Home
ಸುದ್ದಿಜಾಲ

ಭಾರತಕ್ಕೆ ಲಗ್ಗೆ ಇಟ್ಟ 'ಒಪ್ಪೋ ವಾಚ್‌ ಫ್ರಿ' ಸ್ಮಾರ್ಟ್‌ವಾಚ್‌!..ಫೀಚರ್ಸ್ ಏನು?

ಒಪ್ಪೋ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇತ್ತೀಚಿಗೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಂದಲೂ ಗುರುತಿಸಿಕೊಂಡಿದೆ. ಒಪ್ಪೋ ಇದೋಗ ಭಾರತದಲ್ಲಿ ನೂತನವಾಗಿ ಒಪ್ಪೋ ರೆನೊ 7 5G ಮತ್ತು ಒಪ್ಪೋ ರೆನೊ 7 ಪ್ರೊ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅದರೊಂದಿಗೆ ಒಪ್ಪೋ ವಾಚ್‌ ಫ್ರಿ (Oppo Watch Free) ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿ ಗ್ರಾಹಕರ ಗಮನ ಸೆಳೆದಿದೆ.

ಭಾರತಕ್ಕೆ ಲಗ್ಗೆ ಇಟ್ಟ 'ಒಪ್ಪೋ ವಾಚ್‌ ಫ್ರಿ' ಸ್ಮಾರ್ಟ್‌ವಾಚ್‌!..ಫೀಚರ್ಸ್ ಏನು?

ಹೌದು, ಒಪ್ಪೋ ನೂತನವಾಗಿ ಭಾರತದಲ್ಲಿ ಒಪ್ಪೋ ವಾಚ್‌ ಫ್ರಿ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ಕಂಪನಿಯು ಕಳೆದ ವರ್ಷದಲ್ಲಿ ಮೊದಲ ಬಾರಿಗೆ ಅನಾವರಣ ಮಾಡಿತ್ತು. ಈ ಸ್ಮಾರ್ಟ್‌ವಾಚ್‌ ಫಿಟ್ನೆಸ್‌ ಬ್ಯಾಂಡ್‌ನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ನಿಮಗೆ ಹೃದಯ ಬಡಿತದ ಮಾನಿಟರಿಂಗ್, ರಕ್ತದ ಆಮ್ಲಜನಕದ ಮಟ್ಟ ಮಾನಿಟರಿಂಗ್, ನಿದ್ರೆ ಟ್ರ್ಯಾಕಿಂಗ್, ಒಪ್ಪೋ ಫೋನ್‌ಗಳೊಂದಿಗೆ ಸ್ಮಾರ್ಟ್ ಲಿಂಕ್ ಕಾರ್ಯಗಳನ್ನು ಒದಗಿಸುತ್ತದೆ.
ಭಾರತಕ್ಕೆ ಲಗ್ಗೆ ಇಟ್ಟ 'ಒಪ್ಪೋ ವಾಚ್‌ ಫ್ರಿ' ಸ್ಮಾರ್ಟ್‌ವಾಚ್‌!..ಫೀಚರ್ಸ್ ಏನು?

ಒಪ್ಪೋ ವಾಚ್ ಫ್ರೀ ಸ್ಮಾರ್ಟ್‌ವಾಚ್‌ನ ಲುಕ್ ಪಡೆದಿದ್ದರೂ, ಇದು ಫಿಟ್‌ನೆಸ್ ಬ್ಯಾಂಡ್ ಆಗಿದ. ಇದು 280 x 456 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 1.64 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು 326ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಹಾಗೆಯೇ ಈ ಡಿವೈಸ್ 46x29.7x10.6ಎಂಎಂ ಸುತ್ತಳತೆ ಪಡೆದಿದ್ದು, 32.6 ಗ್ರಾಂ ತೂಕವನ್ನು ಪಡೆದುಕೊಂಡಿದೆ.

