ಇಂದು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಒಪ್ಪೋ ರೆನೋ 11 5G ಸರಣಿ!
ಜನಪ್ರಿಯ ಒಪ್ಪೋ ಕಂಪೆನಿಯ ಈಗಾಗಲೇ ಕೆಲವು ದೈತ್ಯ ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಅದರ ಮುಂದುವರಿದ ಭಾಗವಾಗಿ ಇದೀಗ ಒಪ್ಪೋ ರೆನೋ 11 5G ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಫೋನ್ ಸರಣಿಯು ಇಂದು (ಜ. 12 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ.
ಹೌದು, ಒಪ್ಪೋ ಸಂಸ್ಥೆಯು ತನ್ನ ನೂತನ ಒಪ್ಪೋ ರೆನೋ 11 5G ಸರಣಿಯನ್ನು ಇಂದು (ಮುಂಜಾನೆ 11 ಗಂಟೆ ಸುಮಾರಿಗೆ) ಭಾರತೀಯ ಮಾರಕಟ್ಟೆಗೆ ಲಾಂಚ್ ಮಾಡಲಿದೆ. ಇನ್ನು ಈ ಸರಣಿಯು ಒಪ್ಪೋ ರೆನೋ 11 5G ಹಾಗೂ ಒಪ್ಪೋ ರೆನೋ 11 ಪ್ರೊ 5G ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.

ಇನ್ನು ಈ ಸ್ಮಾರ್ಟ್‌ಫೋನ್ ಸರಣಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 8200SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಸರಣಿಯು ಇತರೆ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ ರೆನೋ 11 ಮೊಬೈಲ್ 6.70 ಇಂಚಿನ OLED ಕರ್ವ್ಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಒಳಗೊಂಡಿದೆ. ಇದರೊಂದಿಗೆ ಡಿಸ್‌ಪ್ಲೇ 950 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 1Hz ನಿಂದ 120Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ.

ಒಪ್ಪೋ ರೆನೋ 11 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್ ಪವರ್‌ನಲ್ಲಿ ಲಗ್ಗೆ ಇಡಲಿದ್ದು, ಆಂಡ್ರಾಯ್ಡ್ 14 ಆಧಾರಿತ ColorOS 14ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಆಂತರೀಕ ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ಇದರೊಂದಿಗೆ 12GB ವರ್ಚುವಲ್ ಮೆಮೊರಿಯನ್ನು ವಿಸ್ತರಿಸಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ.
ಒಪ್ಪೋ ರೆನೋ 11 ಮೊಬೈಲ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ Sony LYT600 ಸೆನ್ಸಾರ್ ಅನ್ನು ಹೊಂದಿದೆ. ಇದು 26mm ಫೋಕಲ್ ಲೆಂತ್ ಬೆಂಬಲಿಸಲಿದೆ.
ದ್ವಿತೀಯ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ತೃತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.
ಒಪ್ಪೋ ರೆನೋ 11 ಮೊಬೈಲ್ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯದಲ್ಲಿ ಲಗ್ಗೆ ಇಡಲಿದ್ದು, ಇದಕ್ಕೆ ಪೂರಕವಾಗಿ ಇದು 67W ಸೂಪರ್ ಫ್ಲ್ಯಾಶ್ ಚಾರ್ಜ್ ಅನ್ನು ಸಪೋರ್ಟ್ ಮಾಡಲಿದೆ. ಅಲ್ಲದೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.3, GPS/ A-GPS, NFC, OTG, ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.
ಇದಲ್ಲದೆ ಈ ಫೋನ್ ಅಕ್ಸಿಲೆರೊಮೀಟರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸರ್, ಅಂಡರ್-ಸ್ಕ್ರೀನ್ ಪ್ರಾಕ್ಸಿಮಿಟಿ ಸೆನ್ಸಾರ್, ಗ್ರಾವಿಟಿ ಸೆನ್ಸಾರ್, ಕಲರ್ ಟೆಂಪರೇಚರ್ ಸೆನ್ಸಾರ್, ಐಆರ್ ಕಂಟ್ರೋಲ್ ಮತ್ತು ಗೈರೊಸ್ಕೋಪ್ ಪಡೆದಿದೆ.
ಒಪ್ಪೋ ರೆನೋ 11 ಪ್ರೊ ಫೀಚರ್ಸ್
ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಒಳಗೊಂಡಿದ್ದು, OLED ಕರ್ವ್ಡ್ ಮಾದರಿಯ ರಚನೆ ಪಡೆದಿರುವ ಸಾಧ್ಯತೆ ಇದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200SoC ಪ್ರೊಸೆಸರ್ ಸೌಲಭ್ಯ ಪಡೆದಿದೆ. ಜೊತೆಗೆ ಹಿಂಬದಿಯ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಆಗಿದ್ದು, 32 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಪಡೆದಿದೆ.


Click it and Unblock the Notifications








