Home
ಸುದ್ದಿಜಾಲ

ಒಪ್ಪೋ ರೆನೋ 4 ಪ್ರೊಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌: ಆಫರ್‌ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಒಪ್ಪೋ (Oppo) ಫೋನ್‌ಗಳು ಬಹಳ ವಿಶೇಷ ಎನಿಸಿವೆ. ಅದರಲ್ಲೂ ಭಾರತದಲ್ಲಿ ಒಪ್ಪೋ ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಈ ನಡುವೆ ಒಪ್ಪೋದ ಈ ಆಕರ್ಷಕ ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಡಿಸ್ಕೌಂಟ್‌ ನೀಡಲಾಗಿದ್ದು, ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ಒಪ್ಪೋ ಕಂಪೆನಿಯ ಒಪ್ಪೋ ರೆನೋ 4 ಪ್ರೊ (Oppo Reno4 Pro, 8GB RAM) ಸ್ಮಾರ್ಟ್‌ಫೋನ್‌ಗೆ ಬೊಂಬಾಟ್ ಡಿಸ್ಕೌಂಟ್‌ ನೀಡಲಾಗಿದೆ. ಈ ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದುವ ಮೂಲಕ ಅತ್ಯಾಕರ್ಷಕ ನೋಟ ಪಡೆದಿದೆ. ಜೊತೆಗೆ ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಬಲ ಸಹ ಇದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ವಿವರ ತಿಳಿಯೋಣ ಬನ್ನಿ.

ಒಪ್ಪೋ ರೆನೋ 4 ಪ್ರೊಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌: ಆಫರ್‌ ಬೆಲೆ ಎಷ್ಟು?

ಒಪ್ಪೋ ರೆನೋ 4 ಪ್ರೊ ಡಿಸ್‌ಪ್ಲೇ ವಿವರ: ಆಫರ್‌ ಬೆಲೆಗೆ ಸಿಗುತ್ತದೆ ಎಂದು ಯಾವುದ್ಯಾವುದೋ ಫೋನ್‌ ಅನ್ನು ಅದರ ಬಗ್ಗೆ ತಿಳಿಯದೆ ಖರೀದಿ ಮಾಡಲು ಆಗುವುದಿಲ್ಲ. ಈ ಕಾರಣಕ್ಕೆ ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಅದರ ಪ್ರಮುಖ ಫೀಚರ್ಸ್‌ ಬಗ್ಗೆ ತಿಳಿದುಕೊಂಡರೆ ಉತ್ತಮ. ಅದರಂತೆ ಈ ಫೋನ್ 6.5 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಪಂಚ್ ಹೋಲ್‌ನೊಂದಿಗೆ ಕಾಣಿಸಿಕೊಂಡಿದೆ.

ಇದು ಕರ್ವ್ಡ್ ಡಿಸ್‌ಪ್ಲೇ ಆಗಿದ್ದು ಪ್ರೀಮಿಯಂ ನೋಟವನ್ನು ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಫುಲ್‌ ಹೆಚ್‌ಡಿ + ಆಯ್ಕೆಯೊಂದಿಗೆ 1080×2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, 402 PPI ಹಾಗೂ, 90Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಫೀಚರ್ಸ್‌ ಮೂಲಕ ಗೇಮಿಂಗ್‌ನಲ್ಲಿರುವಾಗ ಅಥವಾ ಸಿನಿಮಾ ವೀಕ್ಷಣೆ ಮಾಡುವಾಗ ವಿಶೇಷವಾದ ಅನುಭವ ಲಭ್ಯ.

ಒಪ್ಪೋ ರೆನೋ 4 ಪ್ರೊ ಪ್ರೊಸೆಸರ್‌ ವಿವರ: ಈ ಫೋನ್ ಕ್ವಾಲ್ಕಾಮ್ ನ ಮಧ್ಯಮ ಶ್ರೇಣಿಯ ಗೇಮಿಂಗ್ ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 10 ಅನ್ನು ಆಧರಿಸಿದ ಕಲರ್‌ ಓಎಸ್‌ 7.2 ಅನ್ನು ರನ್ ಮಾಡುತ್ತದೆ. ಇದರಿಂದಾಗಿ ಫೋನ್‌ನಲ್ಲಿ ಬಹುಕಾರ್ಯಕವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಇದೆ. ಅಷ್ಟು ಮಾತ್ರವಲ್ಲದೆ ಅಡ್ರಿನೊ 618 GPU ಬಲ ಈ ಫೋನ್‌ಗೆ ಇನ್ನಷ್ಟು ಶಕ್ತಿ ನೀಡಿದೆ.

