32ಎಂಪಿ ಸೆಲ್ಫಿ ಕ್ಯಾಮೆರಾದ ಈ ಮೊಬೈಲ್‌ಗೆ ಬಿಗ್ ಡಿಸ್ಕೌಂಟ್!..ಸಖತ್ ಉಳಿತಾಯ!
ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಒಪ್ಪೋ ಸಂಸ್ಥೆಯ ಫೋನ್‌ಗಳು ಕೂಡಾ ಭಾರೀ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಒಪ್ಪೋ ರೆನೋ 8T 5G ಫೋನ್ ಈ ಸೇಲ್ ಮೇಳದಲ್ಲಿ ಗ್ರಾಹಕರು ಹುಬ್ಬೇರಿಸುವಂತಹ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಒಪ್ಪೋ ರೆನೋ 8T 5G ಮೊಬೈಲ್ ಶೇ. 23% ರಷ್ಟು ರಿಯಾಯಿತಿ ಹೊಂದಿದ್ದು, 8 GB RAM + 128 GB ವೇರಿಯಂಟ್ ಫೋನ್ 29,999 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆಗಳು ಕೂಡಾ ಗ್ರಾಹಕರಿಗೆ ಸಿಗಲಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ರಿಯಾಯಿತಿ ಬೆಲೆಗೆ ಫೋನ್ ಖರೀದಿಸಬಹುದು.

ಅಂದಹಾಗೆ ಒಪ್ಪೋ ರೆನೋ 8T 5G ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶ ಒಳಗೊಂಡಿದೆ. ಇದು 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಇದೆ. ಹಾಗಾದರೇ ಇನ್ನುಳಿದಂತೆ ಈ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೀಗಿದೆ
ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಮೈಕ್ರೋ-ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಡ್ರ್ಯಾಗನ್‌ಟ್ರೈಲ್-ಸ್ಟಾರ್2 ಪ್ರೊಟೆಕ್ಷನ್ ಅನ್ನು ಹೊಂದಿದ್ದು, ವೈಡ್‌ವೈನ್ L1 ಪ್ರಮಾಣೀಕರಣವನ್ನು ಪಡೆದಿದೆ.
ಪ್ರೊಸೆಸರ್ ಮಾಹಿತಿ ಇಲ್ಲಿದೆ
ಒಪ್ಪೋ ಸಂಸ್ಥೆಯ ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ ColorOS 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ. ಇದು 8GB ವರೆಗೆ ಹೆಚ್ಚುವರಿ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡಿದೆ.
ಕ್ಯಾಮೆರಾ ಸೆನ್ಸಾರ್ ರಚನೆಯ ಮಾಹಿತಿ
ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಇನ್ನು ಕ್ಯಾಮೆರಾವು HDR, ಬೊಕೆ ಫ್ಲೇರ್ ಪೋರ್ಟ್ರೇಟ್ ಮತ್ತು ಡ್ಯುಯಲ್-ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ಹೊಂದಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ
ಒಪ್ಪೋ ರೆನೋ 8T 5G ಫೋನ್ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 67W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ ಮಾಡುತ್ತದೆ. ಇದರಿಂದ ಈ ಫೋನ್ ಅನ್ನು ನೀವು ಕೇವಲ 45 ನಿಮಿಷಗಳಲ್ಲಿ 0 ರಿಂದ 100% ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5 ಮತ್ತು ಬ್ಲೂಟೂತ್ 5.1 ವಾಯರ್‌ಲೆಸ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತೆ.


Click it and Unblock the Notifications








