ಒಪ್ಪೋ ರೆನೊ 5 ಪ್ರೊ 5G ಸ್ಮಾರ್ಟ್‌ಫೋನ್‌ಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್!
ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಯಾವಾಗಲೂ ಆಫರ್ ಬೆಲೆಯಲ್ಲಿಯೇ ಲಭ್ಯ ಇರುತ್ತವೆ. ಅದಾಗ್ಯೂ ಕೆಲವು ಇ-ಕಾಮರ್ಸ್ ಸೈಟ್‌ಗಳು ದಿಢೀರನೇ ದೊಡ್ಡ ಮಟ್ಟದ ಆಫರ್ ನೀಡುವ ಮೂಲಕ ಸ್ಮಾರ್ಟ್‌ಫೋನ್ ಖರೀದಿ ಮಾಡವವರಿಗೆ ಉತ್ತಮ ವೇದಿಕೆ ಒದಗಿಸುತ್ತವೆ. ಅದರಂತೆ ಈಗ ಒಪ್ಪೋದ ಈ ಫೋನ್ ಭಾರೀ ರಿಯಾಯಿತಿ ಪಡೆದುಕೊಂಡಿದೆ.
ಹೌದು, ಒಪ್ಪೋ ರೆನೊ 5 ಪ್ರೊ 5G (Oppo Reno 5 Pro 5G) ಸ್ಮಾರ್ಟ್‌ಫೋನ್ ಇದೀಗ ಭಾರೀ ರಿಯಾಯಿತಿ ಪಡೆದುಕೊಂಡಿದೆ. ಈ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸಲಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ವಿಶೇಷತೆ ಏನು? ಹಾಗೂ ಇದರ ಆಫರ್ ಬೆಲೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒಪ್ಪೋ ರೆನೊ 5 ಪ್ರೊ 5G ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಈ ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಮೊದಲು ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.55 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು,20:9 ಆಕಾರ ಅನುಪಾತವನ್ನು ಹೊಂದಿದೆ. ಜೊತೆಗೆ ಬೆಜೆಲ್-ಫ್ರೀ ಪಂಚ್-ಹೋಲ್ ಡಿಸ್‌ಪ್ಲೇಯು 1080x2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದ್ದು,90Hz ರಿಫ್ರೆಶ್ ರೇಟ್ ಆಯ್ಕೆಯಿಂದ ಆಕರ್ಷಕವಾಗಿದೆ.
ಒಪ್ಪೋ ರೆನೊ 5 ಪ್ರೊ 5G ಪ್ರೊಸೆಸರ್ ಯಾವುದು?: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 1000+ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ರನ್ ಆಗಲಿದೆ. ಇನ್ನುಳಿದಂತೆ ಈ ಫೋನ್ 8GB RAM ಮತ್ತು 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಒಪ್ಪೋ ರೆನೊ 5 ಪ್ರೊ 5G ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಸೆಲ್ಫಿ ಉದ್ದೇಶಕ್ಕಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಒಪ್ಪೋ ರೆನೊ 5 ಪ್ರೊ 5G ಬ್ಯಾಟರಿ ಸಾಮರ್ಥ್ಯ: ಒಪ್ಪೋ ರೆನೊ 5 ಪ್ರೊ 5G ಫೋನ್ 4350mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 65W ವೇಗದ ಚಾರ್ಜಿಂಗ್ ಇದು ಬೆಂಬಲ ನೀಡಲಿದೆ. ಈ ಮೂಲಕ 40 ನಿಮಿಷಗಳಲ್ಲಿ ಬ್ಯಾಟರಿಯನ್ನು ಭರ್ತಿ ಮಾಡಬಹುದಾಗಿದೆ. ಇನ್ನುಳಿದಂತೆ 5G ಬೆಂಬಲ, 3.5mm ಹೆಡ್‌ಫೋನ್ ಜ್ಯಾಕ್, ವೈ-ಫೈ, ಬ್ಲೂಟೂತ್, ಹಾಟ್‌ಸ್ಪಾಟ್ , ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ.

ಒಪ್ಪೋ ರೆನೊ 5 ಪ್ರೊ 5G ಆಫರ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ 39,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವು ಈಗ 29,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ 25% ರಿಯಾಯಿತಿ ಘೋಷಣೆ ಮಾಡಿದೆ. ಇದಿಷ್ಟು ಮಾತ್ರವಲ್ಲದೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯ ಇದ್ದು, ವಿನಿಮಯ ಕೊಡುಗೆಯಲ್ಲಿ 21,150ರೂ.ವರೆಗೂ ನೀವು ಹಣ ಉಳಿಸಬಹುದಾಗಿದೆ.


Click it and Unblock the Notifications








