ಒಪ್ಪೋ ರೆನೊ 7 ಪ್ರೊ ಈಗ ಡಿಸ್ಕೌಂಟ್‌ನಲ್ಲಿ ಲಭ್ಯ!..ಈ ಫೋನ್ ಖರೀದಿಸಬಹುದೇ?
ಜನಪ್ರಿಯ ಒಪ್ಪೋ ಮೊಬೈಲ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ರೆನೋ ಸರಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಪ್ರೀಮಿಯಂ ಪ್ರೈಸ್ ಟ್ಯಾಗ್‌ನಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆದ್ರೆ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ಭಾರೀ ಇಳಿಕೆ ಆಗಿದ್ದು, ಗ್ರಾಹಕರು ತಿರುಗಿ ನೋಡುವಂತೆ ಮಾಡಿದೆ.
ಹೌದು, ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 12 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಫೋನ್ ಇದೀಗ 34,899ರೂ. ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಕೆಲವು ಆಫರ್ ಸಹ ಲಭ್ಯವಾಗಲಿವೆ ಜೊತೆಗೆ ಎಕ್ಸ್‌ಚೇಂಜ್ ಕೊಡುಗೆ ಸಹ ದೊರೆಯುತ್ತದೆ.

ಅಂದಹಾಗೆ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 4500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 65W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನಿನ ಡಿವೈಸ್ ಸಹ ಗ್ರಾಹಕರ ಕಣ್ಮನ ಸೆಳೆಯುವಂತಿದ್ದು, ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್ ಹೊಂದಿದೆ. ಹಾಗಾದರೇ ಒಪ್ಪೋ ರೆನೊ 7 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ : ಡಿಸ್‌ಪ್ಲೇ ರಚನೆ
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್ ಮತ್ತು 180Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್ ಅನ್ನು ಹೊಂದಿದೆ.
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ : ಪ್ರೊಸೆಸರ್ ಬಲ
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ ಒಎಸ್ 12 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12 GB RAM + 256 GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ : ಕ್ಯಾಮೆರಾ ಸೆನ್ಸಾರ್
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ : ಬ್ಯಾಟರಿ ಬ್ಯಾಕ್‌ಅಪ್
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಫೋನ್ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಲಭ್ಯ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