ಇನ್ನು ಈ ಸ್ಮಾರ್ಟ್‌ವಾಚ್ 230mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಲೈಟ್ ಬ್ಯಾಟರಿ ಲೈಫ್ ಮೋಡ್‌ನಲ್ಲಿ 14 ದಿನಗಳ ರನ್‌ಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಒಪ್ಪೋ ವಾಚ್ ಫ್ರೀ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಅನ್ನು ಬಳಸುತ್ತದೆ. ಜೊತೆಗೆ 5ATM ನೀರಿನ ಪ್ರತಿರೋಧ ಆಯ್ಕೆ ಸಹ ಹೊಂದಿದೆ. ಇದರೊಂದಿಗೆ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಪಡೆಯುತ್ತೀರಿ.

ಭಾರತಕ್ಕೆ ಲಗ್ಗೆ ಇಟ್ಟ 'ಒಪ್ಪೋ ವಾಚ್‌ ಫ್ರಿ' ಸ್ಮಾರ್ಟ್‌ವಾಚ್‌!..ಫೀಚರ್ಸ್ ಏನು?

ಹಾಗೆಯೇ ಈ ಸ್ಮಾರ್ಟ್‌ವಾಚ್ ಫಿಟ್‌ನೆಸ್ ಟ್ರ್ಯಾಕಿಂಗ್‌ನ ಭಾಗದಲ್ಲಿ, ಬ್ಯಾಡ್ಮಿಂಟನ್, ಕ್ರಿಕೆಟ್ ಮತ್ತು ಸ್ಕೀಯಿಂಗ್ ಸೇರಿದಂತೆ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಹೊಂದಿದೆ. ಜೊತೆಗೆ ಈ ವಾಚ್ ಹೃದಯ ಬಡಿತ ಸಂವೇದಕವನ್ನು ಸಹ ಹೊಂದಿದೆ ಹಾಗೂ ರಕ್ತದ ಆಮ್ಲಜನಕದ ಶುದ್ಧತ್ವ (SpO2) ಮಟ್ಟವನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ನಿದ್ರೆ ಮತ್ತು ಗೊರಕೆಯನ್ನು ಮೇಲ್ವಿಚಾರಣೆ ಮಾಡಲು ವೈಶಿಷ್ಟ್ಯಗಳಿವೆ.

ಭಾರತದಲ್ಲಿ ಒಪ್ಪೋ ವಾಚ್‌ ಫ್ರಿ ಬೆಲೆಯು 5,999ರೂ. ಆಗಿದೆ. ಈ ಸ್ಮಾರ್ಟ್ ವಾಚ್ ಸಿಂಗಲ್ ಕಲರ್ ಆಯ್ಕೆ ಪಡೆದಿದ್ದು, ಕಪ್ಪು ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ಒಪ್ಪೋ ವಾಚ್ ಫ್ರಿ ಮಾರಾಟದ ದಿನಾಂಕವನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.

ಹಾಗೆಯೇ ಈ ಕಳೆದ ವರ್ಷ ಲಾಂಚ್ ಮಾಡಿರುವ ಒಪ್ಪೋ ವಾಚ್ 41 ಎಂಎಂ ಮತ್ತು 46 ಎಂಎಂ ವೇರಿಯಂಟ್ ಆಯ್ಕೆ ಪಡೆದಿದೆ. ಅದರಲ್ಲಿ41 ಎಂಎಂ ವೇರಿಯಂಟ್ 320x360 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 301 ಪಿಪಿ ಪಿಕ್ಸೆಲ್ ಸಾಂದ್ರತೆಯೊಂದಿಗೆ 1.6 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು 46 ಎಂಎಂ ವೇರಿಯಂಟ್ 1.91 ಇಂಚಿನ ಡಿಸ್ಪ್ಲೇಯನ್ನು 402x476 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 326 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹಾಗೆಯೇ ಒಪ್ಪೊ ಈ ವಾಚ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ವೇರ್ 2500 SoC ಅನ್ನು ಒದಗಿಸಿದೆ, 41 ಎಂಎಂ ವೇರಿಯಂಟ್ ವಾಚ್‌ 300mAh ಬ್ಯಾಟರಿ ಬಾಳಿಕೆ ಪಡೆದಿದೆ. ಹಾಗೆಯೇ 46 ಎಂಎಂ ವೇರಿಯಂಟ್ ವಾಚ್ 430mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ.

Best Mobiles in India

English summary
Oppo Watch Free price in India has been set at Rs. 5,999. The smartwatch comes in a single Black colour option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+