Home
ಸುದ್ದಿಜಾಲ

ಲ್ಯಾಪ್‌ಟಾಪ್‌ಗಳು, ಪಿಸಿ, ಟ್ಯಾಬ್ಲೆಟ್‌ಗಳ ಆಮದು ನಿರ್ಬಂಧಕ್ಕೆ ಅ.31ರ ವರೆಗೆ ತಡೆ! ನಿಟ್ಟುಸಿರು ಬಿಟ್ಟ ಕಂಪೆನಿಗಳು!

ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ(Laptops, tablets, personal computers) ಆಮದುಗಳ ಸಂಬಂಧ ಜಾರಿಗೊಳಿಸಲಾಗಿದ್ದ ಆದೇಶ ಇಡೀ ಟೆಕ್‌ವಲಯವೇ ತಲ್ಲಣವಾಗುವಂತೆ ಮಾಡಿತ್ತು. ಅದರಲ್ಲೂ ಚೀನಾಗೆ ಇದೊಂದು ದೊಡ್ಡ ಹೊಡೆತವೂ ಆಗಿತ್ತು. ಆದರೆ, ಈಗ ಮತ್ತೇ ಈ ವಿಷಯದಲ್ಲಿ ಹೊಸ ಸುದ್ದಿ ತಿಳಿದುಬಂದಿದೆ.

ಹೌದು, ಲ್ಯಾಪ್‌ಟಾಪ್‌ಗಳು, ಪಿಸಿಗಳು ಮತ್ತು ಟ್ಯಾಬ್ಲೆಟ್‌ಗಳ ಆಮದು ನಿರ್ಬಂಧಗಳನ್ನು ಕೇಂದ್ರವು ಅಕ್ಟೋಬರ್ 31 ರವರೆಗೆ ತಡೆಹಿಡಿದಿದೆ. ಈ ಸಂಬಂಧ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಮಾಹಿತಿ ನೀಡಿದೆ. ಆದರೂ ಸಹ ನಿರ್ಬಂಧಿತ ಆಮದುಗಳಿಗೆ ಮಾನ್ಯವಾದ ಪರವಾನಗಿಯು ನವೆಂಬರ್ 1 ರಿಂದ ಜಾರಿಗೆ ಬರುವಂತೆ ಮಾಡಲಾಗುವುದು ಎಂದು DGFT ತಿಳಿಸಿದೆ. ಹಾಗಿದ್ರೆ ಯಾಕೆ ಈ ದಿಢೀರ್‌ ಬದಲಾವಣೆ?, ಸರ್ಕಾರದ ಮುಂದಿನ ನಡೆ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಲ್ಯಾಪ್‌ಟಾಪ್‌ಗಳು, ಪಿಸಿ, ಟ್ಯಾಬ್ಲೆಟ್‌ಗಳ ಆಮದು ನಿರ್ಬಂಧಕ್ಕೆ ಅ.31ರ ವರೆಗೆ ತಡೆ!

ಆಮದು ನಿರ್ಬಂಧ ಹೇರಿದ್ದ ಸರ್ಕಾರ: ಕೆಲವು ದಿನಗಳ ಹಿಂದೆ ತಕ್ಷಣವೇ ಜಾರಿಗೆ ಬರುವಂತೆ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದುಗಳ ಮೇಲೆ ಕೇಂದ್ರವು ನಿರ್ಬಂಧ ವಿಧಿಸಿತ್ತು. ನಿರ್ಬಂಧಿತ ಆಮದುಗಳಿಗೆ ಪರವಾನಗಿ ಇಲ್ಲದೆ ಆಮದು ಸರಕುಗಳನ್ನು ಅಕ್ಟೋಬರ್ 31 ರವರೆಗೆ ತೆರವುಗೊಳಿಸಬಹುದು. ಆದರೆ, ನವೆಂಬರ್ 1 ರಿಂದ ಜಾರಿಗೆ ಬರುವಂತೆ ಆಮದು ಸರಕುಗಳ ಕ್ಲಿಯರೆನ್ಸ್‌ಗಾಗಿ ನಿರ್ಬಂಧಿತ ಆಮದುಗಳಿಗೆ(imports) ಮಾನ್ಯವಾದ ಪರವಾನಗಿ ಅಗತ್ಯವಿದೆ ಎಂದು ಭಾರತ ಸರ್ಕಾರದ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ.

ಈ ಸಂಬಂಧ ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar), ಹೊಸ ನಿಯಮಗಳ ರೋಲ್‌ಔಟ್‌ಗೆ ಮೊದಲು ಪರಿವರ್ತನೆಯ ಅವಧಿ ಇರುತ್ತದೆ ಎಂದಿದ್ದಾರೆ. ಈ ಮೂಲಕ ಲ್ಯಾಪ್‌ಟಾಪ್‌ಗಳು ಮತ್ತು ಇತರ ಡಿವೈಸ್‌ಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಕಂಪನಿಗಳಿಗೆ ಸರ್ಕಾರವು ಹೆಚ್ಚಿನ ಸಮಯವನ್ನು ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಹಲವಾರು ಕಂಪೆನಿಗಳು ನಿಟ್ಟುಸಿರು ಬಿಡುವಂತಾಗಿದೆ.

