ಬರಲಿದೆ ಒಪ್ಪೊ '3D ಕರ್ವ್ ಡಿಸ್‌ಪ್ಲೇ' ಸ್ಮಾರ್ಟ್‌ಫೋನ್!

|

ಚೀನಾ ಮೂಲದ ಒಪ್ಪೊ ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚಿನ ತನ್ನ ಸ್ಮಾರ್ಟ್‌ಫೋನಗಳಲ್ಲಿ ಹಲವು ಹೊಸತನದ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸೆಲ್ಫಿಗಾಗಿ ವಿಶೇಷ ಪಾಪ್‌ ಅಪ್‌ ಕ್ಯಾಮೆರಾ, ಫ್ಲಿಪ್‌ ಕ್ಯಾಮೆರಾ ಫೀಚರ್‌ ನೀಡಿದೆ. ಬ್ಯಾಟರಿ ಬಾಳಿಕೆಯಲ್ಲಿಯೂ ಹೆಚ್ಚಿನ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳನ್ನು ನೀಡಿದೆ. ಆದ್ರೆ ಇದೀಗ ತನ್ನ ಮುಂಬರುವ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡದೊಂದು ಅಚ್ಚರಿ ನೀಡಲು ಸಜ್ಜಾಗಿದೆ.

3D ಲುಕ್‌

ಹೌದು, ಜನಪ್ರಿಯ ಒಪ್ಪೊ ಸ್ಮಾರ್ಟ್‌ಫೋನ್ ಸಂಸ್ಥೆಯು ಸಂಪೂರ್ಣ 3D ಲುಕ್‌ನ ಕರ್ವ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಪರಿಚಯಿಸುವ ತಯಾರಿಯಲ್ಲಿದೆ. ಒಪ್ಪೊದ ಹೊಸ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯ ಸುತ್ತಲೂ ನಾಲ್ಕು ಮೂಲೆಗಳು ಕರ್ವ್‌ ಡಿಸೈನಿನಲ್ಲಿ ಇರಲಿದ್ದು, ಡಿಸ್‌ಪ್ಲೇಗೆ ಅಂಚು ಇರುವುದಿಲ್ಲ ಎನ್ನಲಾಗಿದೆ. ವಿಶೇಷ ಸೆಲ್ಫಿ ಕ್ಯಾಮೆರಾ ಸಹ ಇರಲಿದೆ ಎನ್ನುವ ಲೀಕ್‌ ಮಾಹಿತಿಗಳಿಂದ ತಿಳಿದಿದೆ.

ಫ್ಲ್ಯಾಗ್‌ಶಿಫ್

ಒಪ್ಪೊ ತನ್ನ ಮುಂಬರುವ ಹೊಸ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಸಂಪೂರ್ಣ ಕರ್ವ್ ರಚನೆಯನ್ನು ನೀಡಲು ಪೆಂಟೆಂಟ್‌ ಪಡೆದಿದೆ ಎನ್ನಲಾಗಿದ್ದು, ಸ್ಮಾರ್ಟ್‌ಫೋನಿನ ನಾಲ್ಕು ಮೂಲೆಗಳನ್ನು ಕರ್ವ್ ಡಿಸೈನ್‌ ನೀಡುತ್ತಿರುವ ಈ ಪ್ರಯತ್ನ ಸ್ಮಾರ್ಟ್‌ಫೋನ್ ವಲಯದಲ್ಲಿಯೇ ನೂತನ ಅಚ್ಚರಿ ಎನ್ನಲಾಗಿದೆ. ಹಾಗೆಯೇ ಇದರಲ್ಲಿ ಯಾವುದೇ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಇರುವುದಿಲ್ಲ ಬದಲಿಗೆ ಡಿಸ್‌ಪ್ಲೇಯಲ್ಲಿಯೇ ಸೆಲ್ಫಿ ಕ್ಯಾಮೆರಾ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಪಿಕ್ಸಲ್ ರೆಸಲ್ಯೂಶನ್

ಕರ್ವ್ ಡಿಸ್‌ಪ್ಲೇ ರಚನೆಯಲ್ಲಿ ಡಿಸ್‌ಪ್ಲೇಯು ಹೆಚ್ಚು ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರುತ್ತದೆ ಎನ್ನಲಾಗಿದ್ದು, ಡಿಸ್‌ಪ್ಲೇಯಲ್ಲಿಯೇ ಲೈಟ್‌ ಸೆನ್ಸಾರ್ ಸೌಲಭ್ಯವನ್ನು ಸಹ ಪಡೆದಿರಲಿದೆ. ಒಪ್ಪೊದ ಡಿಸ್‌ಪ್ಲೇಯಲ್ಲಿ ಇದೊಂದು ಹೊಸ ಪ್ರಯತ್ನವೇ ಎನ್ನಬಹುದಾದರೂ ಈ ಡಿಸ್‌ಪ್ಲೇಯ ಬಾಳಿಕೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ. ಡಿಸ್‌ಪ್ಲೇಯ ಎರಡು ಸೈಡ್‌ ಕರ್ವ್‌ ರಚನೆಯನ್ನು ಹುವಾವೆ ಮೇಟ್‌ 30ಯಲ್ಲಿ ಕಾಣಬಹುದಾಗಿದೆ.

ಪೆಂಟೆಂಟ್ ಪಡೆದಿರುವುದು ಮುಖ್ಯ

ಹಾಗೆ ನೋಡಿದರೇ ಕಳೆದ ಫೆಬ್ರುವರಿಯಲ್ಲಿ ಶಿಯೋಮಿಯು ಸಹ ನಾಲ್ಕು ಮೂಲೆಗಳ ಕರ್ವ್ ರಚನೆಯ ಡಿಸ್‌ಪ್ಲೇ ಪೆಂಟೆಂಟ್ ಪಡೆದಿತ್ತು. ಸ್ಯಾಮ್‌ಸಂಗ್ ಕಂಪನಿ ಸಹ 3D ಮಾದರಿಯ ಡಿಸ್‌ಪ್ಲೇಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ತೊಡಗಿದೆ ಎನ್ನಲಾಗಿದೆ. ಪೆಂಟೆಂಟ್ ಪಡೆದಿರುವುದು ಮುಖ್ಯವೆನಿಸುವುದಿಲ್ಲ, ಆದರೆ ಮಾರುಕಟ್ಟೆಗೆ ಯಾರು ಮೊದಲು ನಾಲ್ಕು ಮೂಲೆ ಕರ್ವ್ ಮಾದರಿಯ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಯಾವ ಸಂಸ್ಥೆ ಲಾಂಚ್ ಮಾಡುತ್ತದೆಯೋ ಕಾದು ನೋಡಬೇಕು.

Best Mobiles in India

English summary
Oppo’s next flagship smartphone might debut with curved edges on all the four sides. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X