ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಅಗತ್ಯ ಎಷ್ಟಿದೆಯೋ, ಸದ್ಯ ಮೊಬೈಲ್‌ ಆಕ್ಸಸರಿಸ್‌ಗಳು ಸಹ ಅಷ್ಟೇ ಮುಖ್ಯವೆನಿಸಿವೆ. ಈ ನಿಟ್ಟಿನಲ್ಲಿ 'ಒರೈಮೊ' ಕಂಪನಿಯು ವಿಶ್ವಮಟ್ಟದಲ್ಲಿ ಸ್ಮಾರ್ಟ್ ಆಕ್ಸಸ್‌ರಿಸಿಗಳಿಂದ ಗುರುತಿಸಿಕೊಂಡಿದೆ. ಇದೀಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಪವರ್‌ಬ್ಯಾಂಕ್ ಡಿವೈಸ್‌ ಲಾಂಚ್‌ ಮಾಡಿದ್ದು, ಈ ಪವರ್‌ಬ್ಯಾಂಕ್ ಸ್ಲಿಮ್‌ ಡಿಸೈನ್‌ನಿಂದ ಗ್ರಾಹಕರ ಗಮನ ಸೆಳೆದಿದೆ.

ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

ಹೌದು, ಒರೈಮೊ ಕಂಪನಿಯು ಹೊಸದಾಗಿ 'ಟೋಸ್ಟ್‌ 10' ಹೆಸರಿನ 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಡಿವೈಸ್‌ ತೆಳ್ಳನೆಯ ರಚನೆಯನ್ನು ಹೊಂದಿದ್ದು, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಪಡೆದುಕೊಂಡಿದೆ. ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಸ್ಕ್ರಾಚ್‌ ತಡೆಯಲು 3D ಹೆಕ್ಸಾಗಾನ್ (hexagon) ರಚನೆಯನ್ನು ನೀಡಲಾಗಿದೆ.

ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ? ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

ಬ್ಯಾಟರಿಯ ಉಳಿಕೆಯನ್ನು ತಿಳಿಸಲು ಎಲ್‌ಇಡಿ ಲೈಟ್‌ ಇಂಡಿಕೇಟರ್‌ ಸೌಲಭ್ಯವನ್ನು ಅಳವಡಿಸಲಾಗಿದ್ದು, ಓವರ್‌ ವೋಲ್ಟೇಜ್ ಪ್ರೊಟೆಕ್ಷನ್‌, ಶಾರ್ಟ್‌ ಸರ್ಕ್ಯೂಟ್‌ ಪ್ರೊಟೆಕ್ಷನ್‌ ಮತ್ತು ಟೆಂಪ್ರೆಚರ್‌ ರೆಸಿಸ್ಟನ್ಸ್‌ ಸೌಲಭ್ಯಗಳನ್ನು ಆಂತರಿಕವಾಗಿ ನೀಡಲಾಗಿದೆ. ಹಾಗಾದರೇ ಒರೈಮೊ 'ಟೋಸ್ಟ್‌ 10' ಪವರ್‌ಬ್ಯಾಂಕ್‌ನ ಬೆಲೆ ಎಷ್ಟು ಮತ್ತು ಈ ಪವರ್‌ಬ್ಯಾಂಕ್‌ಗೆ ಸ್ಪರ್ಧೆ ನೀಡುವ ಇತರೆ 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಕಡಿಮೆ ಬೆಲೆಗೆ ಲಾಂಚ್‌ ಆಯ್ತು 49 ಇಂಚಿನ 'ಶಿಂಕೊ' ಟಿವಿ!.ಕ್ರಿಕೆಟ್‌ ಮೋಡ್‌ ಇದೆ!ಓದಿರಿ : ಕಡಿಮೆ ಬೆಲೆಗೆ ಲಾಂಚ್‌ ಆಯ್ತು 49 ಇಂಚಿನ 'ಶಿಂಕೊ' ಟಿವಿ!.ಕ್ರಿಕೆಟ್‌ ಮೋಡ್‌ ಇದೆ!

ಒರೈಮೊ ಟೋಸ್ಟ್‌10 ಪವರ್‌ಬ್ಯಾಂಕ್

ಒರೈಮೊ ಟೋಸ್ಟ್‌10 ಪವರ್‌ಬ್ಯಾಂಕ್

ಒರೈಮೊ ಕಂಪನಿಯ ಟೋಸ್ಟ್‌10 ಪವರ್‌ಬ್ಯಾಂಕ್‌ ಇದೀಗ ಲಾಂಚ್‌ ಆಗಿದ್ದು, ಈ ಡಿವೈಸ್‌ ಬೆಲೆಯು 1,099ರೂ.ಗಳು ಆಗಿದೆ. ಅಮೆಜಾನ್ ಇಂಡಿಯಾ ಇ ಕಾಮರ್ಸ್‌ ಜಾಲತಾಣದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಸ್ಲಿಮ್‌ ಡಿಸೈನ್, ಸ್ಕ್ರಾಚ್‌ ಮುಕ್ತ ರಚನೆ, ಶಾರ್ಟ್‌ ಸರ್ಕ್ಯೂಟ್‌ ಪ್ರೊಟೆಕ್ಷನ್, ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆ ಮತ್ತು ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವುದು ಈ ಪವರ್‌ಬ್ಯಾಂಕ್‌ನ ಹೈಲೈಟ್ಸ್‌ಗಳಾಗಿವೆ.

ಶಿಯೋಮಿ 10,000mAh ಪವರ್‌ಬ್ಯಾಂಕ್

ಶಿಯೋಮಿ 10,000mAh ಪವರ್‌ಬ್ಯಾಂಕ್

ಶಿಯೋಮಿ ಕಂಪನಿಯ ಸ್ಮಾರ್ಟ್‌ ಆಕ್ಸಸ್‌ರಿಸಗಳು ಈಗಾಗಲೇ ಜನಪ್ರಿಯವಾಗಿದ್ದು, ಅವುಗಳಲ್ಲಿ ಮಿ 10,000mAh ಪವರ್‌ಬ್ಯಾಂಕ್ ಒರೈಮೊ ಪವರ್‌ಬ್ಯಾಂಕ್‌ಗೆ ಸ್ಪರ್ಧಿ ಎನಿಸಲಿದೆ. ಈ ಡಿವೈಸ್‌ ಹಗುರವಾದ ರಚನೆ ಮತ್ತು ಅಲ್ಟ್ರಾ ಸ್ಲಿಮ್ ಡಿಸೈನ್‌ ಅನ್ನು ಹೊಂದಿದ್ದು, ಹಾಗೆಯೇ ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆ ಮತ್ತು ಫಾಸ್ಟ್ ಚಾರ್ಜಿಂಗ್‌ನ ಬೆಂಬಲವನ್ನು ಪಡೆದಿದೆ. ಇದರ ಬೆಲೆಯು 899ರೂ.ಗಳು ಆಗಿದ್ದು, ಕಂಪನಿಯ ವೆಬ್‌ತಾಣ ಮತ್ತು ಇ ಕಾಮರ್ಸ್‌ ತಾಣಗಳಲ್ಲಿ ಲಭ್ಯ.

ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ! ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

ಸಿಸ್ಕಾ 11,00mAh ಪವರ್‌ಬ್ಯಾಂಕ್

ಸಿಸ್ಕಾ 11,00mAh ಪವರ್‌ಬ್ಯಾಂಕ್

ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಗುರುತಿಸಿಕೊಂಡಿರುವ ಸಿಸ್ಕಾ ಕಂಪನಿಯು ಸ್ಮಾರ್ಟ್‌ ಆಕ್ಸಸ್‌ರಿಗಳಿಂದಲೂ ಸುದ್ದಿಯಾಗಿದೆ. ಸಿಸ್ಕಾ 11,00mAh ಪವರ್‌ಬ್ಯಾಂಕ್ ಸಹ ಒರೈಮೊ ಪವರ್‌ಬ್ಯಾಂಕ್‌ಗೆ ಎದುರಾಳಿ ಎನಿಸುವ ಫೀಚರ್ಸ್‌ಗಳನ್ನು ಹೊಂದಿದೆ. ಈ ಡಿವೈಸ್‌ ಸಹ ಶಾರ್ಟ್‌ ಸರ್ಕ್ಯೂಟ್‌ ಪ್ರೊಟೆಕ್ಷನ್, ಓವರ್‌ಚಾರ್ಜಿಂಗ್‌ನಿಂದ ರಕ್ಷಣೆ, ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆ, ಹಗುರವಾದ ರಚನೆಯನ್ನು ಹೊಂದಿದೆ. ಹಾಗೂ ಇದರ ಬೆಲೆಯು 699ರೂ.ಗಳು.

ಒರೈಮೊ ಕಂಪನಿಯ ಉತ್ಪನ್ನಗಳು

ಒರೈಮೊ ಕಂಪನಿಯ ಉತ್ಪನ್ನಗಳು

ಒರೈಮೊ ಕಂಪನಿಯು ಪವರ್‌ಬ್ಯಾಂಕ್, ಹೆಡ್‌ಫೋನ್, ಇಯರ್‌ಫೋನ್, ಬ್ಲೂಟೂತ್ ಹೆಡ್‌ಫೋನ್, ವಾಯರ್‌ಲೆಸ್‌ ಇಯರ್‌ಫೋನ್, ಟ್ರೂ-ಇಯರ್‌ ಬಡ್ಸ್‌, ಪೋರ್ಟೆಬಲ್‌ ಸ್ಪೀಕರ್ಸ್‌, ಗೇಮಿಂಗ್ ಮೈಕ್ರೋ ಕೇಬಲ್, ಕಾರ ಚಾರ್ಜರ್‌, ಫಾಸ್ಟ್‌ ಚಾರ್ಜಿಂಗ್ ಕೇಬಲ್ಸ್, ಸ್ಮಾರ್ಟ್‌ ಫಿಟ್‌ಬ್ಯಾಂಡ್, ಮೈಕ್ರೋ ಎಸ್‌ಡಿ ಕಾರ್ಡ್‌, ಫ್ಲ್ಯಾಶ್‌ ಡ್ರೈವ್‌, ಸೆಲ್ಫಿ ಲೈಟ್‌, ಸೆಲ್ಫಿ ಸ್ಟಿಕ್‌, ಸೇರಿದಂತೆ ಇನ್ನು ಹಲವಾರು ಸ್ಮಾರ್ಟ್‌ ಆಕ್ಸಸ್‌ರಿಸಗಳನ್ನು ಹೊಂದಿದೆ.

ಓದಿರಿ : ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್‌ ನೆರವಿನಿಂದ ಪತ್ತೆ!ಓದಿರಿ : ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್‌ ನೆರವಿನಿಂದ ಪತ್ತೆ!

Best Mobiles in India

English summary
The new Oraimo Toast 10 power bank 10,000mAh is available to purchase from Amazon India for Rs 1,099. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X