ಇದರೊಂದಿಗೆ ವಿಶ್ವಾಸಾರ್ಹ ಹಾರ್ಡ್‌ವೇರ್ ಮತ್ತು ಸಿಸ್ಟಮ್‌ಗಳನ್ನು ಖಚಿತಪಡಿಸಿಕೊಳ್ಳುವುದು, ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಈ ವರ್ಗದ ಉತ್ಪನ್ನಗಳ ದೇಶೀಯ ಎಂಎಫ್‌ಜಿಯನ್ನು ಹೆಚ್ಚಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಇದು ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಆಮದುಗಳನ್ನು ನಿಯಂತ್ರಿಸುತ್ತದೆ ಹಾಗೂ ಭಾರತದ ಟೆಕ್ ಪರಿಸರ ವ್ಯವಸ್ಥೆಯು ಆಮದು ಮಾಡಿಕೊಳ್ಳುವ ಅಥವಾ ದೇಶೀಯವಾಗಿ ತಯಾರಿಸಿದ ವಿಶ್ವಾಸಾರ್ಹ ಉತ್ಪನ್ನಗಳನ್ನು ಮಾತ್ರ ಬಳಕೆ ಮಾಡುವಂತೆ ಮಾಡಲಾಗುತ್ತದೆ ಎಂದು ಚಂದ್ರಶೇಖರ್ ಟ್ವೀಟ್‌ನಲ್ಲಿ ಸ್ಪಷ್ಟನೆ ಸಹ ನೀಡಿದ್ದಾರೆ.

ಅದರಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಮಾನದಂಡ ಮತ್ತು ಮೌಲ್ಯಮಾಪನ, ದುರಸ್ತಿ ಮತ್ತು ಮರು-ರಫ್ತು ಮತ್ತು ಉತ್ಪನ್ನ ಅಭಿವೃದ್ಧಿಯ ಉದ್ದೇಶಕ್ಕಾಗಿ ಪ್ರತಿ ರವಾನೆಗೆ 20 ವಸ್ತುಗಳಿಗೆ ಮಾತ್ರ ಆಮದು ಪರವಾನಗಿಯಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದ್ದು, ಈ ಕೆಲಸವನ್ನು ಪೂರ್ಣಗೊಳಿಸಿದ ನಂತರ ಉತ್ಪನ್ನಗಳನ್ನು ಮರು-ರಫ್ತು ಮಾಡಬೇಕು ಆಗದಿದ್ದಲ್ಲಿ ನಾಶಪಡಿಸಬೇಕು. ಆದರೆ, ಯಾವುದೇ ಕಾರಣಕ್ಕೂ ತಯಾರಕರು ಆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದೆ.

ಲ್ಯಾಪ್‌ಟಾಪ್‌ಗಳು, ಪಿಸಿ, ಟ್ಯಾಬ್ಲೆಟ್‌ಗಳ ಆಮದು ನಿರ್ಬಂಧಕ್ಕೆ ಅ.31ರ ವರೆಗೆ ತಡೆ!

ಇದಲ್ಲದೆ, DGFT ಕಂಪನಿಗಳು/ವ್ಯಾಪಾರಿಗಳು ಪರವಾನಗಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾದ ಪೋರ್ಟಲ್ ಅನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದರೆ 1-2 ದಿನಗಳಲ್ಲಿ DGFT ಪರವಾನಗಿ ಲಭ್ಯವಾಗುತ್ತದೆ ಎಂದು ತಿಳಿದುಬಂದಿದ್ದು, ಸಾರಿಗೆಯಲ್ಲಿ ಸಾಗಣೆಗಳ ಕ್ಲಿಯರೆನ್ಸ್ ಯಾವುದಾದರೂ ಇದ್ದರೆ, ಸಚಿವಾಲಯವು ಉದ್ಯಮಕ್ಕೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ.

ಉಳಿದಂತೆ ಕಂಪನಿಗಳು ಅಥವಾ ವ್ಯಾಪಾರಿಗಳು ಪರವಾನಗಿ ಪಡೆದ ನಂತರ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳಂತಹ ಐಟಿ ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಲು ಅರ್ಹರಾಗುತ್ತಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಆಮದಿಗೆ ಯಾವುದೇ ನಿಷೇಧವಿಲ್ಲ ಎಂದು ತಿಳಿಸಲಾಗಿದೆ.

Best Mobiles in India

English summary
The Center has hold the import restrictions on laptops, PCs and tablets till October 31. Directorate General of Foreign Trade (DGFT) has informed in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+