'ಹೋಮ್ ಡೆಲಿವರಿ ಚಾನೆಲ್' ಆರಂಭಿಸಿ ಸಿಹಿಸುದ್ದಿ ನೀಡಿದ ಜಿಯೋ!
ಭಾರತೀಯರು ಡಿಜಿಟಲ್ ಜೀವನವನ್ನು ತಮ್ಮ ಮನೆಗಳಿಂದಲೇ ಪ್ರಾರಂಭಿಸುವ ಅನುಕೂಲವನ್ನು ಮಾಡಿಕೊಡುವ ಸಲುವಾಗಿ 'ರಿಲಯನ್ಸ್ ಜಿಯೋ' ಮತ್ತೊಂದು ಸಿಹಿಸುದ್ದಿ ನೀಡಿದೆ. ಜಿಯೋ ಹೋಮ್ ಡೆಲಿವರಿ ಚಾನೆಲ್ ಆರಂಭಿಸಿರುವ ಜಿಯೋ ಸಂಸ್ಥೆ, ಕರ್ನಾಟಕದಲ್ಲಿ ಜಿಯೋ ಸಿಮ್‌ನ ಹೋಮ್ ಡೆಲಿವರಿಗಾಗಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಸಾಗರ ಮತ್ತು ಮೈಸೂರು ನಗರಗಳನ್ನು ಆಯ್ದುಕೊಂಡು ಹೊಸ ಸೇವೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದೆ.
ಹೌದು, ಜಿಯೋ ಹೋಮ್ ಡೆಲಿವರಿ ಚಾನೆಲ್ ಆರಂಭಿಸಿರುವ ಜಿಯೋ, ಗ್ರಾಹಕರು https://www.jio.com/en-in/jio-home-delivery-book-appointment.html ಜಾಲತಾಣಕ್ಕೆ ಭೇಟಿಕೊಡುವ ಮೂಲಕ ಜಿಯೋ ಸಿಮ್ ಅನ್ನು ಉಚಿತವಾಗಿ ಮನೆಬಾಗಿಲಿಗೆ ಡೆಲಿವರಿ ಪಡೆಯಬಹುದು ಎಂದು ತಿಳಿಸಿದೆ. ಅಥವಾ ಗ್ರಾಹಕರು ಶುಲ್ಕರಹಿತ ಸಂಖ್ಯೆ 1800 889 9999ಕ್ಕೆ ಕರೆಮಾಡಿ ಸಿಮ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿ ನೀಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೀಗೆ ಜಿಯೋ ಸಿಮ್ ಬುಕ್ ಮಾಡಿದರೆ, ಆನಂತರದಲ್ಲಿ ಗ್ರಾಹಕರನ್ನು ಸಂಪರ್ಕಿಸುವ ಜಿಯೋ ಮಾರಾಟ ಹಾಗೂ ಸೇವಾ ತಂಡ ಸಿಮ್ ಅನ್ನು ಅವರ ಮನೆ ಬಾಗಿಲಿಗೇ ತಲುಪಿಸಲಿದೆ. ಗ್ರಾಹಕರು ಕೇವಲ ಕಸ್ಟಮರ್ ಅಕ್ವಿಸಿಶನ್ ಫಾರ್ಮ್ಭರ್ತಿಮಾಡುವ ಜೊತೆಗೆ ಆಕ್ಟಿವೇಶನ್ ಪ್ರಕ್ರಿಯೆಗೆ ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನೂ ನೀಡಿ ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಲಭ್ಯವಿರುವ ಟ್ಯಾರಿಫ್ ಪ್ಲಾನ್‌ಗಳ ಪೈಕಿ ಸರಿಹೊಂದುವ ಯೋಜನೆಯನ್ನು ಗ್ರಾಹಕರು ಆಯ್ದುಕೊಳ್ಳಬಹುದು.
ಜಿಯೋ ಸೇವಾ ಗ್ರಾಹಕ ತಂಡವು ಗ್ರಾಹಕರ ಸೂಕ್ತ ಪರಿಶೀಲನೆ ನಡೆಸಿದ ನಂತರ ಸಿಮ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಇದಾಗ ನಂತರ ಚಂದಾದಾರರು ಜಿಯೋ ಡಿಜಿಟಲ್ ಜೀವನದ ಅನುಕೂಲಗಳನ್ನು ಪಡೆದುಕೊಳ್ಳಬಹುದು. ಅಪರಿಮಿತ ವಾಯ್ಸ್ ಹಾಗೂ ಡೇಟಾ ಪ್ರಯೋಜನ, ವೀಡಿಯೋ ಕಾಲಿಂಗ್, ಮೆಸೇಜಿಂಗ್ ಹಾಗೂ ವೈವಿಧ್ಯಮಯ ಜಿಯೋ ಆಪ್‌ಗಳೂ ಸೇರಿದಂತೆ ಜಿಯೋ ಸೇವೆಗಳ ಇಡೀ ಗುಚ್ಛವನ್ನು ಚಂದಾದಾರರು ಆನಂದಿಸಬಹುದು ಎಂದು ಕಂಪೆನಿ ತಿಳಿಸಿದೆ.

ಜಿಯೋ ಸಿನೆಮಾ, ಜಿಯೋಮ್ಯೂಸಿಕ್, ಜಿಯೋಮ್ಯಾಗ್ಸ್, ಜಿಯೋನ್ಯೂಸ್, ಜಿಯೋ ಎಕ್ಸ್‌ಪ್ರೆಸ್‌ನ್ಯೂಸ್, ಜಿಯೋಡ್ರೈವ್, ಜಿಯೋಸೆಕ್ಯೂರಿಟಿ ಮತ್ತಿತರ ಆಪ್‌ಗಳು ಜಿಯೋ ಪ್ರೀಮಿಯಂ ಆಪ್‌ಗಳ ಪಟ್ಟಿಯಲ್ಲಿವೆ. ಜಿಯೋಟೀವಿಯಂತ್ರಹ ಪ್ರೀಮಿಯಂ ಸೇವೆ ಗ್ರಾಹಕರಿಗೆ ದೊರೆಯಲಿದೆ. ಜಿಯೋ ಡಿಜಿಟಲ್ ಜೀವನವನ್ನು ತಮ್ಮ ಮನೆಗಳಿಂದಲೇ ಪ್ರಾರಂಭಿಸುವ ಅನುಕೂಲವನ್ನು ಹೋಮ್ ಡೆಲಿವರಿ ಚಾನೆಲ್ ಮೂಲಕ ಭಾರತೀಯರಿಗೆ ನೀಡುತ್ತಿರುವುದು ಇಂತಹುದೇ ಒಂದು ಉಪಕ್ರಮವಾಗಿದೆ.
ಓದಿರಿ: 'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!


Click it and Unblock the Notifications








