOOC 3.0 ಫ್ಲ್ಯಾಶ್ ಚಾರ್ಜ್‌ ಸೌಲಭ್ಯವನ್ನು ಸಹ ಹೊಂದಿದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್, ಆಂಬಿಯಂಟ್ ಲೈಟ್ ಸೆನ್ಸಾರ್, ಸೌಲಭ್ಯಗಳನ್ನು ಪಡೆದಿದೆ.

Most Read Articles
Best Mobiles in India

English summary
Oppo Reno 2F was launched in India in August last year with a price tag of Rs. 25,990.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X