Oppo: ಒಪ್ಪೋದ ಈ ಆಕರ್ಷಕ ಫೋನ್‌ಗೆ ಹಬ್ಬದ ಹಿನ್ನೆಲೆ ಆಫರ್! 64MP ಕ್ಯಾಮೆರಾ... 8GB RAM
ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಒಪ್ಪೋ (Oppo) ಫೋನ್‌ಗಳೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿನ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಒಪ್ಪೋದ ಈ ಪ್ರೀಮಿಯಂ ಫೋನ್‌ಗೆ ಆಕರ್ಷಕ ಅಫರ್ ನೀಡಲಾಗಿದೆ.
ಹೌದು, ದೀಪಾವಳಿ ಹಿನ್ನೆಲೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವುದು ಬಹಳಷ್ಟು ಮಂದಿಗೆ ಇರುವ ಆಸೆ. ಆದರೆ ದುಬಾರಿ ಬೆಲೆ ಹಿನ್ನೆಲೆ ಹಿಂಜರಿದಿರುತ್ತಾರೆ. ಆದರೆ ಪ್ರಮುಖ ಇ ಕಾಮರ್ಸ್ ಸೈಟ್ ಇದೀಗ ಒಪ್ಪೋ ರೆನೋ 5 ಪ್ರೊ 5G ಸ್ಮಾರ್ಟ್‌ಫೋನ್‌ಗೆ (Oppo Reno 5 Pro 5G smartphone) ಆಫರ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ಆಫರ್ ಆಯ್ಕೆ ಸಹ ಇದ್ದು, ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಈ ಫೋನ್ 64MP ಕ್ಯಾಮೆರಾ ಆಯ್ಕೆ, 8GB RAM ಸೌಲಭ್ಯ ಪಡೆದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಒಪ್ಪೋ ರೆನೋ 5 ಪ್ರೊ 5G ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಫೋನ್ ಸಾಮಾನ್ಯ ದರ 38,990ರೂ.ಗಳಾಗಿದ್ದು, 32,419 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ (Flipkart) ಈ ಫೋನ್‌ಗೆ 17% ರಷ್ಟು ಬೆಲೆ ಕಡಿಮೆ ಮಾಡಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಹಾಗೂ ವಿನಿಮಯ ಆಫರ್ ಸಹ ಇದ್ದು, ಇದರಿಂದ ನೀವು 22,800 ರೂ.ವರೆಗೆ ಉಳಿಸಬಹುದು.
ಬ್ಯಾಂಕ್ ಆಫರ್ ಬಗ್ಗೆ ಮಾಹಿತಿ ತಿಳಿಯುವುದಾದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ 1750 ರಿಯಾಯಿತಿ, ಸ್ಪೋಟಿಫೈ ಪ್ರೀಮಿಯಂ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಲೇಟರ್ ಪೇ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ 1,981ರೂ.ಗಳಿಂದ ಆರಂಭ ಆಗಲಿದೆ.
ಒಪ್ಪೋ ರೆನೋ 5 ಪ್ರೊ ಡಿಸ್‌ಪ್ಲೇ ವಿವರ: ಈ ಫೋನ್ 6.55 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 20:9 ಆಕಾರ ಅನುಪಾತದೊಂದಿಗೆ ಬರುತ್ತದೆ. ಇದರೊಂದಿಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ ಬೆಜೆಲ್-ಫ್ರೀ ಪಂಚ್-ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ನ ರಿಫ್ರೆಶ್ ರೇಟ್ ಆಯ್ಕೆ ಹಾಗೂ 402ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಒಪ್ಪೋ ರೆನೋ 5 ಪ್ರೊ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1000 ಪ್ಲಸ್ MT6889Z ಪ್ರೊಸೆಸರ್ ಬಲ ಪಡೆದಿದ್ದು, ಇದು ಆಕ್ಟಾ-ಕೋರ್ ಕಾರ್ಟೆಕ್ಸ್ A77 ಮತ್ತು ಕ್ವಾಡ್-ಕೋರ್ ಕಾರ್ಟೆಕ್ಸ್ A55 CPU ನಿಂದ ಕಾರ್ಯನಿರ್ವಹಿಸಲಿದ್ದು, ಇದು ಕ್ರಮವಾಗಿ 2.6GHz ಮತ್ತು 2GHz ನಲ್ಲಿ ರನ್ ಆಗಲಿದೆ. ಜೊತೆಗೆ ಮಾಲಿ-G77 MC9 ಜಿಪಿಯು ನೊಂದಿಗೆ 8GB RAM ಆಯ್ಕೆ ಪಡೆದಿದೆ.

ಒಪ್ಪೋ ರೆನೋ 5 ಪ್ರೊ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 2MP ಮೊನೊ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, 64MP ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೆನ್ಸರ್ ಇವೆ. ಇವು ಎಲ್‌ಇಡಿ ಫ್ಲ್ಯಾಶ್, ಎಚ್‌ಡಿಆರ್ ಮೋಡ್, ಡಿಜಿಟಲ್ ಜೂಮ್, ಐಎಸ್‌ಒ ಹೊಂದಾಣಿಕೆ ಮತ್ತು ಹೆಚ್ಚಿನ ಫೀಚರ್ಸ್ ಆಯ್ಕೆ ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ 4,350mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications