ಒಪ್ಪೋ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಈ ಫೋನ್‌ಗಳು ಇನ್ಮುಂದೆ ಲಭ್ಯ ಇಲ್ಲ!
ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಒಪ್ಪೋ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಫೋನ್‌ಗಳು ಕೈಗೆಟಕುವ ದರದೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಭಾರತದಲ್ಲಂತೂ ಈ ಫೋನ್‌ಗಳಿಗೆ ವಿಶೇಷ ಸ್ಥಾನ ಮಾನ ಇದೆ. ಯಾಕೆಂದರೆ ಭಾರತದ ಜನರು ಕ್ಯಾಮೆರಾ, ಬ್ಯಾಟರಿ ಬ್ಯಾಕಪ್‌ಗೆ ಹೆಚ್ಚಿನ ಮನ್ನಣೆ ನೀಡುವುದರಿಂದ ಈ ಫೋನ್‌ಗಳು ಬಳಕೆದಾರರ ಆಸಕ್ತಿಗಳನ್ನು ಈಡೇರಿಸುತ್ತವೆ. ಈ ನಡುವೆ ಒಪ್ಪೋ ಶಾಕಿಂಗ್ ಸುದ್ದಿ ನೀಡಿದೆ.
ಹೌದು, ಚೈನೀಸ್ ಸ್ಮಾರ್ಟ್‌ಫೋನ್ ತಯಾರಕ ಒಪ್ಪೋ (OPPO) ತನ್ನ ಒಪ್ಪೋ ರೆನೋ ಪ್ರೊ+ ರೂಪಾಂತರವನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ರೆನೋ ಸರಣಿಯಲ್ಲಿ ಮೂರು ಫೋನ್‌ಗಳನ್ನು ಒಳಗೊಂಡಿದ್ದು, ಅದರಂತೆ ಒಪ್ಪೋ ರೆನೋ 10, ರೆನೋ 10 ಪ್ರೊ ಮತ್ತು ರೆನೋ 10 ಪ್ರೊ+ (OPPO Reno 10, Reno 10 Pro ಮತ್ತು Reno 10 Pro+ ) ಅನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಹಾಗಿದ್ರೆ, ಬನ್ನಿ ಯಾವ ಉದ್ದೇಶಕ್ಕೆ ಈ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಯೋಣ.

ರೆನೋ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್: ಒಪ್ಪೋದ ರೆನೋ ಸರಣಿಯಲ್ಲಿ ಒಪ್ಪೋ ರೆನೋ 10, ರೆನೋ 10 ಪ್ರೊ ಮತ್ತು ರೆನೋ 10 ಪ್ರೊ+ ಸ್ಮಾರ್ಟ್‌ಫೋನ್‌ಗಳಿದ್ದು, ಕಂಪನಿಯು ಶೀಘ್ರದಲ್ಲೇ ಈ ಫೋನ್‌ಗಳನ್ನು ಬದಲಾಯಿಸುತ್ತದೆ ಮತ್ತು ಪ್ರೊ ಮತ್ತು ಪ್ರೊ ಅಲ್ಲದ ರೂಪಾಂತರವನ್ನು ಮಾತ್ರ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮುಂಬರುವ ಶ್ರೇಣಿಗಳಲ್ಲಿ ಪ್ರೊ+ ವೇರಿಯಂಟ್ ಅನ್ನು ಬದಲಾವಣೆ ಮಾಡುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.
ಇದರೊಂದಿಗೆ ಒಪ್ಪೋ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ ಜನ್ 1 ಚಿಪ್‌ಸೆಟ್‌ನೊಂದಿಗೆ ಹೊಸ ಫೈಂಡ್ X6 ವೇರಿಯಂಟ್ ಅನ್ನು ಪರಿಚಯಿಸಬಹುದು ಎನ್ನಲಾಗಿದೆ. ಇನ್ನು ಒಪ್ಪೋ ಪ್ರೊ+ ಮಾಡೆಲ್ ಈ ಹಿಂದೆ ರೆನೋ 8, ರೆನೋ 9, ಮತ್ತು ರೆನೋ 10 ಲೈನ್‌ಗಳಲ್ಲಿ ಲಭ್ಯವಿತ್ತು. ಆದರೆ, ಮುಂಬರುವ ರೆನೋ 11 ಸರಣಿಯಲ್ಲಿ ಇದು ಇಲ್ಲದಿರಬಹುದು ಎಂದು ಹೇಳಲಾಗುತ್ತಿದೆ. ಈ ಬದಲಾವಣೆಗೆ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ, ಚೀನೀ ಟಿಪ್‌ಸ್ಟರ್ ಅನ್ನು ಉಲ್ಲೇಖಿಸಿ, ರೆನೋ ಸರಣಿಯ ಪ್ರೊ ಮತ್ತು ಪ್ರೊ ಅಲ್ಲದ ರೂಪಾಂತರಗಳಿಗೆ ಹೋಲಿಸಿದರೆ ಪ್ರೊ + ರೂಪಾಂತರವು ನಿರೀಕ್ಷಿತ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಸ್ವೀಕರಿಸಲಿಲ್ಲ ಎನ್ನಲಾಗಿದೆ.
ಇದರ ನಡುವೆ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಒಪ್ಪೋ ರೆನೋ 10 ಸರಣಿಯನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸಿದ್ದು, ಈ ಮೂಲಕ ಒಪ್ಪೋ ರೆನೋ 10 ಪ್ರೊ+ ಭಾರತಕ್ಕೆ ಎಂಟ್ರಿ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಇದರೊಂದಿಗೆ ಒಪ್ಪೋ ಕಂಪೆನಿಯಲ್ಲಿ ಮತ್ತೊಂದು ಬದಲಾವಣೆ ಸಂಭವಿಸಲಿದ್ದು, ಈ ಬಗ್ಗೆಯೂ ಹಲವಾರು ವರದಿಗಳು ಪ್ರಕಟ ಆಗಿವೆ.

ಹೊಸ ಒಪ್ಪೋ ಫೈಂಡ್ X6 ರೂಪಾಂತರ: ಫೈಂಡ್ X ಸರಣಿಯಲ್ಲಿ ಒಪ್ಪೋ ಹೊಸ ವೇರಿಯಂಟ್ ಪ್ರಾರಂಭಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಮತ್ತು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8 ಜನ್ 2 ಚಿಪ್‌ಸೆಟ್‌ನಿಂದ ಕ್ರಮವಾಗಿ ಒಪ್ಪೋ X6 ಮತ್ತು ಫೈಂಡ್ X6 ಪ್ರೊ ರನ್ ಆಗಲಿವೆ ಎನ್ನಲಾಗಿದೆ. ಈ ವರದಿಗಳು ಕೆಲವು ಸಲಹೆಗಳು ಮತ್ತು ವದಂತಿಗಳನ್ನು ಆಧರಿಸಿದ್ದು, ಈ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.


Click it and Unblock the Notifications








