ಒಪ್ಪೋ ರೆನೊ 7 ಸರಣಿ ಬಿಡುಗಡೆಗೆ ದಿನಾಂಕ ನಿಗದಿ!..ಫೀಚರ್ಸ್‌ ಏನು?..ಬೆಲೆ?

|

ಒಪ್ಪೋ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ರೆನೋ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಇದೀಗ ಕಂಪನಿಯು ತನ್ನ ಒಪ್ಪೋ ರೆನೊ 6 ಸರಣಿಯ ಮುಂದುವರಿದ ಭಾಗವಾಗಿ ಸಂಸ್ಥೆಯು ಒಪ್ಪೋ ರನೊ 7 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು ಈ ಫೋನ್ ಮೂರು ಮಾಡೆಲ್‌ಗಳನ್ನು ಒಳಗೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ಕಂಪೆನಿ

ಹೌದು, ಒಪ್ಪೋ ಕಂಪೆನಿ ತನ್ನ ಹೊಸ ಒಪ್ಪೊ ರೆನೊ 7 ಸರಣಿಯನ್ನು ಭಾರತದಲ್ಲಿ ಇದೇ ಫೆಬ್ರವರಿ 4 ರಂದು ಲಾಂಚ್‌ ಮಾಡಲಿದೆ ಎನ್ನಲಾಗಿದೆ. ಇನ್ನು ಈ ಸರಣಿಯು ಒಪ್ಪೋ ರೆನೊ 7 5G , ಒಪ್ಪೋ ರೆನೊ 7 ಪ್ರೊ 5G ಮತ್ತು ಒಪ್ಪೋ ರೆನೊ 7 SE 5G ಮಾಡೆಲ್‌ಗಳನ್ನು ಹೊಂದಿರಲಿದೆ. ಕೆಲವೊಂದು ಫೀಚರ್ಸ್‌ಗಳ್ಲಲಿ ಸಾಮ್ಯತೆ ಹೊಂದಿದ್ದು, ಮತ್ತೆ ಕೆಲವು ಫೀಚರ್ಸ್‌ಗಳಲ್ಲಿ ಭಿನ್ನತೆ ಪಡೆದಿವೆ. ಹಾಗಾದರೇ ಒಪ್ಪೊ ರೆನೊ 7 ಸರಣಿಯ ಈ ಮೂರು ಫೋನ್‌ಗಳ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ರೆನೊ 7 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೊ 7 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೊ 7 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.43-ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, 11 ColorOS 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 60W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಒಪ್ಪೋ ರೆನೊ 7 ಪ್ರೊ 5G

ಒಪ್ಪೋ ರೆನೊ 7 ಪ್ರೊ 5G

ಒಪ್ಪೋ ರೆನೊ7 ಪ್ರೊ 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ FHD + AMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200-ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 ColorOS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಫೋನ್

ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX709 ಸೆಲ್ಪಿ ಕ್ಯಾಮೆರಾ ಹೊಂದಿದೆ. ಈ ಫೋನ್‌ 4,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಒಪ್ಪೋ ರೆನೊ 7 SE 5G

ಒಪ್ಪೋ ರೆನೊ 7 SE 5G

ಒಪ್ಪೋ ರೆನೊ 7 SE 5G ಸ್ಮಾರ್ಟ್‌ಫೊನ್‌ 6.43 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಕ್ಯಾಮೆರಾವನ್ನು

ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX581 ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು 16 ಮೆಗಾ ಪಿಕ್ಸೆಲ್ Sony IMX471 ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಒಪ್ಪೋ ರೆನೊ 7 ಸ್ಮಾರ್ಟ್‌ಫೋನ್‌ 8GB ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಆರಂಭಿಕ ಬೆಲೆಯು ಭಾರತದಲ್ಲಿ 31,490ರೂ. ಬೆಲೆ ನಿಗದಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಚೀನಾದಲ್ಲಿ ಈ ಸರಣಿ ಲಾಂಚ್ ಆದಾಗ 8GB ಮತ್ತು 256GB ಸ್ಟೋರೇಜ್ ಆವೃತ್ತಿಗೆ CNY 2,999, ಅಲ್ಲದೆ 12GB RAM ಮತ್ತು 256GB ಸ್ಟೋರೇಜ್‌ ರೂಪಾಂತರಕ್ಕೆ CNY 3,699 ಬೆಲೆ ಪಡೆದಿತ್ತು. ಇನ್ನು ರೆನೊ 7 ಪ್ರೊ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB ಮತ್ತು 256GB ಸ್ಟೋರೇಜ್ ಮಾದರಿಯು CNY 3,699 ಬೆಲೆಯಲ್ಲಿ ಕಾಣಿಸಿತ್ತು. ಇದರೊಂದಿಗೆ ಒಪ್ಪೋ ರೆನೊ 7 SE ಫೋನ್‌ 8GB ಮತ್ತು 256GB ಸ್ಟೋರೇಜ್ ಆವೃತ್ತಿಗೆ CNY 2,399 ಬೆಲೆಯಲ್ಲಿ ಕಾಣಿಸಿತ್ತು.

Best Mobiles in India

English summary
Oppo Reno 7 5G Price in India leaked ahead of February 4 Launch: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X