ಇತ್ತೀಚೆಗಷ್ಟೇ ಲಾಂಚ್ ಆದ ಜನಪ್ರಿಯ ಈ ಒಪ್ಪೋ ಫೋನ್‌ಗೆ ಭರ್ಜರಿ ರಿಯಾಯಿತಿ!
ಒಪ್ಪೋ ಸ್ಮಾರ್ಟ್‌ಫೋನ್‌ಗಳು ಅಗ್ಗದ ಬೆಲೆಗೆ ವಿಶೇಷ ಫೀಚರ್ಸ್ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಒಪ್ಪೋ ಫೋನ್‌ಗಳಿಗೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಭರ್ಜರಿ ರಿಯಾಯಿತಿ ನೀಡುತ್ತಿದ್ದು, ಇತ್ತೀಚಿಗೆ ಲಾಂಚ್ ಆದ ಫೋನ್‌ಗೂ ಈಗ 23% ರಿಯಾಯಿತಿ ನೀಡಲಾಗಿದೆ.
ಹೌದು, ಒಪ್ಪೋ ಸಂಸ್ಥೆಯ ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ಗೆ (OPPO Reno8T 5G (8 GB RAM) ಗೆ ಭರ್ಜರಿ ರಿಯಾಯಿತಿ ನೀಡಲಾಗಿದ್ದು, ಈ ಫೋನ್ 120Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 CPU ಪ್ರೊಸೆಸರ್ ಬಲ ಹೊಂದಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರ ತಿಳಿಯೋಣ.

ಒಪ್ಪೋ ರೆನೋ 8T 5G ಡಿಸ್‌ಪ್ಲೇ ವಿವರ: ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 395ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದ್ದು, ಆಕರ್ಷಕ ಶೈಲಿ ಹೊಂದಿದೆ.
ಒಪ್ಪೋ ರೆನೋ 8T 5G ಪ್ರೊಸೆಸರ್ ಮಾಹಿತಿ: ಈ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 CPU ಬಲ ಹೊಂದಿದ್ದು, ಇದರೊಂದಿಗೆ ಅಡ್ರಿನೋ 619 GPU ಮೂಲಕ ಪ್ಯಾಕ್ ಆಗಿದ್ದು, ಇದು ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚುಗೆ ಮಾಡಿದೆ. ಇನ್ನುಳಿದಂತೆ 8 GB RAM ಆಯ್ಕೆ ಹಾಗೂ 128 GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 1 TB ವರೆಗೆ ಇಂಟರ್ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದು.
ಒಪ್ಪೋ ರೆನೋ 8T 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 108MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಲೆನ್ಸ್ ಜೊತೆಗೆ 13MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಇವು ISO ನಿಯಂತ್ರಣ, ಫೇಸ್ ಫೈಂಡ್ ಸೇರಿದಂತೆ ಇನ್ನಿತರೆ ಪ್ರಮುಖ ಫೀಚರ್ಸ್ ಪಡೆದಿದೆ. ಇದರೊಂದಿಗೆ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಒಪ್ಪೋ ರೆನೋ 8T 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 4800 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 5G, GPRS, ಇನ್‌ಬಿಲ್ಟ್ ಬ್ರೌಸರ್, ಬ್ಲೂಟೂತ್ ಆವೃತ್ತಿv5.1, ವೈ ಫೈ ಆವೃತ್ತಿ 802.11ac (Wi-Fi 5), 802.11a/b/g/n, ಎನ್‌ಎಫ್‌ಸಿ, ಆಡಿಯೋ ಜ್ಯಾಕ್, ಟೈಪ್ ಸಿ ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಒಪ್ಪೋ ರೆನೋ 8T 5G ಬೆಲೆ ಹಾಗೂ ಆಫರ್: ಈ ಸ್ಮಾರ್ಟ್‌ಫೋನ್ 38,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು 29,999ರೂ.ಗಳಿಗೆ ಕೊಂಡುಕೊಳ್ಳಬಹುದು. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ 23% ಡಿಸ್ಕೌಂಟ್ ನೀಡಿದೆ. ಇದಿಷ್ಟು ಮಾತ್ರವಲ್ಲದೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಆಫರ್‌ನಲ್ಲೂ ಸಹ ಇನ್ನೂ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದು.
ಇದರೊಂದಿಗೆ ರೆಡ್ಮಿ ನೋಟ್ 10S ಫೋನ್‌ಗೂ ಸಹ ಅಮೆಜಾನ್‌ನಲ್ಲಿ ಆಫರ್ ನೀಡಲಾಗಿದೆ. ಈ ಫೋನ್‌ಗೆ 12% ಡಿಸ್ಕೌಂಟ್ ನೀಡಲಾಗಿದ್ದು, 16,999 ಬದಲಿಗೆ 14,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 64MP + 8MP+2MP ಹಾಗೂ 2MP ಯ ಕ್ಯಾಮೆರಾ ಹಾಗೂ 13MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಬಲ ಹೊಂದಿದ್ದು, 6GB RAM ಹಾಗೂ ಮಾಲಿ G76 MC4 GPU ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ಪಡೆದುಕೊಂಡಿದೆ. ಇದೆಲ್ಲದರ ಜೊತೆಗೆ 5,000mAh ಸಾಮರ್ಥ್ಯದೊಂದಿಗೆ ಬ್ಯಾಟರಿ ಆಯ್ಕೆ ಇದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ.


Click it and Unblock the Notifications