ಒಪ್ಪೋ ರೆನೋ 4 ಪ್ರೊ ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಕ್ವಾಡ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ ಪ್ರಮುಖವಾಗಿ 48 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ ಅಲ್ಟ್ರಾ ವೈಡ್ ಕ್ಯಾಮರಾ ಹಾಗೂ ಎರಡು 2 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇವು ಡೆಪ್ತ್ ಸೆನ್ಸಾರ್, ಆಟೋಫೋಕಸ್ ಸೌಲಭ್ಯವನ್ನು ಅನುಮತಿಸುತ್ತವೆ.

ಉಳಿದಂತೆ ಈ ಸೆನ್ಸರ್‌ಗಳು ಕ್ಯಾಮರಾ ಆಪ್‌ ಫೋಟೋ, ವಿಡಿಯೋ, ವೃತ್ತಿಪರ ಮೋಡ್, ಪನೋರ್ಯಾಕ್‌ ಮೋಡ್, ಪೋರ್ಟ್ರೇಟ್, ನೈಟ್‌ ಮೋಡ್, ಟೈಮ್-ಲ್ಯಾಪ್ಸ್ ಫೋಟೋಗ್ರಫಿ, ಸ್ಲೋ ಮೋಷನ್ ಸೇರಿದಂತೆ ಮುಂತಾದ ಶೂಟಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಜೊತೆಗೆ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಪಂಚ್-ಹೋಲ್‌ನಲ್ಲಿ 32 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒಪ್ಪೋ ರೆನೋ 4 ಪ್ರೊ ಬ್ಯಾಟರಿ ಸಾಮರ್ಥ್ಯ: ಈ ಫೋನ್ 4000mAH ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 30 ಗಂಟೆಗಳ ಟಾಕ್-ಟೈಮ್ ಮತ್ತು 350 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಜೊತೆಗೆ 65W ಸೂಪರ್‌ವೂಕ್‌ 2.0 ಚಾರ್ಜಿಂಗ್‌ ಬೆಂಬಲ ಪಡೆದಿದ್ದು, 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ಒಪ್ಪೋ ರೆನೋ 4 ಪ್ರೊಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌: ಆಫರ್‌ ಬೆಲೆ ಎಷ್ಟು?

ಒಪ್ಪೋ ರೆನೋ 4 ಪ್ರೊ ಆಫರ್‌ ವಿವರ: ಈ ಫೋನ್‌ನ 8GBRAM ಆಯ್ಕೆಯ ಬೆಲೆ 37,990ರೂ.ಗಳಾಗಿದೆ. ಆದರೆ ನೀವು ಈಗ 28,490ರೂ.ಗಳಿಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್‌ ಈ ಫೋನ್‌ ಮೇಲೆ ಬರೋಬ್ಬರಿ 25% ರಿಯಾಯಿತಿ ಘೋಷಣೆ ಮಾಡಿದೆ. ಇಷ್ಟು ಮಾತ್ರವಲ್ಲದೆ ಎಕ್ಸ್‌ಚೇಂಜ್ ಆಫರ್‌ನಲ್ಲಿ ನೀವು 26,700 ವರೆಗೆ ಉಳಿಸಬಹುದು. ಹಾಗೂ ಬ್ಯಾಂಕ್‌ ಕಾರ್ಡ್‌ಗಳ ಮೇಲೂ ಹೆಚ್ಚಿನ ಆಫರ್‌ ಇದೆ.

Best Mobiles in India

English summary
Oppo Reno 4 Pro smartphone has been given a heavy discount. This phone is powered y Snapdragon 720G SoC processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+